This page has not been fully proofread.

ತೃತೀಯೋsಧ್ಯಾಯಃ
 
ತೃತೀಯೋsಧ್ಯಾಯಃ
 
ಪ್ರತಿಮಾಲಕ್ಷಣ
 
ಪ್ರತಿಷ್ಠಾಂ ಕಾರಯನ್ ವಿಷ್ಟೋಃ ಕುರ್ಯಾತ್ ಸುಪ್ರತಿಮಾಂ ಬುಧಃ ।
ಲೋಹೈರ್ವಾ ಶಿಲಯಾ ದಾರ್ವಾ ಮೃದಾ ವಾ5ಪಿ ಯಥಾಕ್ರಮಮ್ ॥1
 
75
 
ಅರ್ಥ - ವಿಷ್ಣುವಿನ ಪ್ರತಿಷ್ಠೆಯನ್ನು ಮಾಡಿಸುವ ಭಕ್ತನು ಮೊದಲು ಲೋಹ-
ಗಳಿಂದಾಗಲೀ, ಶಿಲೆಯಿಂದಾಗಲೀ, ಮರದಿಂದಾಗಲೀ, ಅಥವಾ ಮಣ್ಣಿನಿಂದಾಗಲೀ
ಲಕ್ಷಣಯುಕ್ತವಾದ ಪ್ರತಿಮೆಯನ್ನು ಮಾಡಿಸಬೇಕು.
 
1. ವಿಶೇಷಾಂಶ -
 
'ಪೂಜ್ಯಶ್ಚ ಭಗವಾನ್ ನಿತ್ಯಂ' ಎಂಬುದಾಗಿ ವಿಷ್ಣುವನ್ನು ಪೂಜಿಸಬೇಕೆಂದು ತಿಳಿಸಲಾಯಿತು.
ಅಪ್ರಬುದ್ಧರೂ, ಅಜ್ಞಾನಿಗಳೂ ಆದ ನಮ್ಮಂತಹವರಿಗೆ ಪ್ರತಿಮಾಪೂಜೆ' ವಿಹಿತವಾಗಿದೆ.
'ಪ್ರತಿಮಾಸು ಅಪ್ರಬುದ್ಧಾನಾಮ್' ಎಂದು ಹೇಳಲ್ಪಟ್ಟಿದೆ. ಆದರೆ ಶಾಸ್ರೋಕ್ತರೀತಿಯಲ್ಲಿ ಪ್ರತಿಷ್ಠೆ
ಮಾಡದ ಹಾಗೂ ಅಗ್ನಿ...…...... ಆಗದ ಪ್ರತಿಮೆಯನ್ನು ಪೂಜಿಸಲು ನಿಷೇಧವೂ ಇದೆ.
ಅಪ್ರತಿಷ್ಠಿತಬಿಂಬಸ್ಯ ಪೂಜನಂ ಸಿದ್ಧಿಹಾನಿಕೃತ್
 
ಆದುದರಿಂದ ಆಚಾರ್ಯರು ಈ ಮೂರನೆಯ ಅಧ್ಯಾಯದಲ್ಲಿ ಪ್ರತಿಮಾಲಕ್ಷಣ, ಪ್ರತಿಷ್ಠಾ
ವಿಧಾನ, ಪ್ರತಿಮಾನಿರ್ಮಾಣವಿಧಿ, ತಿಮಾಸ್ಥಾಪನೆಗಾಗಿ ದೇವಾಲಯನಿರ್ಮಾಣವಿಧಿ,
 
ಜೀರ್ಣದೇವಾಲಯದ ಉದ್ಧಾರಾದಿಗಳನ್ನು ನಿರೂಪಿಸುತ್ತಿದ್ದಾರೆ.
 
ಪ್ರತಿಮೆಯನ್ನು ಸುವರ್ಣ, ರಜತ, ತಾಮ್ರ ಮೊದಲಾದ ಲೋಹಗಳಿಂದಲೂ; ಶಿಲೆ, ಮರ,
ಮಣ್ಣುಗಳಿಂದಲೂ ಮಾಡಿಸಬಹುದು. (ಪ್ರತಿಮೆಗಾಗಿ ಬಳಸುವ ಪದಾರ್ಥಕ್ಕನುಗುಣವಾಗಿ
ಫಲಗಳನ್ನೂ ಹೇಳಲಾಗಿದೆ. ತದ್ಯಥಾ?)
 
ಸುವರ್ಣಪ್ರತಿಮ – ಸರ್ವಸಂಪತ್ತನ್ನು ನೀಡುತ್ತದೆ.
ರಜತಪ್ರತಿಮೆ
 
-
 
- ಧನ-ಪಶು-ವಿಜಯ-ವಿಜ್ಞಾನಗಳನ್ನು ನೀಡುತ್ತದೆ.
ತಾಮ್ರಪ್ರತಿಮೆ – ಧರ್ಮ, ಬಹುಸೌಖ್ಯ ವೃದ್ಧಿಯನ್ನು ನೀಡುತ್ತದೆ.
ಶಿಲಾಪ್ರತಿಮೆ - ಖೇದವನ್ನು ಪರಿಹರಿಸುತ್ತದೆ.
ಮರದ ಪ್ರತಿಮೆ - ತೇಜಸ್ಸನ್ನು ವೃದ್ಧಿಮಾಡುತ್ತದೆ.
ಮಣ್ಣಿನ ಪ್ರತಿಮೆ - ನಿರಂತರಶುಭವನ್ನು ನೀಡುತ್ತದೆ.
ಹಿತ್ತಾಳೆಯ ಪ್ರತಿಮೆ - ಶತ್ರುನಾಶಕವಾಗಿದೆ.
'ಹಿರಣ್ಮಯೀ ಪ್ರತಿಕೃತಿಃ ಸರ್ವಸಂಪತ್ಕರೀ ಭವೇತ್ ।
ವಿತ್ತಂ ಪಶೂಂಶ್ಚ ವಿಜಯಂ ವಿಜ್ಞಾನಂ ರಾಜತೀ ಫಲಮ್ ॥
 
1