This page has been fully proofread once and needs a second look.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 2
 
ಹೇಳುತ್ತಾರೆ. ಕುಂಡದ ಒಟ್ಟು ಉದ್ದ ಅಗಲ ಇಪ್ಪತ್ತನಾಲ್ಕು, ಒಳಗಿನ ಅಂತರವೂ
ಇಪ್ಪತ್ತನಾಲ್ಕು. ಇದು ಸಾವಿರಹೋಮ ಮಾಡುವಾಗ ತಯಾರಾಗಬೇಕಾಗಿರುವ
ಕುಂಡಪ್ರಮಾಣ ಎಂದರ್ಥ.
 

ತದ್ವಿಸ್ತಾರೋ ಎಂದರೆ ಮೇಖಲಾತ್ರಯವಿಸ್ತಾರ ಎಂದರ್ಥ.
 

ಒಂದೊಂದು ವೇದಿಕೆ ಎಂಟೆಂಟಂಗುಲದಂತೆ ಒಟ್ಟು ಮೂರೂ ಮೇಖಲೆಗಳ ವಿಸ್ತಾರ
ಇಪ್ಪತ್ತನಾಲ್ಕು ಎಂದರ್ಥ (8•3=24)
 
20
 

 
ದ್ವಾದಶೈವ ವಾ ಎಂಬಲ್ಲಿ ಮೂರೂ ಮೇಖಲೆಗಳೂ ಪ್ರತ್ಯೇಕವಾಗಿ ನಾಲ್ಕು ನಾಲ್ಕು
ಅಂಗುಲವೆಂದಿಟ್ಟುಕೊಂಡಾಗ ಹನ್ನೆರಡು (3x4=12) ಅಂಗುಲ. ಪ್ರತ್ಯೇಕವಾಗಿ ಮೂರು
ಮೇಖಲೆಗಳ ವಿಸ್ತಾರ ಎರಡು ಮೂರು ಅಥವಾ ನಾಲ್ಕು ಅಂಗುಲವೆಂದು
ಚತುರಂಗುಲ- ಮೇವ ವಾ ಎಂಬಲ್ಲಿ ಹೇಳಲಾಯಿತು. ಈಗ ದ್ವಾದಶೈವ ವಾ ಎಂಬಲ್ಲಿ
ಮೂರು ಮೇಖಲೆಗಳೂ ಪ್ರತ್ಯೇಕವಾಗಿ ನಾಲ್ಕು ನಾಲ್ಕು ಅಂಗುಲ.
 
[^ ]
 
[^
1]. ವಿಶೇಷಾಂಶ - ವಸುಧೇಂದ್ರತೀರ್ಥರ ಟೀಕೆಯಂತೆ ಈ ಶ್ಲೋಕಗಳ ಅಭಿಪ್ರಾಯವನ್ನು ಹೀಗೆ
ಸಂಗ್ರಹಿಸಬಹುದು.
 
ಹೋಮ ಕುಂಡಕ್ಕೆ ಮೂರು ಮೇಖಲೆಗಳಿರಬೇಕು. ಹೋಮಕುಂಡಕ್ಕೆ ಮೂರು ಮೇಖಲೆಗಳಿರಬೇಕು. ಹೋಮಕುಂಡದ ಉದ್ದ + ಅಗಲ (ವಿಸ್ತಾರ)
ಇಪ್ಪತ್ತನಾಲ್ಕು ಅಂಗುಲವಿರಬೇಕು. ಕುಂಡದ ಒಳಗಿನ ವಿಸ್ತಾರವೂ ಇಪ್ಪತ್ತನಾಲ್ಕು ಅಂಗುಲ.
ಇದೊಂದು ಪಕ್ಷ. ಹನ್ನೆರಡಂಗುಲ ಉದ್ದವಾದರೆ ಕುಂಡದ ಆಳವೂ ಹನ್ನೆರಡಾದರೂರು ಇರಬೇಕು.
ಅಥವಾ ಹನ್ನೆರಡು ಅಂಗುಲ ಎತ್ತರವಿದ್ದರೆ ಖಾತಮಾತ್ರ ೨೪ಅಂಗುಲವೇ ಇರಬೇಕೆಂಬುದು

ಇನ್ನೊಂದು ಪಕ್ಷ. (ವಸುಧೇಂದ್ರರು)
 

ಇಪ್ಪತ್ತನಾಲ್ಕು ಅಂಗುಲ ಆಳದ ಹೋಮಕುಂಡದ ಉದ್ದ ಅಗಲ ಇಪ್ಪತ್ತನಾಲ್ಕು ಅಂಗುಲ.
ಹನ್ನೆರಡು ಅಂಗುಲ ಆಳವಿರುವ ಕುಂಡದ ವಿಸ್ತಾರ ಹನ್ನೆರಡು ಅಂಗುಲ. ಅಂದರೆ ಕುಂಡದ ಆಳ

ಎಷ್ಟಿದೆಯೋ ಅಷ್ಟೇ ಉದ್ದಗಲವೆಂದು ಅಭಿಪ್ರಾಯ.
 

ವೇದಿಗಳ ವಿಷಯದಲ್ಲಿ ಮೂರು ಮೇಖಲೆಗಳು ಎರಡೆರಡು ಅಂಗುಲವಿದ್ದರೆ ಅಧಮಪಕ್ಷ.
ಮೂರು ಮೂರು ಅಂಗುಲವಿದ್ದರೆ ಮಧ್ಯಮಪಕ್ಷ, ನಾಲ್ಕುನಾಲ್ಕು ಅಂಗುಲವಿದ್ದರೆ ಉತ್ತಮಪಕ್ಷ.

ಅಥವಾ ಪ್ರತಿಯೊಂದು ಎಂಟೆಂಟು ಅಂಗುಲವಿದ್ದು ಒಟ್ಟು ಮೂರರ ಮೊತ್ತ ಇಪ್ಪತ್ತನಾಲ್ಕು
(೮*೩-೨೪). ಇದನ್ನೇ 'ಚತುರ್ವಿಂಶಾಂಗುಲಮ್' ಎನ್ನಲಾಗಿದೆ. ಅಥವಾ ಪ್ರತಿಮೇಖಲೆ- ಯೂ
ನಾಲ್ಕರಂತೆ ಒಟ್ಟು ಹನ್ನೆರಡು ಅಂಗುಲ. ಇದನ್ನೇ ದ್ವಾದಶೈವ ವಾ ಎನ್ನಲಾಗಿದೆ.
 

ಕುಂಡದ ಉದ್ದಗಲಪೂರ್ಣಪರಿಮಾಣವೆಷ್ಟೋ ಅದರ ಎರಡರಷ್ಟು ಮೇಖಲಾತ್ರಯದ
ವಿಸ್ತಾರವಿರಬೇಕು.
 

ಕುಂಡದ ವಿಸ್ತಾರ ಹನ್ನೆರಡು ಅಥವಾ ಇಪ್ಪತ್ತನಾಲ್ಕು ಇದ್ದಾಗ, ಮೂರು ಮೇಖಲೆಯ ಪ್ರಮಾಣ