This page has not been fully proofread.

೫೪
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 2
 
ಪ್ರಾಣಾಯಾಮ ಎಂದು ಹೆಸರು.
 
ಪ್ರಾಣಾಯಾಮ ಮಾಡುವಾಗ 36 ಓಂಕಾರಗಳನ್ನು (12•3), ಹನ್ನೆರಡನ್ನು
ಮೂರುಬಾರಿ ಗುಣಿಸಿ ಬಂದ ಸಂಖ್ಯೆಯಷ್ಟು (12•3=36) ಓಂಕಾರವನ್ನು
ಉಚ್ಚರಿಸಿಯಾಗಲೀ, ಹನ್ನೆರಡನ್ನು ಎರಡು ಬಾರಿ ಗುಣಿಸಿ ಬಂದ ಸಂಖ್ಯೆಯಷ್ಟು
(12x2=24); ಹನ್ನೆರಡು ಸಂಖ್ಯೆಯಿಂದಾಗಲೀ ಓಂಕಾರವನ್ನು ಉಚ್ಚರಿಸಿ
ಸನ್ಯಾಸಿಗಳು ಪ್ರಾಣಾಯಾಮವನ್ನು ಮಾಡಬೇಕು. ಹಾಗೆಯೇ ಕೃಷ್ಣಾದಿ ಯಾವ
ಮಂತ್ರವನ್ನು ಜಪಿಸಬೇಕೋ ಆ ಮಂತ್ರದಿಂದಾಗಲೀ ಮೇಲೆ ಹೇಳಿದಷ್ಟು ಬಾರಿ
ಜಪಿಸುವುದು, ಹಾಗೂ ಹತ್ತು ಓಂಕಾರಗಳಿರುವ ಗಾಯತ್ರಿಯಿಂದಾಗಲೀ
ಪ್ರಾಣಾಯಾಮವನ್ನು ಮಾಡಬೇಕು.
 
1. ವಿಶೇಷಾಂಶ -
 
ಪ್ರಾಣಾಯಾಮವನ್ನು ಮಾಡಿದಾಗ ಹೃದಯದಲ್ಲಿರುವ ನರಸಿಂಹನ ಜ್ವಾಲೆ ಉಜ್ವಲಗೊಳ್ಳು-
ತದೆ. ಇದರಿಂದಾಗಿ ಸಮಸ್ತಪಾಪಗಳೂ ಸುಟ್ಟು ಭಸ್ಮವಾಗುತ್ತವೆ. ಅದನ್ನು ಪ್ರಾಣದ
(ಮೂಗಿನ) ಬಲಹೊಳ್ಳೆಯಿಂದ ಹೊರಹಾಕಿದಾಗ ಜೀವನು ಪುಟವಿಟ್ಟ ಬಂಗಾರದಂತೆ
ಶುದ್ದನಾಗುವನು. ತಲೆಯ ಮೇಲಿರುವ ಸಹಸ್ರಾರಪದದಲ್ಲಿರುವ ಚಂದ್ರಮಂಡಲದಿಂದ
ಅಮೃತ ಸುರಿದು ಶರೀರವೂ ಶುದ್ಧವಾಗುತ್ತದೆ. ಹೀಗೆ ಜೀವ-ಶರೀರವೆರಡೂ ಶುದ್ಧಿಯಾಗುವ
ವಿಧಾನವೇ ಪ್ರಾಣಾಯಾಮ.
 
ಮೂರುವರ್ಷ ಪ್ರಾಣಾಯಾಮ ಮಾಡಿದ ವ್ಯಕ್ತಿಯು ಅಪಮೃತ್ಯುವನ್ನು ಗೆದ್ದು ದೀರ್ಘಾ-
ಯುಷಿನಾಗುವನು :
 
ಸಂವತ್ಸರತ್ರಯಾದೂರ್ಧ್ವ೦ ಪ್ರಾಣಾಯಾಮಪರೋ ನರಃ ।
ಅಪಮೃತ್ಯು ಮತಿಕ್ರಮ್ಯ ದೀರ್ಘಮಾಯುರವಾಪ್ಪುಯಾತ್ ॥
ಯತಿಗಳ ಪ್ರಾಣಾಯಾಮ-
ಮೂಗಿನ ತುದಿಯನ್ನು ಕನಿಷ್ಠಿಕಾ, ಅನಾಮಿಕಾ ಬೆರಳುಗಳಿಂದಲೂ, ಬಲಭಾಗದಲ್ಲಿ
ಅಂಗುಷ್ಠದಿಂದಲೂ ಒತ್ತಿ ಹಿಡಿಯುವುದು ಓಂಕಾರಮುದ್ರಿಕೆ ಎನಿಸಿದ್ದು ಯತಿಗಳು
ಮತ್ತು ಬ್ರಹ್ಮಚಾರಿಗಳಿಗೆ ವಿಹಿತವಾಗಿದೆ.
 
ಐದೂ ಬೆರಳುಗಳ ತುದಿಯಿಂದ ಮೂಗನ್ನು ಒತ್ತಿ ಹಿಡಿಯುವುದು 'ಪ್ರಣವಮುದ್ರೆ'
ಎನಿಸಿದ್ದು ಗೃಹಸ್ಥಾಶ್ರಮಿಗಳಿಗೆ ಪ್ರಶಸ್ತವಾಗಿದೆ.
 
ಕನಿಷ್ಠಿಕಾನಾಮಿಕಾಂಗು: ನಾಸಾಗ್ರಸ್ಯ ಪ್ರಪೀಡನಮ್ ।
ಓಂಕಾರಮುದ್ರಿಕಾ ಸೇಯಂ ಯತೇಶ್ಚಬ್ರಹ್ಮಚಾರಿಣಃ ॥
ಪಂಚಾಂಗುಲಿಭಿಃ ನಾಸಾಗ್ರಪೀಡನಂ ಪ್ರಣವಾಭಿಧಾ ।