2023-05-06 12:23:52 by jayusudindra
This page has been fully proofread once and needs a second look.
ಪ್ರಾಣಾಯಾಮ ಎಂದು ಹೆಸರು.
ಪ್ರಾಣಾಯಾಮ ಮಾಡುವಾಗ 36 ಓಂಕಾರಗಳನ್ನು (12•3), ಹನ್ನೆರಡನ್ನು ಮೂರುಬಾರಿ ಗುಣಿಸಿ ಬಂದ ಸಂಖ್ಯೆಯಷ್ಟು (12•3=36) ಓಂಕಾರವನ್ನು ಉಚ್ಚರಿಸಿಯಾಗಲೀ, ಹನ್ನೆರಡನ್ನು ಎರಡು ಬಾರಿ ಗುಣಿಸಿ ಬಂದ ಸಂಖ್ಯೆಯಷ್ಟು (12x2=24); ಹನ್ನೆರಡು ಸಂಖ್ಯೆಯಿಂದಾಗಲೀ ಓಂಕಾರವನ್ನು ಉಚ್ಚರಿಸಿ
ಸನ್ಯಾಸಿಗಳು ಪ್ರಾಣಾಯಾಮವನ್ನು ಮಾಡಬೇಕು. ಹಾಗೆಯೇ ಕೃಷ್ಣಾದಿ ಯಾವ ಮಂತ್ರವನ್ನು ಜಪಿಸಬೇಕೋ ಆ ಮಂತ್ರದಿಂ-ದಾಗಲೀ ಮೇಲೆ ಹೇಳಿದಷ್ಟು ಬಾರಿ ಜಪಿಸುವುದು, ಹಾಗೂ ಹತ್ತು ಓಂಕಾರಗಳಿರುವ ಗಾಯತ್ರಿಯಿಂದಾಗಲೀ ಪ್ರಾಣಾಯಾಮವನ್ನು [^1]ಮಾಡಬೇಕು.
1. ವಿಶೇಷಾಂಶ - ಪ್ರಾಣಾಯಾಮವನ್ನು ಮಾಡಿದಾಗ ಹೃದಯ- ದಲ್ಲಿರುವ ನರಸಿಂಹನ ಜ್ವಾಲೆ ಉಜ್ವಲಗೊಳ್ಳುತ್ತದೆ. ಇದರಿಂದಾಗಿ ಸಮಸ್ತಪಾಪಗಳೂ ಸುಟ್ಟು ಭಸ್ಮವಾಗುತ್ತವೆ. ಅದನ್ನು ಘ್ರಾಣದ (ಮೂಗಿನ) ಬಲಹೊಳ್ಳೆಯಿಂದ ಹೊರಹಾಕಿದಾಗ ಜೀವನು ಪುಟವಿಟ್ಟ ಬಂಗಾರದಂತೆ ಶುದ್ದನಾಗುವನು. ತಲೆಯ ಮೇಲಿರುವ ಸಹಸ್ರಾರಪದ್ಮದಲ್ಲಿರುವ ಚಂದ್ರಮಂಡಲದಿಂದ ಅಮೃತ ಸುರಿದು ಶರೀರವೂ ಶುದ್ಧವಾಗುತ್ತದೆ. ಹೀಗೆ ಜೀವ-ಶರೀರವೆರಡೂ ಶುದ್ಧಿಯಾಗುವ ವಿಧಾನವೇ ಪ್ರಾಣಾಯಾಮ.
ಮೂರುವರ್ಷ ಪ್ರಾಣಾಯಾಮ ಮಾಡಿದ ವ್ಯಕ್ತಿಯು ಅಪಮೃತ್ಯು ವನ್ನು ಗೆದ್ದು ದೀರ್ಘಾಯುಷಿನಾಗುವನು :
ಸಂವತ್ಸರತ್ರಯಾದೂರ್ಧ್ವ೦ ಪ್ರಾಣಾಯಾಮಪರೋ ನರಃ ।
ಅಪಮೃತ್ಯುಮತಿಕ್ರಮ್ಯ ದೀರ್ಘಮಾಯುರವಾಪ್ನುಯಾತ್ ॥
ಯತಿಗಳ ಪ್ರಾಣಾಯಾಮ- ಮೂಗಿನ ತುದಿಯನ್ನು ಕನಿಷ್ಠಿಕಾ, ಅನಾಮಿಕಾ ಬೆರಳುಗಳಿಂದಲೂ, ಬಲಭಾಗದಲ್ಲಿ ಅಂಗುಷ್ಠ- ದಿಂದಲೂ ಒತ್ತಿ ಹಿಡಿಯುವುದು ಓಂಕಾರಮುದ್ರಿಕೆ ಎನಿಸಿದ್ದು ಯತಿಗಳು ಮತ್ತು ಬ್ರಹ್ಮಚಾರಿಗಳಿಗೆ ವಿಹಿತವಾಗಿದೆ.
ಐದೂ ಬೆರಳುಗಳ ತುದಿಯಿಂದ ಮೂಗನ್ನು ಒತ್ತಿ ಹಿಡಿಯುವುದು 'ಪ್ರಣವಮುದ್ರೆ' ಎನಿಸಿದ್ದು ಗೃಹಸ್ಥಾಶ್ರಮಿಗಳಿಗೆ ಪ್ರಶಸ್ತವಾಗಿದೆ.
ಕನಿಷ್ಠಿಕಾನಾಮಿಕಾಂಗುಷ್ಠೈಃ ನಾಸಾಗ್ರಸ್ಯ ಪ್ರಪೀಡನಮ್ ।
ಓಂಕಾರಮುದ್ರಿಕಾ ಸೇಯಂ ಯತೇಶ್ಚಬ್ರಹ್ಮಚಾರಿಣಃ ॥
ಪಂಚಾಂಗುಲಿಭಿಃ ನಾಸಾಗ್ರಪೀಡನಂ ಪ್ರಣವಾಭಿಧಾ ।