This page has been fully proofread once and needs a second look.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 2
 
ಆದರೆ ದೀಕ್ಷಾಹೋಮದಲ್ಲಿ ತುಪ್ಪದಿಂದಲೇ ಆಹುತಿಗಳನ್ನು ನೀಡಬೇಕು. ಯಾವುದೇ
ಪೂರ್ವೋಕ್ತ ಹೋಮದ್ರವ್ಯಗಳಿಂದಲ್ಲ. ಹೋಮಮಾಡುವುದಕ್ಕಿಂತ ಮೊದಲು
ಗುರುದೇವತಾಪೂಜೆ- ಗಳನ್ನೂ, ಪುಣ್ಯಾಹ, ನಾಂದಿ, ನವಗ್ರಹಾದಿಪೂಜೆಗಳನ್ನು
 
೭೪
 

ಆಚರಿಸಬೇಕು.
 

 
ಗುರುದಕ್ಷಿಣಾ ವಿಚಾರ
 

 
ಗುರವೇ ದಕ್ಷಿಣಾಂ ದದ್ಯಾಲ್ಲಕ್ಷೇ ಲಕ್ಷೇ ಶತಂ ಸುಧೀಃ ।

ಆತ್ಮನೈವ ಕೃತೇ ಹೋಮೇ ಶಕ್ತಿತೋ ಗುರುದಕ್ಷಿಣಾಮ್ ॥24 ೨೪
 
w
 

 
ಇತಿ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯವಿರಚಿತೇ ತಂತ್ರಸಾರಸಂಗ್ರಹೇ
ದ್ವಿತೀಯೋsಧ್ಯಾಯಃ॥2
 

 
ಅರ್ಥ
 
- ಹೋಮ ಮುಗಿದ ನಂತರ ಆಚಾರ್ಯರಿಗೆ ದಕ್ಷಿಣೆ ನೀಡಬೇಕು.
ಆಚಾರ್ಯನೇ ಹೋಮ ಮಾಡಿದ್ದರೆ, ಒಂದು ಲಕ್ಷ ಹೋಮವಾಗಿದ್ದರೆ, ನೂರು
ನೂರು ಗೋವುಗಳನ್ನು ಅಥವಾ ಗೋವಿಗೆ ಪ್ರತ್ಯಾಮ್ಯಾನಾಯವಾಗಿ ದಕ್ಷಿಣೆಯನ್ನು
ನೀಡಬೇಕು. ಯಜಮಾನನು ತಾನೇ ಹೋಮ ಮಾಡಿದ್ದರೆ ಯಥಾಶಕ್ತಿ ಗುರುದಕ್ಷಿಣೆ
 
ನೀಡಬಹುದು.
 
-
 
[^1]
ಇಲ್ಲಿಗೆ ತಂತ್ರಸಾರಸಂಗ್ರಹಸಟೀಕೆಯ ಕನ್ನಡಾನುವಾದದಲ್ಲಿ

ಎರಡನೆಯ
ಅಧ್ಯಾಯವು ಮುಗಿದುದು
 
ಎರಡನೆಯ
 
.
 
 
 
[^]
1. ವಿಶೇಷಾಂಶ - ದಕ್ಷಿಣೆ ಎಂದರೆ ಹೋಮಾದಿಗಳಲ್ಲಿ ಉಂಟಾಗಬಹುದಾದ ಮಾನಸಿಕ, ಕಾಯಿಕ,
ವಾಚನಿಕ ಪಾಪಗಳಿಗೆ ಪ್ರಾಯಶ್ಚಿತ್ತವಾಗಿದೆ. ದಕ್ಷಿಣೆ ಇಲ್ಲದ ಹೋಮಾದಿಗಳು ನಿಷ್- ವೆನಿಸಿವೆ.

ಪ್ರತಿಷ್ಠಾ ದಕ್ಷಿಣಾಹೀನಾ ಯಜಮಾನಂ ಹಿನಸ್ತಿ ಹಿ
 

ದಕ್ಷಿಣೆ ಇಲ್ಲದ ಯಜ್ಞಯಾಗಾದಿಗಳು ಯಜಮಾನನಿಗೆ ಮಾರಕ ವಾಗುತ್ತವೆ.
ದಕ್ಷಿಣೆ ಎಂದರೆ 'ದಕ್ಷ ವೃದೌದ್ಧೌ' ಧಾತುಪಾಠದಂತೆ (?), ಯಜ್ಞದಲ್ಲಿ ನಡೆಯಬಹುದಾದ
ನ್ಯೂನತೆಯನ್ನು ಪರಿಹರಿಸಿ, ಪುಣ್ಯವೃದ್ಧಿಯನ್ನು ಉಂಟುಮಾಡುವುದೇ ದಕ್ಷಿಣೆ.