This page has not been fully proofread.

ದ್ವಿತೀಯೋಧ್ಯಾಯಃ
 
ವ.ಟೀ.
 
ಪ್ರಾಣಾಯಾಮಃ
 
ರೇಚಯಿತ್ವಾ । ವಾಮತಃ ಶ್ವಾಸಸ್ಯ ಅಧೋ
ಊರ್ಧ್ವವಿಸರ್ಜನಂ ಕೃತ್ವಾ; ದಕ್ಷಿಣತೋ
 
ಕುಂಭಕೇ ವಿಹಿತತ್ವಾದಿತಿ ಶೇಷಃ । ಕಿಂ ಕೃತ್ವಾ?
ವಿಸರ್ಜನಂ ಕೃತ್ವಾ । ದಕ್ಷಿಣತಃ ಶ್ವಾಸಸ್ಯ
ರೇಚನಮ್, ವಾಮತಃ ಪೂರಣಮಿತಿ ವಾ ।
ಕುಂಭಕಃ = ಶ್ವಾಸನಿರೋಧಃ । ತ್ರಿರ್ದ್ವಾದಶಾವೃತೈಃ = ಷಟ್ರೋಂಪೈಃ, ದೈಕಾದಶಕೇನ
ವಾ । ಶಕ್ಯಭಾವೇ ದ್ವಿದ್ವಾದಶಕೇನ = ಚತುರ್ವಿಂಶೈಃ । ಏಕಾದಶೈಃ । ಗಾಯತ್ರಾ
ದಶತಾರಕ್ಕೆ: ಓಂ ಭೂರಿತ್ಯಾರಭ್ಯ - ಸುವರೋಮಿತ್ಯಂತೈಃ ಗಾಯತ್ಯಾದಶಪ್ರಣ: ।
ಟೀಕಾರ್ಥ
ಪ್ರಾಣಾಯಾಮವನ್ನು ತಿಳಿಸುತ್ತಾರೆ. 'ಕುಂಭಕೇ' ಎಂಬುದರ ನಂತರ
'ವಿಹಿತತ್ವಾತ್' ಎಂಬ ಪದವನ್ನು ತಿಳಿಯಬೇಕು. ಸುಷುಮ್ಮಾನಾಡಿಯಲ್ಲಿ ವಾಯು-
ನಿರೋಧವು ವಿಧಿಸಲ್ಪಟ್ಟ ಕಾರಣದಿಂದ ಎಂದರ್ಥ. ಏನು ಮಾಡಿ ಕುಂಭಕ ಮಾಡಬೇಕು?
ಎಂದರೆ 'ರೇಚನ ಮಾಡಿ' ಎಂದು ಉತ್ತರ. ಮೂಗಿನ ಎಡಭಾಗದ ರಂಧ್ರದಿಂದ
ಒಳಗಿರುವ ಗಾಳಿಯನ್ನು ಹೊರದಬ್ಬಿ, ಬಲಭಾಗದ ರಂಧ್ರದಿಂದ ಶುದ್ಧಗಾಳಿಯನ್ನು
ಮೇಲಕ್ಕಳೆದುಕೊಂಡು (ಒಳತೆಗೆದುಕೊಂಡು, ಕುಂಭಕವನ್ನು ಮಾಡಬೇಕು ಎಂದರ್ಥ.
ಅಥವಾ, ಬಲಭಾಗದ ಹೊಳ್ಳೆಯಿಂದ ಗಾಳಿಯನ್ನು ಹೊರಗೆ ಹಾಕಿ, ಎಡಭಾಗದ
ಹೊಳ್ಳೆಯಿಂದ ಶುದ್ಧಗಾಳಿಯನ್ನು ಸೆಳೆದುಕೊಳ್ಳಬಹುದು.
ಯಾವ ಕ್ರಮವನ್ನು
ಅನುಸರಿಸಿರುತ್ತೇವೆಯೋ ಹಾಗೆಯೇ ಮುಂದುವರೆಸಿಕೊಂಡು ಹೋಗಬೇಕು.
 
ಶ್ಲೋಕದಲ್ಲಿರುವ ತ್ರಿರ್ಧ್ವಾದಶಾವೃತೈಃ ಎಂದರೆ ದ್ವಾದಶವನ್ನು ಮೂರರಿಂದ ಗುಣಿಸಿದರೆ
ಬರುವಷ್ಟು ಎಂದರ್ಥ. ಅಂದರೆ 36ಬಾರಿ ಅಥವಾ ದ್ವಿರ್ದ್ವಾದಶಕದಿಂದಲೂ,
ಏಕದ್ವಾದಶಕದಿಂದಲೂ ಪ್ರಾಣಾಯಾಮ ಮಾಡಬಹುದು. ಇಪ್ಪತ್ತನಾಲ್ಕು ಬಾರಿ,
ಹನ್ನೆರಡುಬಾರಿಯಾದರೂ ಓಂಕಾರವನ್ನು ಉಚ್ಚರಿಸುತ್ತಾ ಪ್ರಾಣಾಯಾಮ ಮಾಡಬಹುದು.
ಶಕ್ತಿ ಇದ್ದವರು 36, ಅಶಕ್ತರಾದರೆ 24 ಅಥವಾ 12ಬಾರಿ ಜಪಿಸಬಹುದು.
 
-
 
೫೫
 
ಅಥವಾ ಹತ್ತು ಓಂಕಾರಗಳಿರುವ ಗಾಯತ್ರೀಯಿಂದಲಾದರೂ ಪ್ರಾಣಾಯಾಮ
ವಿಹಿತವಾಗಿದೆ. ಓಂಕಾರದಿಂದ ಪ್ರಾಣಾಯಾಮ ಸನ್ಯಾಸಿಗಳಿಗಾದರೆ ದಶೋಂಕಾರ-
ಗಾಯತ್ರೀಯಿಂದ ಗೃಹಸ್ಥರಿಗೆ
 
ದಶ೦ಕಾರಗಾಯತ್ರಿಯ ಸ್ವರೂಪವು ಹೀಗಿದೆ 'ಓಂ' ಭೂಃ, ಓಂ' ಭುವಃ, ಓಂ
ಸ್ವಃ, ಓಂ ಮಹಃ, ಓಂ ಜನಃ, ಓಂ ತಪಃ, ಓಂ' ಸತ್ಯಮ್, ಓಂ ತತ್ಸವಿತುರ್ವರೇಣ್ಯಂ
ಭರ್ಗೊ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್ । ಓಂ ಆಪೋ
ಜ್ಯೋತೀರಸೋsಮೃತಂ ಬ್ರಹ್ಮ ಭೂರ್ಭುವಃ ಸ್ವರೋಮ್!'' ಎಂಬುದಾಗಿ.
 
ಮುದ್ರೇಯಂ ಸರ್ವಪಾಪಪ್ಪಾ ವಾನಪ್ರಸ್ಥಗೃಹಸ್ಥಯೋ ॥
 
www