This page has not been fully proofread.

ತಂತ್ರಸಾರಸಂಗ್ರಹ ಸಟೀಕಾ
 
ಆವರಣಪೂಜೆ, ಅನುಯಾಗ, ಪುಷ್ಪಾಂಜಲಿಹೋಮ, ತತ್ವನ್ಯಾಸ ಮಾತೃಕಾನ್ಯಾಸ,
ಕಲಶದೇವತೆಗಳು, ಅಭಿಷೇಕ-ದೀಕ್ಷಾವಿಧಿ, ಹೋಮವಿಧಿ, ಸಂಖ್ಯೆ- ಕುಂಡಲಕ್ಷಣ,
ಅಗ್ನಿಸಂಸ್ಕಾರಗಳು, ಹೋಮದ್ರವ್ಯ-ಸಮಿತ್ತು ಅವುಗಳ ಪ್ರಮಾಣ, ದಕ್ಷಿಣೆ ಇವುಗಳು.
 

 
ದೇವಾಲಯ ಪ್ರತಿಷ್ಠೆ ಪ್ರತಿಮಾಲಕ್ಷಣ ಪ್ರತಿಮಾ ನಿರ್ಮಾಣವಿಧಿ, ಶಿಲೆಯ
ಪರೀಕ್ಷೆ, ಸ್ತ್ರೀಪುಂನಪುಂಸಕಶಿಲೆಗಳು, ದೇವಾಲಯನಿರ್ಮಾಣಕ್ಕೆ ಯೋಗ್ಯಸ್ಥಳ,
ಭೂಸಂಶೋಧನೆ, ದೇವಾಲಯನಿರ್ಮಾಣರೀತಿ, ವಿಮಾನಲಕ್ಷಣ ಪ್ರಾಕಾರ, ಮಂಟಪ,
ಪಿಂಡಿಕಾ, ಗಲಾದಿಪ್ರಮಾಣಗಳು, ಮಂಟಪವಿಧಿ, ವಾಸ್ತುಪೂಜೆ, ವಾಸ್ತುದೇವತೆ,
ಪ್ರಾಸಾದವಾಸ್ತುದೇವತೆಗಳು, ಮಂಡಲಗಳು, ಅಂಕುರಾರ್ಪಣ, ಅಧಿವಾಸನವಿಧಿ,
ಚಕ್ರಾಬ್ಬ ಭದ್ರಕಾದಿಲಕ್ಷಣ, ಕಲಶಸಂಖ್ಯೆ, ಅದರಲ್ಲಿ ಹಾಕಬೇಕಾದ ಔಷಧಿಗಳು,
ಕಲಶಸ್ಥಾಪನಕ್ರಮ, ಆವಾಹಿಸಬೇಕಾದ ರೂಪಗಳು, ಅಭಿಷೇಕಮಂತ್ರಗಳು, ಪ್ರತಿಷ್ಠಾಪನೆ
ಪೂಜಾದಿಗಳು, ಅನ್ನಸಂತರ್ಪಣೆ, ಉತ್ಸವವಿಧಾನ, ಅವಭತಸ್ನಾನ, ಜೀರ್ಣೋದ್ಧಾರ
ಪದ್ಧತಿ, ಸಂಪ್ರೋಕ್ಷಣ.
 
ವರಾಹಮಂತ್ರ ನೃಸಿಂಹಾದಿ ಸುಮಾರು ಎಪ್ಪತ್ತನಾಲ್ಕು ಮಂತ್ರಗಳ ಉದ್ಧಾರ,
ಧನ್ವಂತರೀ ಹೋಮ, ಹೋಮಸಂಖ್ಯೆ, ದೇವತಾತಾರತಮ್ಯ, ಬ್ರಹ್ಮಾದಿಗಳ ಗುರುತ್ವ,
ದ್ವಾದಶಗುರುಗಳು, ಸೃಷ್ಟಾದಿನ್ಯಾಸ,
ಯಮನಿಯಮನಾದಿಗಳು, ನಾಡಿಗಳು,
ವಿಶೇಷನಾಡಿಗಳು, ಭಕ್ತಿಯ ಮಹಿಮೆ ಇತ್ಯಾದಿ ವಿಷಯಗಳು ತಂತ್ರಗಳ ವ್ಯಾಪ್ತಿಯಲ್ಲಿ
ಬಂದಿರುತ್ತವೆ.
 
ಇದರಿಂದಾಗಿ ವಿಪುಲವಾದ ತಾಂತ್ರಿಕವಸ್ತುವಿಷಯವನ್ನು ತನ್ನೊಡಲಲ್ಲಿ
ಇಟ್ಟುಕೊಂಡಿದ್ದು, ತಂತ್ರ ಎಂಬ ತಂತ್ರಶಬ್ದದ ಅರ್ಥವು ಇಲ್ಲಿ ಪೂರ್ಣವಾಗಿ ಮೈ
 
ತಳೆದಂತಿದೆ.
 
ತತ್ವಮಂತ್ರಸಮನ್ವಿತಾನ್ ಎಂಬುದು ತಂತ್ರದ ಇನ್ನೊಂದು ಮುಖ. ತತ್ವಜ್ಞಾನವನ್ನು
ಹಾಗೂ ಮಂತ್ರಜ್ಞಾನವನ್ನು ನೀಡುವಂತಹುದು ತಂತ್ರ.
 
ವಸ್ತುತಃ ವಿಚಾರಮಾಡಿದರೆ ತತ್ವಜ್ಞಾನವನ್ನು ಪಡೆಯುವುದೇ ತಂತ್ರಶಾಸ್ತ್ರದ
ಮುಖ್ಯಗುರಿ. ತಂತ್ರಶಾಸ್ತ್ರವೂ ತತ್ತ್ವಜ್ಞಾನವೇ.
 
ಮಂತ್ರ, ಪೂಜೆ, ಹೋಮಹವನಾದಿಗಳು, ವ್ರತೋಪವಾಸಗಳು ತಂತ್ರಶಾಸ್ತ್ರದಲ್ಲಿ
ಅಡಕವಾಗಿದ್ದು ತತ್ವಜ್ಞಾನೇಚ್ಚುಗಳಿಗೆ ಇವು ಸಾಧನಗಳೆನಿಸಿವೆ.