This page has not been fully proofread.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 2
 
ಪಾಪಪುರುಷವಿಸರ್ಜನೆ
 
ಅರ್ಥ
 
ಆದಾವೇವ ಜಪೇ ಕುರ್ಯಾತ್ ಶೋಷಣಂ ದಹನಂ ಪುತಿಮ್ ।
ವಾಯ್ಸಗ್ನವಾರು: ಬೀಜೈ: ಧ್ಯಾತ್ವಾ ತನ್ಮಂಡಲೇ ಹರಿಮ್ ॥6॥
ಮಂತ್ರಜಪದ ಮೊದಲಲ್ಲೇ ಅಧಿಕಾರಿಯು ವಾಯು, ಅಗ್ನಿ, ವರುಣ
ಬೀಜಾಕ್ಷರಗಳೆನಿಸಿದ ಯಂ, ರಂ, ವಂ ಬೀಜಾಕ್ಷರಗಳ ಜಪದಿಂದ ಉದರ, ಹೃದಯ
ಮತ್ತು ತಲೆಗಳಲ್ಲಿ ಶ್ರೀಹರಿಯನ್ನು ಧ್ಯಾನಿಸಿ ಪಾಪಪುರುಷನ ಶೋಷಣೆ ದಹನ
ಹಾಗೂ ಅಮೃತಪ್ಪಾವನವನ್ನು ಮಾಡಬೇಕು.
 
-
 
ವ.ಟೀ. - ಆಯಮತ್ರ ಕ್ರಮಃ - (೧) ಭೂತೋಚ್ಚಾಟನಂ (೨)ಆಸನಶುದ್ಧಿ: (೩) ಗುರು
-ನಮಸ್ಕಾರ: (೪)ವಾಯಗ್ನಿಬೀಜೈ: ಶೋಷಣದಹನಪ್ಪಾವನಾನಿ (೫)ಕರನ್ಯಾಸಶ್ಚ ಏತೈಃ
ಬೀಜೈಃ ಕಾರ್ಯಃ । ಅನಂತರಂ ಮಾತೃಕಾನ್ಯಾಸಃ । ವಕ್ಷಮಾಣಪ್ರಕಾರೇಣ ತತ್ತ್ವನ್ಯಾಸಃ ।
ಅನಂತರಮುಕ್ತನ್ಯಾಯೇನ ಪ್ರಣವೇನ ದಶತಾರಯುಕ್ತಗಾಯತ್ರಾ ತತ್ತನಂತ್ರೇಣ ವಾ
ಪ್ರಾಣಾಯಾಮಂ ಕೃತ್ವಾ ಅಂಗನ್ಯಾಸಮ್ ಅಕ್ಷರನ್ಯಾಸಂ ಚ ಕೃತ್ವಾ ಧ್ಯಾನಶ್ಲೋಕೋಕ್ತ-
ಪ್ರಕಾರೇಣ ಧ್ಯಾನಪೂರ್ವಕಂ ಜಪಮಾರಭೇತ್ ॥
 
ಟೀಕಾರ್ಥ- ಇಲ್ಲಿರುವ ಕ್ರಮ ಹೀಗೆ ತಿಳಿಯಬೇಕು
 
ಮೊದಲು ಭೂತೋಚ್ಚಾಟನೆಯನ್ನು ಮಾಡಿಕೊಳ್ಳಬೇಕು. ನಂತರ ಆಸನಶುದ್ಧಿ;
ದ್ವಾದಶಗುರುಗಳ ನಮಸ್ಕಾರ ವಾಯು, ಅಗ್ನಿ, ವರುಣಬೀಜಾಕ್ಷರಗಳಿಂದ ಶೋಷಣ,
ದಹನ, ಪ್ಲವನಗಳನ್ನು ಮಾಡಿಕೊಳ್ಳಬೇಕು. ಈ ಬೀಜಾಕ್ಷರಗಳಿಂದ ಕರನ್ಯಾಸವನ್ನು
ಮಾಡಬೇಕು. ನಂತರ ಮಾತೃಕಾನ್ಯಾಸ, ಮುಂದೆ ಹೇಳುವ ರೀತಿಯಿಂದ ತತ್ವನ್ಯಾಸವನ್ನು
ಮಾಡಿಕೊಳ್ಳಬೇಕು. ಅನಂತರ ಹಿಂದೆ ಹೇಳಿದಂತೆ ಪ್ರಣವದಿಂದಾಗಲೀ, ದಶೋಂಕಾರ
ಗಾಯತ್ರಿಯಿಂದಾಗಲೀ, ಆಯಾಯಾ ಮಂತ್ರಗಳಿಂದಾಗಲೀ ಪ್ರಾಣಾಯಾಮವನ್ನು ಮಾಡಿ,
ಅಂಗನ್ಯಾಸ ಹಾಗೂ ಅಕ್ಷರನ್ಯಾಸಗಳನ್ನು ಮಾಡಿ, ಧ್ಯಾನಶ್ಲೋಕದಲ್ಲಿ ಹೇಳಿದ ರೀತಿಯಂತೆ
ಆ ಧೈಯಮೂರ್ತಿಯನ್ನು ಧ್ಯಾನಿಸುತ್ತಾ ಜಪ ಮಾಡಬೇಕು.೧
 
1. ಆಸನಮಂತ್ರ
 
ಪೃಥ್ವಿತಿಮಂತ್ರಸ್ಯ ಮೇರುಕೃಷ್ಠ ಋಷಿಃ 1 ಕೊರ್ಮೊ ದೇವತಾ । ಸುತಲಂ ಛಂದಃ ।
 
ಆಸನೇ ವಿನಿಯೋಗಃ ।
 
ಪೃಥ್ವಿ! ತ್ವಯಾ ಧೃತಾ ಲೋಕಾ ದೇವಿ! ತ್ವಂ ವಿಷ್ಣುನಾ ಧೃತಾ ।
ತ್ವಂ ಚ ಧಾರಯ ಮಾಂ ದೇವಿ ಪವಿತ್ರಂ ಕುರು ಚಾಸನಮ್ ॥ ಇತಿ ।