This page has not been fully proofread.

೭೨
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 2
 
ಅಗ್ನಿಸಂಸ್ಕಾರ
 
ತದಾತ್ಮನಿ ಹರಿಂ ಧ್ಯಾತ್ವಾ ಕುಂಡೇ ದೇವೀಂ ಶ್ರಿಯಂ ತಥಾ ।
ವಿಷ್ಣುವೀರ್ಯಾತ್ಮಕಂ ವಂ ನಿಕ್ಷಿಪೇತ್ ಪ್ರಣವೇನ ಹಿ ॥19॥
 
ಅರ್ಥ ಈ ರೀತಿ ಇರುವ ಕುಂಡದಲ್ಲಿ ಪರಮಾತ್ಮನ ಪ್ರತಿಮಾರೂಪವಾದ
ಲಕ್ಷ್ಮೀಸಹಿತನಾರಾಯಣನನ್ನು ಧ್ಯಾನಿಸುತ್ತಾ ವಿಷ್ಣುವೀರ್ಯಾತ್ಮಕವಾದ ಅಗ್ನಿಯನ್ನು
ಪ್ರತಿಷ್ಠಾಪಿಸಬೇಕು. ಅಗ್ನಿಪ್ರತಿಷ್ಠಾಪನೆಯನ್ನು 'ಓಂ ಭೂರ್ಭುವಸ್ವಃ' ಎಂಬ
ಪ್ರಣವಪೂರ್ವಕವಾಗಿ ವ್ಯಾಹೃತಿಯಿಂದ ಅಗ್ನಿಯನ್ನು ಸ್ಥಾಪಿಸಬೇಕು.
 
ಕುರ್ಯಾತ್ ಕ್ರಿಯಾಃ ಷೋಡಶ ಚ ವ್ಯಾಹೃತೀಭಿಃ ಪೃಥಕ್ ಪೃಥಕ್ ।
ವಸ್ತದಹರೇ ಪ್ರೀತಿಂ ಕುರ್ವನ್ ದ್ರವ್ರ್ಯಜೇತ್ ತತಃ ॥20॥
 
ಅರ್ಥ - ಹೀಗೆ ಸ್ಲಂಡಿಲದಲ್ಲಿ ರಮಾನಾರಾಯಣರನ್ನು ಧ್ಯಾನಿಸಿ, ನಾಲ್ಕು
ವ್ಯಾಹೃತಿಗಳಿಂದ ಪ್ರತ್ಯೇಕ ಪ್ರತ್ಯೇಕವಾಗಿ ಅಗ್ನಿಗೆ ಹದಿನಾರು ಸಂಸ್ಕಾರಸಿದ್ಧಿಗಾಗಿ
ಹೋಮಿಸಬೇಕು. ಪುಷ್ಪವನ್ನು ಸಮರ್ಪಿಸಿ ಭೂರಾದಿ ವ್ಯಾಹೃತಿದೇವತೆಗಳನ್ನು
ಧ್ಯಾನಿಸುತ್ತಾ ವ್ಯಾಹೃತಿಮಂತ್ರಗಳಿಂದ ಅಗ್ನಿಗೆ ಹದಿನಾರು ಸಂಸ್ಕಾರಗಳನ್ನು
 
ಮಾಡಬೇಕು.
 
ತುಪ್ಪವನ್ನು ಹಾಕಲು ಅನುವಾಗುವಂತೆ ಮಣ್ಣಿನಿಂದ ರಚಿತವಾದ, ಒಂದಂಗುಲ ಎತ್ತರ,
ನಾಲ್ಕಂಗುಲ ಅಗಲ, ಹನ್ನೆರಡು ಅಂಗುಲ ಉದ್ದವಿರುವ ಭಾಗವೇ ಯೋನಿ. ಇಂತಹ
ಹೋಮಕುಂಡದಲ್ಲಿ ಲಕ್ಷ್ಮಿಯೊಂದಿಗೆ ನಾರಾಯಣನು ವಿಹರಿಸುತ್ತಾನೆ. ಆ ಕಾಲದಲ್ಲಿ
ಶ್ರೀಹರಿಯು ಅಗ್ನಾತಕವಾದ ವೀರ್ಯವನ್ನು ಆ ಯೋನಿಯಲ್ಲಿಡುವನು ಎಂಬ
ಅನುಸಂಧಾನದಿಂದ ಅಗ್ನಿಯನ್ನು ಪ್ರತಿಷ್ಠಾಪಿಸಬೇಕು. ಹರಿಯು ಲಕ್ಷ್ಮೀದೇವಿಯಲ್ಲಿ
ಗರ್ಭಾಧಾನ ಮಾಡುವನೆಂದು ಚಿಂತಿಸಬೇಕು.
 
''ರಮಮಾಣಂ ಸ್ಮರೇದ್ ದೇವ್ಯಾ ಪರಂ ನಾರಾಯಣಂ ತತಃ ।
ಯೋನ್ ನ್ಯಸ್ಯ ಹರೇರ್ವೀಯ್ರ೦ ಇತಿ ಸ್ಮೃತ್ವಾ ಸಮರ್ಚಯೇತ್ ।
ಕುಂಡೇ ನ್ಯಸೇತ್ ಹರಿರ್ಗಭ್ರ೦ ಆಧತಿ ವಿಚಿಂತಯೇತ್ ॥
ಹೋಮಕುಂಡದಲ್ಲಿ
 
1. ವಿಶೇಷಾಂಶ
 
ಭಗವಂತನು
 
ರಮಿಸುತ್ತಿದ್ದಾನೆಂದೂ, ಅದರಿಂದ ಉಂಟಾದ ವೀರ್ಯವೇ ಅಗ್ನಿಯೆಂದೂ, 'ವಿಷ್ಣು-
ವೀರ್ಯಾತ್ಮಕಂ ಅಗ್ನಿಂ ಪ್ರತಿಷ್ಠೆಯಾಮಿ' ಎಂದು ಅಗ್ನಿಯನ್ನು ಪ್ರತಿಷ್ಠಾಪಿಸಬೇಕು.
ಸಂಸ್ಕಾರವಿಲ್ಲದ ಅಗ್ನಿಯಲ್ಲಿ ಮಾಡಿದ ಹೋಮವು ನಿಷ್ಪಲವಾದ್ದರಿಂದ ಗರ್ಭಾಧಾನಾದಿ
 
-
 
ಯೋಗದೀಪಿಕಾ 7/50
ರಮಾದೇವಿಯೊಡನೆ