This page has been fully proofread once and needs a second look.

ದ್ವಿತೀಯೋಧ್ಯಾಯಃ
 
ಪ್ರಾರಂಭಿಸಿ ಶ್ರೀಕೃಷ್ಣಮೂರ್ತಿಪರ್ಯಂತವಿರುವ
 
24ಮೂರ್ತಿ- ಗಳು. ಆತ್ಮಾದ್ಯಾಃ ಎಂದರೆ
ಆತ್ಮ, ಅಂತರಾತ್ಮ, ಪರಮಾತ್ಮ, ಜ್ಞಾನಾತ್ಮವೆಂಬ ನಾಲ್ಕು ರೂಪಗಳು. ವಾಸುದೇವಾದ್ಯಾಃ
ಎಂದರೆ ವಾಸುದೇವ-ಸಂಕರ್ಷಣ-ಪ್ರದ್ಯುಮ್ನ-ಅನಿರುದ್ಧಮೂರ್ತಿಗಳು.
 
ಎಂದರೆ
 

ವಿಶ್ವಾದ್ಯಾಃ
 

 
ಎಂದರೆ ವಿಶ್ವ-ತೈಜಸ-ಪ್ರಾಜ್ಞ-ತುರೀಯ ಎಂಬ ನಾಲ್ಕು ಮೂರ್ತಿಗಳು, ಮತ್ತ್ವಸ್ಯ ಮೊದಲಾಗಿ
ಶಿಂಶುಮಾರಾಂತ- ವಾಗಿರುವ 13ಮೂರ್ತಿಗಳು; ಒಟ್ಟು ಒಂದು ನೂರು ಮೂರ್ತಿಗಳು.
 

 
ದೀಕ್ಷಾವಿಧಿ
 

 
ಪೂರ್ವೋಕ್ತವಿಧಿನಾಭ್ಯರ್ಚ್ಯ ಪ್ರತಿಮಾಂ ಶಿಷ್ಯಮೇವ ವಾ।

ಸ್ನಾಪಯೇತ್ ಪೂರ್ವಮರ್ಚಾಯಾಂ ಜಪೋಽನೂನಃ ಸಹಸ್ರತಃ
10।
 
೬೩
 
-
 
೧೦ ॥
 
ಅರ್ಥ- ಈ ಹಿಂದೆ ಹೇಳಿದಂತೆ ಕಲಶದಲ್ಲಿ ಪೀಠಪೂಜೆ, ಆವರಣದೇವತಾ
ಪೂಜೆ ಸಹಿತ ಅರ್ಭ್ಘ್ಯಾದಿ ಷೋಡಶೋಪಚಾರ ದಿಂದ ಕಲಶವನ್ನು ಪೂಜಿಸಿ, ಹೀಗೆ
ಸಂಸ್ಕಾರದಿಂದ ಪವಿತ್ರವಾದ ಆ ಕಲಶಜಲದಿಂದ ಪ್ರತಿಮೆಗೆ ಅಭಿಷೇಕಿಸಬೇಕು.
ವೈಷ್ಣವದೀಕ್ಷೆ- ಯನ್ನು ಹೊಂದುವ ಹಾಗೂ ಮಂತ್ರಸ್ವೀಕಾರ ಮಾಡಬೇಕಾದ ಶಿಷ್ಯನಿಗೂ
ಗುರುವು ದೀಕ್ಷೆಗಾಗಿ ಇದೇರೀತಿ ಅಭಿಷೇಕಿಸಬೇಕು. ಹೊಸ ಪ್ರತಿಮೆಗಳಿಗೆ ಅಭಿಷೇಕ-
ಮಾಡುವ ಮೊದಲು ಒಂದು ಸಾವಿರಕ್ಕೆ ಕಡಿಮೆಯಾಗದಂತೆ ಮೂಲಮಂತ್ರವನ್ನು
 
ಜಪಿಸಬೇಕು.
 

 
ವ.ಟೀ. - ಸ್ನಾನಾತ್ ಪೂರ್ವ೦ ಸಹಸ್ರತೋ ಅನೂನಃ ಜಪಃ । ಶಿಷ್ಯಸ್ಯ ಸನ್ನ್ಯಾಸದೀಕ್ಷಾ
ಸ್ನಾನಾನಂತರಂ ಚ ಮೂಲಮಂತ್ರಸ್ಯ ಪ್ರಣವಾಷ್ಟಾಕ್ಷರರೂಪ ತತ್ತನ್ಮೂರ್ತಿಮಂತ್ರಸ್ಯ
ಚಾಕ್ಷರಾಂಗ- ನ್ಯಾಸಃ ಕರ್ತವ್ಯಃ ॥
 

 
ಟೀಕಾರ್ಥ - ಪ್ರತಿಮೆಗೆ ಅಭಿಷೇಕಮಾಡುವ ಮೊದಲು ಹೊಸದಾಗಿ ಪ್ರತಿಷ್ಠೆ ಮಾಡುವ
ಪ್ರತಿಮೆಯಾದರೆ ಪ್ರತಿಮೆಯನ್ನು ಮುಟ್ಟಿ- ಕೊಂಡು ಸಾವಿರಕ್ಕೆ ಕಡಿಮೆಯಿಲ್ಲದಂತೆ
ಮೂಲಮಂತ್ರವನ್ನು ಜಪಿಸಬೇಕು. ಪ್ರತಿಷ್ಠಿತವಾದ ಪ್ರತಿಮೆಯಲ್ಲಾದರೆ ಯಥಾಶಕ್ತಿ

ಜಪಿಸಬೇಕು. ಸ್ನಾನಾನಂತರವೂ ಪ್ರತಿಮೆಯಲ್ಲಿ ಪ್ರಣವಾಷ್ಟಾಕ್ಷರ ಹಾಗೂ ಆಯಾಯ
ಮೂರ್ತಿಗಳ ಮಂತ್ರಗಳನ್ನು, ಆಯಾಯ ಅಂಗಗಳಲ್ಲಿ ತತ್ತ್ವನ್ಯಾಸಮಾತೃಕಾನ್ಯಾಸಗಳನ್ನೂ
ಮಾಡಬೇಕು. ಸನ್ನ್ಯಾಸದೀಕ್ಷೆಯನ್ನು ಹೊಂದಬೇಕಾದ ಶಿಷ್ಯನಿಗೆ ಕಲಶೋದಕ- ದಿಂದ
ಅಭಿಷೇಕ ಮಾಡಿ ನಂತರ ಮೂಲಮಂತ್ರವನ್ನು ಯಥಾ- ಶಕ್ತಿ ಜಪಿಸಬೇಕು.
 

 
[^
1]. ವಿಶೇಷಾಂಶ -
 

ಕಲಶೋಕದಿಂದ ಉತ್ಸವ- - ಪರ್ವಕಾಲಾದಿವಿಶೇಷ ಸಂದರ್ಭ- ದಲ್ಲಿ ಪ್ರತಿಮೆಯನ್ನು ಮುಟ್ಟಿ ಸಾವಿರ