This page has been fully proofread once and needs a second look.

32-36 - ಎಡಗಾಲಿನ ಸಂಧಿ ಹಾಗೂ ಅಗ್ರಭಾಗಗಳು;
37-38 – ಹೊಟ್ಟೆಯ ಬಲ-ಎಡಪಾರ್ಶ್ವಗಳು;
39 – ಹೊಟ್ಟೆಯ ಹಿಂಭಾಗ;
40 - ಗುಹ್ಯೇಂದ್ರಿಯ;
41- ಗುದ;
42 -ಹೃದಯ;
43 - ತ್ವಕ್;
44 - ಚರ್ಮ;
45 - ಮಾಂಸ;
46 - ರಕ್ತ;
47 - ಮೇದಸ್ಸು;
48 - ಮಜ್ಜೆ ;
49 - ಎಲುಬು;
50 - ಪ್ರಾಣ;
51 - ಜೀವ.
ಕ್ಷಕಾರಕ್ಕೆ ನರಸಿಂಹನು ದೇವತೆ, ಮಾತೃಕಾಜಪದಲ್ಲಿ ಹಾಗೂ ಮಾತೃಕಾನ್ಯಾಸದಲ್ಲಿ ಕ್ಷಕಾರವನ್ನು ಕಡೆಯಲ್ಲಿ ಹೇಳಬೇಕು.
 
ವ.ಟೀ - ಏತದಧ್ಯಾಯೇ ಅಕ್ಷರನ್ಯಾಸ-ಪ್ರಾಣಾಯಾಮ-ಕಲಶಾ- ರ್ಚನಾದಿಕಂ ನಿರೂಪಯತಿ - ಯಸ್ಯೇತ್ಯಾದಿನಾ ॥ ಕೇ = ಶಿರಸಿ, ಅಭಿತೋ ವಕ್ತ್ರಂ=ಸರ್ವತಃ ಪ್ರದಕ್ಷಿಣೇನ ಮುಖೇ । ಮೂರ್ಧ್ನಿ ವಾ ಉಪರಿ । ವಾಚಿ ಗತಃ । ತುಂದೇ = ಉದರೇ।
 
ಟೀಕಾರ್ಥ- ಈ ಎರಡನೆಯ ಅಧ್ಯಾಯದಲ್ಲಿ ಮಾತೃಕಾನ್ಯಾಸ, ಪ್ರಾಣಾಯಾಮ, ಕಲಶಪೂಜೆ ಮೊದಲಾದವುಗಳನ್ನು ನಿರೂಪಿಸು ತ್ತಾರೆ. ಕೇ = ಎಂದರೆ 'ತಲೆಯಲ್ಲಿ' ಎಂದರ್ಥ. ಅಭಿತಃ ವಕ್ತ್ರಂ= ಎಂದರೆ ಪ್ರದಕ್ಷಿಣಾಕಾರವಾಗಿ ಇಡೀ ಮುಖವನ್ನು ಮುಟ್ಟಬೇಕು ಎಂದು ಭಾವ, ಮೂರ್ಧ್ನಿ ಉಪರಿ = ತಲೆಯ ಮೇಲೆ, ವಾಚಿ ಎಂದರೆ ಬಾಯಿ ಎಂದು ತಿಳಿಸಿದೆ.
 
ಪ್ರಾಣಾಯಾಮ
 
ಪ್ರಾಣಾಯಾಮೋ[^1] ರೇಚಯಿತ್ವಾ ಪೂರಯಿತ್ವಾ ಚ ಕುಂಭಕೇ ॥ ೪ ॥
 
ತಾರೈಸ್ತ್ರಿದ್ವಾದಶಾವರ್ತೈಃ ದ್ವ್ಯೇಕದ್ವಾದಶಕೇನ ವಾ ।
ತತ್ತನ್ಮಂತ್ರೇಣ ವಾ ಕಾರ್ಯೋ ಗಾಯತ್ರ್ಯಾ ದಶತಾರಕೈಃ ॥ ೫ ॥
 
ಅರ್ಥ - ಬಲಹೊಳ್ಳೆಯಿಂದ ಶ್ವಾಸವಾಯುವನ್ನು ಹೊರಗೆ ಬಿಡುವುದು ರೇಚಕ, ಎಡಹೊಳ್ಳೆಯಿಂದ ಶುದ್ಧಗಾಳಿಯನ್ನು ಸೆಳೆಯುವುದು ಪೂರಕ, ಅಂಗುಲಿಗಳಿಂದ ಎರಡೂ ಹೊಳ್ಳೆ- ಗಳನ್ನು ಸುಷುಮ್ನಾ ನಾಡಿಯಲ್ಲಿ ವಾಯುನಿರೋಧಿಸುವುದಕ್ಕೆ
 

 
 
[^1]. ರೇಚಯೇದ್ ದಕ್ಷಯಾ ನಾಸಾ ಪೂರಯೇದ್ ವಾಮತಸ್ತತಃ ।
ಕುಂಭಕಶ್ಚ ಸುಷುಮ್ನಾಯಾ ವಿಷ್ಣುಂ ವಾಯುಂ ಚ ಸಂಸ್ಮರೇತ್ ।
ಪ್ರಾಣೋ ವಾಯುರಿತಿ ಪ್ರೋಕ್ತಃ ಆಯಾಮಃ ತನ್ನಿರೋಧನಮ್ ॥