This page has been fully proofread once and needs a second look.

ದ್ವಿತೀಯೋಧ್ಯಾಯಃ
 
ಅಶ್ವತ್ಥಪತ್ರಾಕೃತಿಃ ಸ್ಯಾನ್ಮೂಲತೋ ದ್ವಾದಶಾಂಗುಲಾ ।

ಯೋನಿಃ ಖಾತೇ ಚ ವಿನತಾ ಪ್ರವಿಷ್ಟಾ ದ್ವಂವ್ಯಂಗುಲಂ ತಥಾ ॥18 ೧೮
 
೭೧
 

 
ಅರ್ಥ - ಮೇಲೆ ಇರುವ ಮೇಖಲೆಯು ಮೇಲೆ ಅಶ್ವತ್ಥದ ಪತ್ರದಂತೆ ಇರುವ
ಆಕಾರದಲ್ಲಿ ಹನ್ನೆರಡಂಗುಲ ಉದ್ದವಾದ ಯೋನಿ- ಯೊಂದನ್ನು ರಚಿಸಬೇಕು. ಅದು
ಕುಂಡದ ಒಳಗೆ ಇಳಿದಿರಬೇಕು. ಹನ್ನೆರಡು ಅಂಗುಲ ಯೋನಿಯಲ್ಲಿ ಹತ್ತಂಗುಲ
 
ಮೇಖಲೆಯ ಮೇಲೂ ಉಳಿದೆರಡಂಗುಲ ಕುಂಡದ ಒಳಗೆ ಹೋಗಿರಬೇಕು.
 

 
ವ.ಟೀ. - ಯೋನಿ ಮೂಲತಃ ಮೂಲಮಾರಭ್ಯ ಅಗ್ರಪರ್ಯಂತಂ ದ್ವಾದಶಾಂಗುಲಾ ।
ತನ್ಮಧ್ಯೆ ಖ್ಯಾತೇ ಕುಂಡೇ ದ್ವಂವ್ಯಂಗುಲಾ ವಿನತಾ ಅಧೋಮುಖೀ ಸತೀ ಪ್ರವಿಷ್ಟಾ
 
.8
 

 
ಟೀಕಾರ್ಥ
 
- ಆಹುತಿ ನೀಡುವ ಮೂರನೆಯ ಮೆಟ್ಟಲಿನ ಮೂಲ- ದಿಂದಾರಂಭಿಸಿ
ಕುಂಡದ ಒಳಗಿನ ಪರ್ಯಂತ ಹನ್ನೆರಡು ಅಂಗುಲವಿರಬೇಕು. ವೇದಿಯ ಮೇಲ್ಬಾಗದ
ಮಧ್ಯದಲ್ಲಿ ಕುಂಡ- ದೊಳಗೆ ಎರಡಂಗುಲ ಅಧೋಮುಖವಾಗಿ ಪ್ರವಿಷ್ಟವಾಗಿರಬೇಕು.
 

[^1]
 
ತಲಾ ನಾಲ್ಕು ನಾಲ್ಕರಂತೆ ತ್ರಿಗುಣಿತ ಮಾಡಬೇಕು (೪×೩=೧೨)
 

ಅಥವಾ ಇಪ್ಪತ್ತನಾಲ್ಕು ಇದ್ದಾಗ ಎಂಟೆಂಟರಂತೆ ಇಪ್ಪತ್ತನಾಲ್ಕು ಅಂಗುಲವಿರಬೇಕು. (೮x೩-೨೪)

ಇಲ್ಲಿ ಹೇಳಿರುವ ಕುಂಡಪ್ರಮಾಣ ಸಾವಿರಹೋಮಕ್ಕೆ ಸಂಬಂಧಿಸಿ ದ್ದಾಗಿದೆ. ಹತ್ತುಸಾವಿರವಾದರೆ
ನಲವತ್ತೆಂಟು ಅಂಗುಲ ವಿಸ್ತಾರ ವಾಗಿರಬೇಕು. ಲಕ್ಷಹೋಮವಾದರೆ ಇದರ ನಾಲ್ಕುಪಟ್ಟು.

ಕೋಟಿ ಹೋಮವಾದರೆ ಎಂಟುಮೊಳ ಉದ್ದಗಲವಿರುವ ಕುಂಡವಾಗಬೇಕು.

"ಮುಷ್ಟಿಮಾನ ಶತಾರ್ಧೇ ತು ಶತೇ ಚಾರತ್ನಿಮಾತ್ರಕಮ್ ।

ಸಹಸ್ರೇ ತ್ವಥ ಹೋತವೇವ್ಯೇ ಕುರ್ಯಾತ್ ಕುಂಡಂ ಕರಾತ್ಮಕಮ್ ॥

ದ್ವಿಹಸ್ತಮಯಯುತೇ ತದ್ವತ್ ಲಕ್ಷಹೋಮ್ಮೇ ಚತುಷ್ಕರಮ್ ।

ಅಷ್ಟಹಸ್ತಾತ್ಮಕಂ ಕುಂಡಂ ಕೋಟಿಹೋಮೇ ತು ನಾಧಿಕಮ್ ॥''

ಚತುರ್ವಿಂಶಾಂಗುಲೋಚ್ಛಿಛ್ರಿತಂ ಎಂಬಲ್ಲಿ ಆಚಾರ್ಯರು ಸಾವಿರಹೋಮದಲ್ಲಿ ಕುಂಡಪ್ರಮಾಣ
ವನ್ನು ತಿಳಿಸಿದ್ದಾರೆ.
 

 
[^
1]. ವಿಶೇಷಾಂಶ
 
-
 
ನಾಭಿ, ಯೋನಿಗಳಿದ್ದು ಮೂರುವೇದಿಕೆ ಗಳಿರುವ ಹೋಮಕುಂಡವು
ಶ್ರೇಷ್ಠವಾಗಿರುತ್ತದೆ. ಎರಡು ವೇದಿಕೆ ಮಧ್ಯಮವೆನಿಸಿದರೆ ಒಂದು ಮೇಖಲೆ ಇರುವ ಕುಂಡ
ಕನಿಷ್ಠ ಕುಂಡವೆನಿಸಿದೆ. ಅಗ್ಗಿಷ್ಟಿಕೆ ಈ ಜಾತಿಯದು.
 

ನಾಭಿಯೋನಿಸಮಾಯುಕ್ತಂ ಕುಂಡಂ ಶ್ರೇಷ್ಠಂ ತ್ರಿಮೇಖಲಮ್ ।
 

ಕುಂಡಂ ದ್ವಿಮೇಖಲಂ ಮಧ್ಯಂ ನೀಚಂ ಸ್ಯಾದೇಕಮೇಖಲಮ್ ॥ - ಕ್ರಿಯಾಸಾರ
ಕುಂಡದ ಮೇಲ್ಬಾ

ಕುಂಡದ ಮೇಲ್ಭಾ
ಗದಲ್ಲಿ ಕೃಘೃತಾದಿ ಆಹುತಿ ನೀಡುವ ಭಾಗದಲ್ಲಿ ಅಶ್ವತ್ಥಪತ್ರದಂತೆ ಇರುವ