This page has been fully proofread once and needs a second look.

೬೬
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 2
 
ಪೂರ್ವವತ್ ಸಂಸ್ಕೃತೇ ವಹ್ನೌ ಧ್ಯಾತ್ವಾ ದೇವಂ ಜನಾರ್ದನಮ್ ।
 

 
ಅರ್ಥ
 
- ಆಧ್ಯಾತ್ಮಿಕ, ಆಧಿದೈವಿಕ, ಆಧಿಭೌತಿಕಗಳೆಂಬ ತಾಪತ್ರಯ ಗಳ
ಶಾಂತಿಗಾಗಿಯೂ, ಅಪಮೃತ್ಯು ಪರಿಹಾರಪೂರ್ವಕ ದೀರ್ಘಾ ಯುಷ್ಯಕ್ಕಾಗಿಯೂ,
ಐಶ್ವರ್ಯಾಭಿವೃದ್ಧಿಗಾಗಿಯೂ, ಯೋಗ್ಯತೆ ಸಂಪಾದನೆಗಾಗಿಯೂ, ಮಂತ್ರಗಳ
ಸಿದ್ಧಿಗಾಗಿಯೂ, ಭಗವಂತನ ಪ್ರೀತಿಯುಂಟಾಗಲೂ ಹೋಮಗಳನ್ನು ಮಾಡು
ತ್ತಿರಬೇಕು. ಈ ಹೋಮಗಳಲ್ಲಿ ಸಾವಿರ, ಹತ್ತು ಸಾವಿರ, ಲಕ್ಷ, ಕೋಟಿಸಂಖ್ಯೆಯಲ್ಲಿ
ಯಥಾಶಕ್ತಿ ಆಹುತಿಗಳನ್ನು ನೀಡಬೇಕು. ಈ ಮೊದಲು ಅಗ್ನಿಗೆ ಮುಂದೆ ಹೇಳುವಂತೆ
ಅಗ್ನಿಸಂಸ್ಕಾರಾದಿಗಳನ್ನು ಮಾಡಿ ಅಂಗ್ನ್ಯತರ್ಗತ ಪರಶುರಾಮನನ್ನು ಧ್ಯಾನಿಸಿ
 
ಹೋಮಿಸಬೇಕು.
 

 
ವ.ಟೀ. - ಹೋಮಾದಿಲಕ್ಷಣಮಾಹ - ಜುಹುಯಾದಿತ್ಯಾದಿನಾ ॥
 
W
 

 
ಟೀಕಾರ್ಥ - 'ಜುಹುಯಾತ್' ಎಂಬುದರಿಂದ ಹೋಮ, ಅದರ ಲಕ್ಷಣ, ಆಹುತಿ,
ಆಹುತಿಸಂಖ್ಯೆ ಮೊದಲಾದವುಗಳನ್ನು ನಿರೂಪಿಸುತ್ತಾರೆ.
 
[^1]
 
[^1]
. ವಿಶೇಷಾಂಶ -
 
ಇಲ್ಲಿ ಹೋಮವನ್ನು ಮಾಡಬೇಕಾದ ಸಂದರ್ಭಗಳನ್ನು ತಿಳಿಸುತ್ತಿದ್ದಾರೆ. ತಾಪತ್ರಯಪರಿಹಾರಾದಿ
ಗಳು ಹೋಮದ ಉದ್ದೇಶವಾದರೂ ಪ್ರಧಾನವಾಗಿ ಭಗವಂತನ ಪ್ರೀತ್ಯುದ್ದೇಶಕವಾಗಿರಬೇಕು.
ಇಲ್ಲದಿದ್ದರೆ ಅಲ್ಪಫಲವೇ ಬಂದೀತು. ಇದನ್ನು ಏವಾರ್ಥಕವಾದ ವಾಶಬ್ದದಿಂದ ಸೂಚಿಸಲಾಗಿದೆ.

'ಉಪಸರ್ಗ'ವೆಂದರೆ ಉಪದ್ರವಗಳು. ಇವು ಮೂರುವಿಧವಾಗಿವೆ. ಆಧ್ಯಾತ್ಮಿಕ, ಆದಿಭೌತಿಕ,
ಆಧಿದೈವಿಕ ಎಂದು.
 

ದುಃಸ್ವಪ್ನಾದಿಗಳಿಂದ ಸೂಚಿತ ಅರಿಷ್ಟಗಳಿಗೆ ಆಧ್ಯಾತ್ಮಿಕವೆಂದೂ,
 

ಭೂಕಂಪ, ಅಗ್ನಿಪರ್ವತಸ್ಫೋಟ, ಸುನಾಮಿ, ಪ್ರವಾಹಾದಿ ಭೂಮಿಯಲ್ಲಾಗುವ ಉಪದ್ರವಗಳು
ಆಧಿಭೌತಿಕ(?)ವೆಂದೂ, ದೇವತೆಗಳ ವ್ಯಾಕೋಪದಿಂದಾಗುವ ಅತಿವೃಷ್ಟಿ, ಅನಾವೃಷ್ಟಿ,

ಸೈಕ್ಲೋನ್ ಮೊದಲಾದವುಗಳು ಆಧಿದೈವಿಕಗಳು.
 

ಏಳುಗ್ರಹಗಳು ಒಂದೆಡೆ ಸೇರುವುದು, ಸೂರ್ಯನ ಸುತ್ತಲೂ ಪರಿವೇಷ ತೋರುವುದು,
ಸೂರ್ಯನಲ್ಲಿ ರಂಧ್ರ ಕಾಣುವುದು ಆದಿಭೌತಿಕಗಳೆಂದು ತಿಳಿಯಬೇಕು.
 

ದುಃಸ್ವಪ್ನಗಳು –
 

೧. ಮುಂಡಿತರ ಜೊತೆಗೆ ಸಂಭಾಷಣೆ ಹಾಗೂ ಅವರ ಜೊತೆಗೆ ವಾಸವು
 

೨.
ತಾನೇ ಮುಂಡಿತನಾಗುವುದು

೩. ಹರಿದಿರುವ ನೀಲವಸ್ತ್ರಧಾರಣೆ