This page has not been fully proofread.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 2
 
ಆದರೆ ದೀಕ್ಷಾಹೋಮದಲ್ಲಿ ತುಪ್ಪದಿಂದಲೇ ಆಹುತಿಗಳನ್ನು ನೀಡಬೇಕು. ಯಾವುದೇ
ಪೂರ್ವೋಕ್ತ ಹೋಮದ್ರವ್ಯಗಳಿಂದಲ್ಲ. ಹೋಮಮಾಡುವುದಕ್ಕಿಂತ ಮೊದಲು
ಗುರುದೇವತಾಪೂಜೆಗಳನ್ನೂ, ಪುಣ್ಯಾಹ, ನಾಂದಿ, ನವಗ್ರಹಾದಿಪೂಜೆಗಳನ್ನು
 
೭೪
 
ಆಚರಿಸಬೇಕು.
 
ಗುರುದಕ್ಷಿಣಾ ವಿಚಾರ
 
ಗುರವೇ ದಕ್ಷಿಣಾಂ ದದ್ಯಾಲಕ್ಷೇ ಲಕ್ಷೇ ಶತಂ ಸುಧೀಃ ।
ಆತ್ಮನೈವ ಕೃತೇ ಹೋಮೇ ಶಕ್ತಿತೋ ಗುರುದಕ್ಷಿಣಾಮ್ ॥24॥
 
w
 
ಇತಿ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯವಿರಚಿತೇ ತಂತ್ರಸಾರಸಂಗ್ರಹೇ
ದ್ವಿತೀಯೋsಧ್ಯಾಯಃ॥2॥
 
ಅರ್ಥ
 
ಹೋಮ ಮುಗಿದ ನಂತರ ಆಚಾರ್ಯರಿಗೆ ದಕ್ಷಿಣೆ ನೀಡಬೇಕು.
ಆಚಾರ್ಯನೇ ಹೋಮ ಮಾಡಿದ್ದರೆ, ಒಂದು ಲಕ್ಷ ಹೋಮವಾಗಿದ್ದರೆ, ನೂರು
ನೂರು ಗೋವುಗಳನ್ನು ಅಥವಾ ಗೋವಿಗೆ ಪ್ರತ್ಯಾಮ್ಯಾಯವಾಗಿ ದಕ್ಷಿಣೆಯನ್ನು
ನೀಡಬೇಕು. ಯಜಮಾನನು ತಾನೇ ಹೋಮ ಮಾಡಿದ್ದರೆ ಯಥಾಶಕ್ತಿ ಗುರುದಕ್ಷಿಣೆ
 
ನೀಡಬಹುದು.
 
-
 
ಇಲ್ಲಿಗೆ ತಂತ್ರಸಾರಸಂಗ್ರಹಸಟೀಕೆಯ ಕನ್ನಡಾನುವಾದದಲ್ಲಿ
ಅಧ್ಯಾಯವು ಮುಗಿದುದು
 
ಎರಡನೆಯ
 
1. ವಿಶೇಷಾಂಶ - ದಕ್ಷಿಣೆ ಎಂದರೆ ಹೋಮಾದಿಗಳಲ್ಲಿ ಉಂಟಾಗಬಹುದಾದ ಮಾನಸಿಕ, ಕಾಯಿಕ,
ವಾಚನಿಕ ಪಾಪಗಳಿಗೆ ಪ್ರಾಯಶ್ಚಿತ್ತವಾಗಿದೆ. ದಕ್ಷಿಣೆ ಇಲ್ಲದ ಹೋಮಾದಿಗಳು ನಿಷ್ಪಲವೆನಿಸಿವೆ.
ಪ್ರತಿಷ್ಠಾ ದಕ್ಷಿಣಾಹೀನಾ ಯಜಮಾನಂ ಹಿನಸ್ತಿ ಹಿ
 
ದಕ್ಷಿಣೆ ಇಲ್ಲದ ಯಜ್ಞಯಾಗಾದಿಗಳು ಯಜಮಾನನಿಗೆ ಮಾರಕವಾಗುತ್ತವೆ.
ದಕ್ಷಿಣೆ ಎಂದರೆ 'ದಕ್ಷ ವೃದೌ' ಧಾತುಪಾಠದಂತೆ (?), ಯಜ್ಞದಲ್ಲಿ ನಡೆಯಬಹುದಾದ
ನ್ಯೂನತೆಯನ್ನು ಪರಿಹರಿಸಿ, ಪುಣ್ಯವೃದ್ಧಿಯನ್ನು ಉಂಟುಮಾಡುವುದೇ ದಕ್ಷಿಣೆ.