This page has not been fully proofread.

ತಂತ್ರಸಾರಸಂಗ್ರಹ ಸಟೀಕಾ
 
ಹರಿತುಷ್ಟಿದಃ' ಇತ್ಯಾದಿವಾಕ್ಯಗಳಿಂದ ತಿಳಿಯಬಹುದಾಗಿದೆ.
 
ಈಗಿನ ಯಾತ್ರಿಕಯುಗದ ಭ್ರಮಿತಜನರು ತಂತ್ರಶಾಸ್ತ್ರದಿಂದ ದೂರಾಗಿ,
ವಿಜ್ಞಾನದಲ್ಲಿ ತಂತ್ರಶಾಸ್ತ್ರದ ಕೊಡುಗೆಯನ್ನು ತಿಳಿಯದವರಾಗಿದ್ದಾರೆ. ಶ್ರೀಮದಾ-
ಚಾರ್ಯರು ಈ ಕೃತಿಯಲ್ಲಿ ವಿಜ್ಞಾನಕ್ಕೆ ತಂತ್ರಶಾಸ್ತ್ರದ ಕೊಡುಗೆ ಏನೆಂಬುದನ್ನು
ಸಂಕ್ಷೇಪವಾಗಿ ತಿಳಿಸಿದ್ದಾರೆ. ಶ್ರೀಮದಾಚಾರ್ಯರು ತಮ್ಮ ಗ್ರಂಥಗಳಲ್ಲಿ ತಿಳಿಸಿರುವ
ಮಾನವನ ಮುಖ್ಯಧೈಯವಾದ ತತ್ವಜ್ಞಾನಸಂಪಾದನೆಯಲ್ಲಿ ತಂತ್ರಶಾಸ್ತ್ರವು ಹೇಗೆ
ಆವಶ್ಯ ಎಂಬುದನ್ನು ಕಾಣಬಹುದಾಗಿದೆ.
 
ಶ್ರೀಮದಾಚಾರ್ಯರ ಕಡೆಯ ಕೃತಿ ಎನಿಸಿದರೂ ಸಂಕ್ಷಿಪ್ತವಾದರೂ ನಿಖರವೂ,
ಶುದ್ಧರೂಪವೂ ಆಗಿ ಮೂಡಿಬಂದಿರುವುದು ಈ ಕೃತಿಯ ವೈಶಿಷ್ಟ್ಯ.
 
ಶ್ರೀಮದಾಚಾರ್ಯರು ಭಗವಂತನನ್ನು ತಿಳಿಯಬಯಸುವವರು ಶ್ರವಣಾದಿ-
ಗಳಲ್ಲಿ ಮಾತ್ರ ತೊಡಗದೆ ಯಜ್ಞಯಾಗಾದಿಕರ್ಮಗಳನ್ನೂ ಶುದ್ಧರೂಪದಲ್ಲಿ
ಆಚರಿಸಲೇಬೇಕು ಎಂದು ತಿಳಿಸಿ, ಅದನ್ನು ತಾವೇ ಪ್ರಾಯೋಗಿಕವಾಗಿ ಮಾಡಿ,
ಇತರರಿಂದ ಮಾಡಿಸಿಯೂ ಇರುತ್ತಾರೆ. ಗುರುಪುತ್ರ ವಾಸುದೇವನ ಮೂಲಕ
ಯಾಗವನ್ನು ಮಾಡಿಸಿದ್ದು ದೃಷ್ಟಾಂತವಾಗಿದೆ. ಕರ್ಮಾಚರಣೆಯ ಆವಶ್ಯಕತೆಯನ್ನು
ಸುಮಧ್ವವಿಜಯವೂ ತಿಳಿಸಿದೆ "ಬ್ರಹ್ಮವೇದನನಿವಿಷ್ಟಚೇತಸಾಂ ಕರ್ಮ ತತ್ರ
ಕರಣಾಂತರಂ ಭವೇತ್', ಇತರ ಆಚಾರ್ಯರ (ತಂತ್ರಗಳ ಮೇಲಿನ?) ಕೃತಿಗಳು
ಗಾತ್ರದಲ್ಲಿ ಬೃಹತ್ತಾದರೂ ಶುದ್ಧವಾಗಿಲ್ಲ. ತಾಮಸತಂತ್ರಗಳಿಗೆ ಶರಣಾಗಿರುವ
ಅಂಶಗಳನ್ನು ಅವುಗಳಲ್ಲಿ ಕಾಣಬಹುದಾಗಿದೆ. ಮತ್ತೆ ಕೆಲವರದು ಪೂಜೆಗೆ ಮಾತ್ರ
ಸೀಮಿತವಾಗಿದ್ದು ಇತರ ವಿಷಯಗಳ ಗೋಜಿಗೆ ಹೋಗದೇ ತೆಪ್ಪಗಾಗಿವೆ.
 
ಶ್ರೀಮದಾಚಾರ್ಯರ ಈ ಕೃತಿಯಾದರೋ ಗಾತ್ರದಲ್ಲಿ ಚಿಕ್ಕದಾದರೂ
ಮಹತ್ವದಲ್ಲಿ ಇತರ ಗ್ರಂಥಗಳನ್ನು ಮೀರಿ ನಿಂತಿದೆ. ಅಷ್ಟಲ್ಲದೇ ಇದು ಶುದ್ಧ
ವೈಷ್ಣವವಾಗಿದ್ದು, ಶುದ್ಧವೈದಿಕವಾಗಿದ್ದು, ಶುದ್ಧಸಾತ್ವಿಕವಾಗಿದೆ ಎಂಬುದೂ ಮತ್ತೊಂದು
 
ವಿಶೇಷ.
 
ತಂತ್ರಸಾರಗ್ರಂಥವು ಪರಮಪ್ರಾಮಾಣಿಕವಾಗಿದ್ದು ಸ್ವಕಪೋಲಕಲ್ಪಿತವಾದ ಯಾವ
ಅಂಶವೂ ಇದರಲ್ಲಿ ನುಸುಳಿಲ್ಲ. ಆಚಾರ್ಯರೇ ತಿಳಿಸುವಂತೆ ಅವರ ಈ ಗ್ರಂಥಕ್ಕೆ
(ಆಧಾರ?) ಶ್ರೀಮಹಾವಿಷ್ಣುವೇ ರಚಿಸಿರುವ ತಂತ್ರಸಾರ.