This page has been fully proofread once and needs a second look.

ದ್ವಿತೀಯೋಧ್ಯಾಯಃ
 
ಚತುರ್ವಿಂಶೇತಿ ॥ ತದ್ವಿಸ್ತಾರೋ ಮೇಖಲಾತ್ರಯವಿಸ್ತಾರಃ । ಚತುರ್ವಿಂಶಾಂಗುಲಮ್
ಏಕೈಕಸ್ಯಾ ವೇದ್ಯಾ ಅಷ್ಟಾಂಗುಲ ಸಂಖ್ಯಯಾ ದ್ವಾದಶೈವ ವಾ ವಿಸ್ತಾರಃ । ಏಕೈಕಸ್ಯಾಃ
ಚತುರಂಗುಲ ಸಂಖ್ಯಯಾ ದ್ವಾದಶೈವ ವೇತ್ಯತ್ರ ಮೇಖಲಾನಾಂ ಪ್ರತ್ಯೇಕಂ ದ್ವಾದಶತ್ವಂ ವಾ ।
ಚತುರಂಗುಲಪಕ್ಷಸ್ಯ ಚತುರಂಗುಲಮೇವ ಚೇತ್ಯನೇನ ಪೂರ್ವಮೇವೋಕ್ತತ್ವಾತ್ ।
ಕುಂಡಸ್ಕೋಯೋನ್ನತತ್ವ ವಿಸ್ಸವೇ ವಿಸ್ತೃತೇ ಚ ಪೂರ್ಣಪರಿಮಾಣಾಪೇಕ್ಷಯಾ ದ್ವಿಗುಣಿತತ್ವಂ ವಾ ।

ಅಷ್ಟಾಂಗುಲಿತ್ವಪಕ್ಷೇ ದ್ವಾದಶಾಂಗುಲಿತ್ವಪಕ್ಷೇ ತು ತ್ರಿಗುಣಿತತ್ವಂ ಜ್ಞಾತವ್ಯಮ್ ॥
 

 
ಟೀಕಾರ್ಥ - ಹೋಮಾದಿಗಳ ಲಕ್ಷಣವನ್ನು ಜುಹುಯಾತ್ ಎಂಬಿತ್ಯಾದಿ ಶ್ಲೋಕದಲ್ಲಿ
ತಿಳಿಸುತ್ತಾರೆ.
 
uve
 
೬೯
 

 
ತ್ರಿಮೇಖಲಂ := ಮೂರುವೇದಿಗಳಿಂದ ಸಹಿತವಾದದ್ದೆಂದರ್ಥ, ಹೋಮಕುಂಡದ
ಎತ್ತರ ಹಾಗೂ ಒಳಗಿನ ವಿಸ್ತಾರವನ್ನು 'ಚತುರ್ವಿಂಶ' ಎಂಬಲ್ಲಿ ಹೇಳುವರು. ಉಚ್ಛಿಛ್ರಿತಂ
ಎಂದರೆ ಎತ್ತರ. ಕುಂಡವು ಹನ್ನೆರಡು ಅಂಗುಲ ಅಥವಾ ಇಪ್ಪತ್ತನಾಲ್ಕು ಅಂಗುಲ ಎತ್ತರ-
ವಿರಬೇಕೆಂದರ್ಥ.
 

 
ತಾವತ್‌ ಖಾತಮ್ ಎಂದರೆ ಒಳಗಿನ ವಿಸ್ತಾರದಷ್ಟೆ ಎಂದರ್ಥ. ಕುಂಡದ ಮೇಲಿನ
ಭಾಗ 24ಅಂಗುಲವಿದ್ದರೆ ಕುಂಡದ ಒಳಗೂ ಅಷ್ಟೆ ಆಳವಿರಬೇಕೆಂದರ್ಥ. ಚತುಕ್ಷ್ಕೋಣಂ
ಎಂದರೆ ಚಚ್ಚೌಕ- ವಾಗಿರಬೇಕು. ಎತ್ತರ ಹನ್ನೆರಡು ಅಂಗುಲಗಳಿದ್ದರೆ ಸಾಕೆಂಬುದು

ಇನ್ನೊಂದು ಪಕ್ಷ ಆಗ ಕುಂಡವೂ ಅಷ್ಟೇ ವಿಸ್ತಾರವಾಗಿರಬೇಕು.
 
ದ್ವಂ

 
ದ್ವ್ಯಂ
ಗುಲಂ ಎಂಬುದರಿಂದ ಮೇಖಲೆಯ ವಿಸ್ತಾರವನ್ನು ಹೇಳುತ್ತಿರುವರು
- ಮೇಖಲೆಗಳು ಪ್ರತ್ಯೇಕವಾಗಿ ಮೂರು ಇರಬೇಕು. ಇದರ ಅಗಲವು ಕ್ರಮವಾಗಿ
ಎರಡಂಗುಲ, ಮೂರಂಗುಲ, ನಾಲ್ಕಂಗುಲವಿರಬೇಕು.
 

 
ಮೂರೂ ಮೇಖಲೆಗಳು ಎರಡೆರಡಂಗುಲವಿದ್ದರೆ ಅಧಮಕಲ್ಪ, ಮೂರು
ಮೂರಂಗುಲವಿದ್ದರೆ ಮಧ್ಯಮಕಲ್ಪ, ನಾಲ್ಕು ನಾಲ್ಕು ಅಂಗುಲವಿದ್ದರೆ ಉತ್ತಮಕಲ್ಪ.
 

 
ಈ ಮೂರುಕಲ್ಪಗಳಲ್ಲಿ ಮೊದಲೆರಡು ಕಲ್ಪಗಳಲ್ಲಿ ಪಕ್ಷಾಂತರ- ವಿದೆಯಾದರೂ ಕೊನೆಯ
ಮೇಖಲೆ ಮಾತ್ರ ನಾಲ್ಕು ಅಂಗುಲ-
ವಿದ್ದೇ ಇರಬೇಕು. ಇದು ಅವಶ್ಯಕವೆಂದು ಅಂತ್ಯಾ ವಾ
ಎಂಬಲ್ಲಿ ಹೇಳಲಾಗಿದೆ.
 
[^
 
ಸಾವಿರಹೋಮದಲ್ಲಿ ವಿಶೇಷವನ್ನು 'ಚತುರ್ವಿಂಶಾಂಗುಲಮ್' ಎಂಬುದರಿಂದ

 
[^
1]. ವಿಶೇಷಾಂಶ - ಕುಂಡದ ಮೇಲಿನ ಎತ್ತರ ಹನ್ನೆರಡು ಅಂಗುಲ ವಿದ್ದರೆ ಕೆಳಗೂ (ಖಾತವೂ)
ಹನ್ನೆರಡು ಅಂಗುಲದಷ್ಟೇ ಆಳ- ವಿರಬೇಕು ಎಂದು ಒಂದು ಪಕ್ಷವಾದರೆ ಮತ್ತೊಂದು, ಮೇಲೆ

ಹನ್ನೆರಡು ಅಂಗುಲವಾದರೂ ಕೆಳಗೆ ಮಾತ್ರ ಇಪ್ಪತ್ತನಾಲ್ಕು ಅಂಗುಲವೇ ಇರಬೇಕು.