This page has not been fully proofread.

ದ್ವಿತೀಯೋಧ್ಯಾಯಃ
 
ಮಾತೃಕಾನ್ಯಾಸೋಕ್ತ ಅಜಾದಿ-ಕ್ಷಕಾರಾಂತ 51 ಅಕ್ಷರಗಳಿಂದ ಪ್ರತಿಪಾದ್ಯಮೂರ್ತಿ
ಗಳು; ಕೇಶವಾದಿ 24 ಮೂರ್ತಿಗಳು (51+24=75); ಆತ್ಮ, ಅಂತರಾತ್ಮ,
ಪರಮಾತ್ಮ, ಜ್ಞಾನಾತ್ಮ ಎಂಬ ನಾಲ್ಕು ಮೂರ್ತಿಗಳು (75+4=79); ವಾಸುದೇವ,
ಸಂಕರ್ಷಣ, ಪ್ರದ್ಯುಮ್ನ, ಅನಿರುದ್ಧ ಎಂಬ ನಾಲ್ಕು ಮೂರ್ತಿಗಳು (79+4583);
ವಿಶ್ವ, ತೈಜಸ, ಪ್ರಾಜ್ಞ, ತುರೀಯ ಎಂಬ ನಾಲ್ಕು ಮೂರ್ತಿಗಳು (83+4=87);
ಮತ್ಸ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ಶ್ರೀರಾಮ,
ವೇದವ್ಯಾಸ, ಶ್ರೀಕೃಷ್ಣ, ದತ್ತಾತ್ರೇಯ, ಬುದ್ಧ, ಕಲ್ಕಿ, ಶಿಂಶುಮಾರಗಳೆಂಬ
13ರೂಪಗಳು (87+13=100). ಎಂದರೆ ಒಟ್ಟು 100ರೂಪಗಳು. ಇವುಗಳು
ಕಲಶದಲ್ಲಿ ಸನ್ನಿಹಿತವಾಗಿದ್ದು ಕಲಶನಾಮಕವಾಗಿವೆ. ಈ ನೂರು ಮೂರ್ತಿಗಳಿಂದ
ಕೂಡಿರುವ ಮೂಲರೂಪಿ
ಶ್ರೀಮನ್ನಾರಾಯಣನನ್ನು ಕುಂಭೋದಕದಲ್ಲಿ
ಆವಾಹಿಸಬೇಕು. ಎಲ್ಲಿ ಕಲಶಪೂಜೆ ಮಾಡಬೇಕೆಂದು ವಿಧಿಸುವರೋ ಅಲ್ಲಿ
ಅಜಾದಿ-ಶಿಂಶುಮಾರಾಂತ ನೂರು ಕಲೆಗಳನ್ನು ಆವಾಹಿಸಬೇಕು. ಸನ್ಯಾಸಾದಿ
ದೀಕ್ಷೆಯ ಅಂಗವಾಗಿ ವಿಹಿತಕಲಶಪೂಜೆಮಾಡುವಾಗಲೂ ನೂರು ಕಲಶ-
ದೇವತೆಗಳನ್ನು ಆವಾಹಿಸಬೇಕು ಎಂದು ಭಾವ.
 
೬೧
 
1. ವಿಶೇಷಾಂಶ -
 
ದೇವಪೂಜೆಯಲ್ಲಿ ಸ್ನಾನೀಯಕಲಶ, ಪೂರ್ಣಕುಂಭ ಎಂಬ ಎರಡು (ಸ್ನಾನಕ್ಕೆ ಸಂಬಂಧಪಟ್ಟ?)
ಕಲಶಗಳಿವೆ. ಸ್ನಾನೀಯಕಲಶದಲ್ಲಿ ಅಜಾದಿಶಿಂಶುಮಾರವರೆಗಿನ ನೂರುರೂಪಗಳನ್ನು ಕ್ರಮವಾಗಿ
ಆವಾಹಿಸಬೇಕು. ಪ್ರಮಾಣ -
 
ಆಹೂಯ ಪೂಜಯೇದೇತಾಃ ಸ್ನಾನೀಯಕಲಶೇ ಬುಧಃ ।
 
- ಪಂಚರಾತ್ರ
 
ಪೂರ್ಣಕುಂಭದಲ್ಲಾದರೂ ಅಜಾದಿನೂರು ಮೂರ್ತಿಗಳೊಂದಿಗೆ ಉದ್ಯದ್ ಭಾಸ್ವತ್ ಎಂಬಲ್ಲಿ
ಹೇಳಿದ ಲಕ್ಷಣಗಳುಳ್ಳ ಮೂಲಮೂರ್ತಿಯನ್ನು ಆವಾಹಿಸಬೇಕು.
 
'ಏತಾಭಿಃ ಸಹಿತಾಂ ಮೂಲಮೂರ್ತಿಂ ಕುಂಭೋದಕೇ' ಎಂದು ವಿಶೇಷವಾಗಿ ತಂತ್ರಸಾರದಲ್ಲಿ
ಹೇಳಿದೆ. ಆದುದರಿಂದ ನೂರೊಂದು ಮೂರ್ತಿಗಳನ್ನು ಕುಂಭೋದಕದಲ್ಲಿ ಆವಾಹಿಸಬೇಕು.
ಆವಾಹನೆಯನ್ನು ಮಾಡುವಾಗ ಓಂ ಶಿಂಶುಮಾರಾಯ ನಮಃ; ಕಲ್ಕಿನೇ ನಮಃ, ಬುದ್ಧಾಯ
ನಮಃ, ದತ್ತಾತ್ರೇಯಾಯ ನಮಃ, ಕೃಷ್ಣಾಯ ನಮಃ, ವೇದವ್ಯಾಸಾಯ ನಮಃ, ರಾಮಾಯ
ನಮಃ, ಪರಶುರಾಮಾಯ ನಮಃ, ವಾಮನಾಯ ನಮಃ, ನರಸಿಂಹಾಯ ನಮಃ, ವರಾಹಾಯ,
ಕೂರ್ಮಾಯ, ಮಾಯ,
 
ತುರೀಯಾಯ, ಪ್ರಾಜ್ಞಾಯ, ತೈಜಸಾಯ, ವಿಶ್ವಾಯ
 
ಸಂಕರ್ಷಣಾಯ, ವಾಸುದೇವಾಯ, ಪ್ರದ್ಯುಮ್ನಾಯ, ಅನಿರುದ್ಧಾಯ