We're performing server updates until 1 November. Learn more.

This page has not been fully proofread.

ದ್ವಿತೀಯೋಧ್ಯಾಯಃ
 
ಪ್ರಾರಂಭಿಸಿ ಶ್ರೀಕೃಷ್ಣಮೂರ್ತಿಪರ್ಯಂತವಿರುವ
 
24ಮೂರ್ತಿಗಳು. ಆತ್ಮಾದ್ಯಾಃ ಎಂದರೆ
ಆತ್ಮ, ಅಂತರಾತ್ಮ, ಪರಮಾತ್ಮ, ಜ್ಞಾನಾತ್ಮವೆಂಬ ನಾಲ್ಕು ರೂಪಗಳು. ವಾಸುದೇವಾದ್ಯಾಃ
ವಾಸುದೇವ-ಸಂಕರ್ಷಣ-ಪ್ರದ್ಯುಮ್ನ-ಅನಿರುದ್ಧಮೂರ್ತಿಗಳು.
 
ಎಂದರೆ
 
ವಿಶ್ವಾದ್ಯಾಃ
 

 
ಎಂದರೆ ವಿಶ್ವ-ತೈಜಸ-ಪ್ರಾಜ್ಞತುರೀಯ ಎಂಬ ನಾಲ್ಕು ಮೂರ್ತಿಗಳು, ಮತ್ತ್ವ ಮೊದಲಾಗಿ
ಶಿಂಶುಮಾರಾಂತವಾಗಿರುವ 13ಮೂರ್ತಿಗಳು; ಒಟ್ಟು ಒಂದು ನೂರು ಮೂರ್ತಿಗಳು.
 
ದೀಕ್ಷಾವಿಧಿ
 
ಪೂರ್ವೋಕ್ತವಿಧಿನಾಭ್ಯರ್ಚ್ಯ ಪ್ರತಿಮಾಂ ಶಿಷ್ಯಮೇವ ವಾ।
ಸ್ನಾಪಯೇತ್ ಪೂರ್ವಮರ್ಚಾಯಾಂ ಜಪೋಽನೂನಃ ಸಹಸ್ರತಃ ॥10।
 
೬೩
 
-
 
ಅರ್ಥ ಈ ಹಿಂದೆ ಹೇಳಿದಂತೆ ಕಲಶದಲ್ಲಿ ಪೀಠಪೂಜೆ, ಆವರಣದೇವತಾ
ಪೂಜೆ ಸಹಿತ ಅರ್ಭ್ಯಾದಿ ಷೋಡಶೋಪಚಾರದಿಂದ ಕಲಶವನ್ನು ಪೂಜಿಸಿ, ಹೀಗೆ
ಸಂಸ್ಕಾರದಿಂದ ಪವಿತ್ರವಾದ ಆ ಕಲಶಜಲದಿಂದ ಪ್ರತಿಮೆಗೆ ಅಭಿಷೇಕಿಸಬೇಕು.
ವೈಷ್ಣವದೀಕ್ಷೆಯನ್ನು ಹೊಂದುವ ಹಾಗೂ ಮಂತ್ರಸ್ವೀಕಾರಮಾಡಬೇಕಾದ ಶಿಷ್ಯನಿಗೂ
ಗುರುವು ದೀಕ್ಷೆಗಾಗಿ ಇದೇರೀತಿ ಅಭಿಷೇಕಿಸಬೇಕು. ಹೊಸ ಪ್ರತಿಮೆಗಳಿಗೆ ಅಭಿಷೇಕ-
ಮಾಡುವ ಮೊದಲು ಒಂದುಸಾವಿರಕ್ಕೆ ಕಡಿಮೆಯಾಗದಂತೆ ಮೂಲಮಂತ್ರವನ್ನು
 
ಜಪಿಸಬೇಕು.
 
ವ.ಟೀ. - ಸ್ನಾನಾತ್ ಪೂರ್ವ೦ ಸಹಸ್ರತೋ ಅನೂನಃ ಜಪಃ । ಶಿಷ್ಯಸ್ಯ ಸನ್ಯಾಸದೀಕ್ಷಾ
ಸ್ನಾನಾನಂತರಂ ಚ ಮೂಲಮಂತ್ರ ಪ್ರಣವಾಷ್ಟಾಕ್ಷರರೂಪ ತತ್ತನ್ಮೂರ್ತಿಮಂತ್ರಸ್ಯ
ಚಾಕ್ಷರಾಂಗನ್ಯಾಸಃ ಕರ್ತವ್ಯಃ ॥
 
ಟೀಕಾರ್ಥ - ಪ್ರತಿಮೆಗೆ ಅಭಿಷೇಕಮಾಡುವ ಮೊದಲು ಹೊಸದಾಗಿ ಪ್ರತಿಷ್ಠೆ ಮಾಡುವ
ಪ್ರತಿಮೆಯಾದರೆ ಪ್ರತಿಮೆಯನ್ನು ಮುಟ್ಟಿಕೊಂಡು ಸಾವಿರಕ್ಕೆ ಕಡಿಮೆಯಿಲ್ಲದಂತೆ
ಮೂಲಮಂತ್ರವನ್ನು ಜಪಿಸಬೇಕು. ಪ್ರತಿಷ್ಠಿತವಾದ ಪ್ರತಿಮೆಯಲ್ಲಾದರೆ ಯಥಾಶಕ್ತಿ
ಜಪಿಸಬೇಕು. ಸ್ನಾನಾನಂತರವೂ ಪ್ರತಿಮೆಯಲ್ಲಿ ಪ್ರಣವಾಷ್ಟಾಕ್ಷರ ಹಾಗೂ ಆಯಾಯ
ಮೂರ್ತಿಗಳ ಮಂತ್ರಗಳನ್ನು, ಆಯಾಯ ಅಂಗಗಳಲ್ಲಿ ತತ್ತ್ವನ್ಯಾಸಮಾತೃಕಾನ್ಯಾಸಗಳನ್ನೂ
ಮಾಡಬೇಕು. ಸನ್ಯಾಸದೀಕ್ಷೆಯನ್ನು ಹೊಂದಬೇಕಾದ ಶಿಷ್ಯನಿಗೆ ಕಲಶೋಕದಿಂದ
ಅಭಿಷೇಕ ಮಾಡಿ ನಂತರ ಮೂಲಮಂತ್ರವನ್ನು ಯಥಾಶಕ್ತಿ ಜಪಿಸಬೇಕು.
 
1. ವಿಶೇಷಾಂಶ -
 
ಕಲಶೋಕದಿಂದ ಉತ್ಸವ-ಪರ್ವಕಾಲಾದಿವಿಶೇಷಸಂದರ್ಭದಲ್ಲಿ ಪ್ರತಿಮೆಯನ್ನು ಮುಟ್ಟಿ ಸಾವಿರ