We're performing server updates until 1 November. Learn more.

This page has not been fully proofread.

ದ್ವಿತೀಯೋಧ್ಯಾಯಃ
 
ಅಶ್ವತ್ಥಪತ್ರಾಕೃತಿಃ ಸ್ಯಾನ್ಮೂಲತೋ ದ್ವಾದಶಾಂಗುಲಾ ।
ಯೋನಿಃ ಖಾತೇ ಚ ವಿನತಾ ಪ್ರವಿಷ್ಟಾ ದ್ವಂಗುಲಂ ತಥಾ ॥18॥
 
೭೧
 
ಅರ್ಥ - ಮೇಲೆ ಇರುವ ಮೇಖಲೆಯು ಮೇಲೆ ಅಶ್ವತ್ಥದ ಪತ್ರದಂತೆ ಇರುವ
ಆಕಾರದಲ್ಲಿ ಹನ್ನೆರಡಂಗುಲ ಉದ್ದವಾದ ಯೋನಿಯೊಂದನ್ನು ರಚಿಸಬೇಕು. ಅದು
ಕುಂಡದ ಒಳಗೆ ಇಳಿದಿರಬೇಕು. ಹನ್ನೆರಡು ಅಂಗುಲ ಯೋನಿಯಲ್ಲಿ ಹತ್ತಂಗುಲ
 
ಮೇಖಲೆಯ ಮೇಲೂ ಉಳಿದೆರಡಂಗುಲ ಕುಂಡದ ಒಳಗೆ ಹೋಗಿರಬೇಕು.
 
ವ.ಟೀ. - ಯೋನಿ ಮೂಲತಃ ಮೂಲಮಾರಭ್ಯ ಅಗ್ರಪರ್ಯಂತಂ ದ್ವಾದಶಾಂಗುಲಾ ।
ತನ್ಮಧ್ಯೆ ಖ್ಯಾತೇ ಕುಂಡೇ ದ್ವಂಗುಲಾ ವಿನತಾ ಅಧೋಮುಖೀ ಸತೀ ಪ್ರವಿಷ್ಟಾ
 
.8
 
ಟೀಕಾರ್ಥ
 
ಆಹುತಿ ನೀಡುವ ಮೂರನೆಯ ಮೆಟ್ಟಲಿನ ಮೂಲದಿಂದಾರಂಭಿಸಿ
ಕುಂಡದ ಒಳಗಿನ ಪರ್ಯಂತ ಹನ್ನೆರಡು ಅಂಗುಲವಿರಬೇಕು. ವೇದಿಯ ಮೇಲ್ಬಾಗದ
ಮಧ್ಯದಲ್ಲಿ ಕುಂಡದೊಳಗೆ ಎರಡಂಗುಲ ಅಧೋಮುಖವಾಗಿ ಪ್ರವಿಷ್ಟವಾಗಿರಬೇಕು.
 
ತಲಾ ನಾಲ್ಕು ನಾಲ್ಕರಂತೆ ತ್ರಿಗುಣಿತ ಮಾಡಬೇಕು (೪೩=೧೨)
 
ಅಥವಾ ಇಪ್ಪತ್ತನಾಲ್ಕು ಇದ್ದಾಗ ಎಂಟೆಂಟರಂತೆ ಇಪ್ಪತ್ತನಾಲ್ಕು ಅಂಗುಲವಿರಬೇಕು. (೮x೩-೨೪)
ಇಲ್ಲಿ ಹೇಳಿರುವ ಕುಂಡಪ್ರಮಾಣ ಸಾವಿರಹೋಮಕ್ಕೆ ಸಂಬಂಧಿಸಿದ್ದಾಗಿದೆ. ಹತ್ತುಸಾವಿರವಾದರೆ
ನಲವತ್ತೆಂಟು ಅಂಗುಲ ವಿಸ್ತಾರವಾಗಿರಬೇಕು. ಲಕ್ಷಹೋಮವಾದರೆ ಇದರ ನಾಲ್ಕುಪಟ್ಟು.
ಕೋಟಿ ಹೋಮವಾದರೆ ಎಂಟುಮೊಳ ಉದ್ದಗಲವಿರುವ ಕುಂಡವಾಗಬೇಕು.
"ಮುಷ್ಟಿಮಾನ ಶತಾರ್ಧ ತು ಶತೇ ಚಾರಮಾತ್ರಕಮ್ ।
ಸಹ ತ್ವಥ ಹೋತವೇ ಕುರ್ಯಾತ್ ಕುಂಡಂ ಕರಾತ್ಮಕಮ್ ॥
ದ್ವಿಹಸ್ತಮಯಯುತೇ ತದ್ವತ್ ಲಕ್ಷಹೋಮ್ ಚತುಷ್ಕರಮ್ ।
ಅಷ್ಟಹಸ್ತಾತ್ಮಕಂ ಕುಂಡಂ ಕೋಟಿಹೋಮೇ ತು ನಾಧಿಕಮ್ ॥''
ಚತುರ್ವಿಂಶಾಂಗುಲೋಚ್ಛಿತಂ ಎಂಬಲ್ಲಿ ಆಚಾರ್ಯರು ಸಾವಿರಹೋಮದಲ್ಲಿ ಕುಂಡಪ್ರಮಾಣ
ವನ್ನು ತಿಳಿಸಿದ್ದಾರೆ.
 
1. ವಿಶೇಷಾಂಶ
 
-
 
ನಾಭಿ, ಯೋನಿಗಳಿದ್ದು ಮೂರುವೇದಿಕೆಗಳಿರುವ ಹೋಮಕುಂಡವು
ಶ್ರೇಷ್ಠವಾಗಿರುತ್ತದೆ. ಎರಡು ವೇದಿಕೆ ಮಧ್ಯಮವೆನಿಸಿದರೆ ಒಂದು ಮೇಖಲೆ ಇರುವ ಕುಂಡ
ಕನಿಷ್ಠ ಕುಂಡವೆನಿಸಿದೆ. ಅಗ್ಗಿಷ್ಟಿಕೆ ಈ ಜಾತಿಯದು.
 
ನಾಭಿಯೋನಿಸಮಾಯುಕ್ತಂ ಕುಂಡಂ ಶ್ರೇಷ್ಠಂ ತ್ರಿಮೇಖಲಮ್ ।
 
ಕುಂಡಂ ದ್ವಿಮೇಖಲಂ ಮಧ್ಯಂ ನೀಚಂ ಸ್ಯಾದೇಕಮೇಖಲಮ್ ॥ - ಕ್ರಿಯಾಸಾರ
ಕುಂಡದ ಮೇಲ್ಬಾಗದಲ್ಲಿ ಕೃತಾದಿ ಆಹುತಿ ನೀಡುವ ಭಾಗದಲ್ಲಿ ಅಶ್ವತ್ಥಪತ್ರದಂತೆ ಇರುವ