This page has not been fully proofread.

ದ್ವಿತೀಯೋಧ್ಯಾಯಃ
 
ಚತುರ್ವಿಂಶತಿ ॥ ತದ್ವಿಸ್ತಾರೋ ಮೇಖಲಾತ್ರಯವಿಸ್ತಾರಃ । ಚತುರ್ವಿಂಶಾಂಗುಲಮ್
ಏಕೈಕಸ್ಯಾ ವೇದ್ಯಾ ಅಷ್ಟಾಂಗುಲಸಂಖ್ಯಯಾ ದ್ವಾದಶೈವ ವಾ ವಿಸ್ತಾರಃ । ಏಕೈಕಸ್ಯಾಃ
ಚತುರಂಗುಲಸಂಖ್ಯಯಾ ದ್ವಾದಶೈವ ವೇತ್ಯತ್ರ ಮೇಖಲಾನಾಂ ಪ್ರತ್ಯೇಕಂ ದ್ವಾದಶತ್ವಂ ವಾ ।
ಚತುರಂಗುಲಪಕ್ಷಸ್ಯ ಚತುರಂಗುಲಮೇವ ಚೇತನೇನ ಪೂರ್ವಮೇವೋಕ್ತತ್ವಾತ್ ।
ಕುಂಡಸ್ಕೋನ್ನತತ್ವ ವಿಸ್ಸತೇ ಚ ಪೂರ್ಣಪರಿಮಾಣಾಪೇಕ್ಷಯಾ ದ್ವಿಗುಣಿತತ್ವಂ ವಾ ।
ಅಷ್ಟಾಂಗುಲಿತ್ವಪಕ್ಷೇ ದ್ವಾದಶಾಂಗುಲಿತ್ವಪಕ್ಷೇ ತು ತ್ರಿಗುಣಿತತ್ವಂ ಜ್ಞಾತವ್ಯಮ್ ॥
 
ಟೀಕಾರ್ಥ - ಹೋಮಾದಿಗಳ ಲಕ್ಷಣವನ್ನು ಜುಹುಯಾತ್ ಎಂಬಿತ್ಯಾದಿ ಶ್ಲೋಕದಲ್ಲಿ
ತಿಳಿಸುತ್ತಾರೆ.
 
uve
 
೬೯
 
ತ್ರಿಮೇಖಲಂ : ಮೂರುವೇದಿಗಳಿಂದ ಸಹಿತವಾದದ್ದೆಂದರ್ಥ, ಹೋಮಕುಂಡದ
ಎತ್ತರ ಹಾಗೂ ಒಳಗಿನ ವಿಸ್ತಾರವನ್ನು 'ಚತುರ್ವಿಂಶ' ಎಂಬಲ್ಲಿ ಹೇಳುವರು. ಉಚ್ಛಿತಂ
ಎಂದರೆ ಎತ್ತರ. ಕುಂಡವು ಹನ್ನೆರಡು ಅಂಗುಲ ಅಥವಾ ಇಪ್ಪತ್ತನಾಲ್ಕು ಅಂಗುಲ ಎತ್ತರ-
ವಿರಬೇಕೆಂದರ್ಥ.
 
ತಾವತ್‌ ಖಾತಮ್ ಎಂದರೆ ಒಳಗಿನ ವಿಸ್ತಾರದಷ್ಟೆ ಎಂದರ್ಥ. ಕುಂಡದ ಮೇಲಿನ
ಭಾಗ 24ಅಂಗುಲವಿದ್ದರೆ ಕುಂಡದ ಒಳಗೂ ಅಷ್ಟೆ ಆಳವಿರಬೇಕೆಂದರ್ಥ. ಚತುಕ್ಕೋಣಂ
ಎಂದರೆ ಚಚೌಕವಾಗಿರಬೇಕು. ಎತ್ತರ ಹನ್ನೆರಡು ಅಂಗುಲಗಳಿದ್ದರೆ ಸಾಕೆಂಬುದು
ಇನ್ನೊಂದು ಪಕ್ಷ ಆಗ ಕುಂಡವೂ ಅಷ್ಟೇ ವಿಸ್ತಾರವಾಗಿರಬೇಕು.
 
ದ್ವಂಗುಲಂ ಎಂಬುದರಿಂದ ಮೇಖಲೆಯ ವಿಸ್ತಾರವನ್ನು ಹೇಳುತ್ತಿರುವರು
ಮೇಖಲೆಗಳು ಪ್ರತ್ಯೇಕವಾಗಿ ಮೂರು ಇರಬೇಕು. ಇದರ ಅಗಲವು ಕ್ರಮವಾಗಿ
ಎರಡಂಗುಲ, ಮೂರಂಗುಲ, ನಾಲ್ಕಂಗುಲವಿರಬೇಕು.
 
ಮೂರೂ ಮೇಖಲೆಗಳು ಎರಡೆರಡಂಗುಲವಿದ್ದರೆ ಅಧಮಕಲ್ಪ, ಮೂರು
ಮೂರಂಗುಲವಿದ್ದರೆ ಮಧ್ಯಮಕಲ್ಪ, ನಾಲ್ಕು ನಾಲ್ಕು ಅಂಗುಲವಿದ್ದರೆ ಉತ್ತಮಕಲ್ಪ.
 
ಈ ಮೂರುಕಲ್ಪಗಳಲ್ಲಿ ಮೊದಲೆರಡು ಕಲ್ಪಗಳಲ್ಲಿ ಪಕ್ಷಾಂತರವಿದೆಯಾದರೂ ಕೊನೆಯ
ಮೇಖಲೆ ಮಾತ್ರ ನಾಲ್ಕು ಅಂಗುಲವಿದ್ದೇ ಇರಬೇಕು. ಇದು ಅವಶ್ಯಕವೆಂದು ಅಂತ್ಯಾ ವಾ
ಎಂಬಲ್ಲಿ ಹೇಳಲಾಗಿದೆ.
 
ಸಾವಿರಹೋಮದಲ್ಲಿ ವಿಶೇಷವನ್ನು 'ಚತುರ್ವಿಂಶಾಂಗುಲಮ್' ಎಂಬುದರಿಂದ
1. ವಿಶೇಷಾಂಶ - ಕುಂಡದ ಮೇಲಿನ ಎತ್ತರ ಹನ್ನೆರಡು ಅಂಗುಲವಿದ್ದರೆ ಕೆಳಗೂ (ಖಾತವೂ)
ಹನ್ನೆರಡು ಅಂಗುಲದಷ್ಟೇ ಆಳವಿರಬೇಕು ಎಂದು ಒಂದು ಪಕ್ಷವಾದರೆ ಮತ್ತೊಂದು ಮೇಲೆ
ಹನ್ನೆರಡು ಅಂಗುಲವಾದರೂ ಕೆಳಗೆ ಮಾತ್ರ ಇಪ್ಪತ್ತನಾಲ್ಕು ಅಂಗುಲವೇ ಇರಬೇಕು.