This page has been fully proofread once and needs a second look.

ದ್ವಿತೀಯೋsಧ್ಯಾಯಃ
 
ಮಾತೃಕಾನ್ಯಾಸಪದ್ಧತಿ
 
ಯಸ್ಯ ಕಸ್ಯಾಪಿ ಮಂತ್ರಸ್ಯ ನ್ಯಾಸಃ ಪಂಚಾಶದಕ್ಷರೈಃ ।
ವೀರ್ಯದಃ ಕೇಽಭಿತೋ ವಕ್ತ್ರಮಕ್ಷಿಕರ್ಣೇಷು ನಾಸಯೋಃ ॥ ೧ ॥
 
ಗಂಡಯೋರೋಷ್ಠಯೋರ್ದಂತಪಂಕ್ತ್ಯೋರ್ಮೂರ್ಧನಿ ವಾಚಿ ಚ ।
ದೋಃ ಪತ್ಸಂಧಿಷು ಸಾಗ್ರೇಷು ಪಾರ್ಶ್ವಯೋಃ ಪೃಷ್ಠಗುಹ್ಯಯೋಃ ॥ ೨ ॥
 
ತುಂದೇ ಚ ಹೃದಿ ಧಾತೂನಾಂ ಸಪ್ತಕೇ ಪ್ರಾಣಜೀವಯೋಃ ।
ಸಕ್ಷಕಾರಾನ್ ನ್ಯಸೇದ್ವರ್ಣಾನ್ ನೃಸಿಂಹಃ ಕ್ಷಸ್ಯ ದೇವತಾ ॥ ೩ ॥
 
ಜಪೇ ನ್ಯಾಸೇ ಚ ವಿಹಿತಃ ಕ್ಷೋऽಕ್ಷರಾಣಾಂ ಸದಾಂऽತತಃ ।
 
ಅರ್ಥ- ಯಾವುದೇ ಮಂತ್ರವನ್ನು ಜಪಮಾಡುವಾಗ ಜಪದ ಆದಿಯಲ್ಲಿ ಹಾಗೂ ಅಂತ್ಯದಲ್ಲಿ 'ಓಂ ಅಂ ಅಜಾಯ ನಮಃ' ಇತ್ಯಾದಿ ಐವತ್ತು ಅಕ್ಷರಗಳಿಂದ ಮಾತೃಕಾನ್ಯಾಸವನ್ನು ಮಾಡಿ ಕೊಳ್ಳಬೇಕು. ಹೀಗೆ ಮಂತ್ರಜಪದ ಆದ್ಯಂತಗಳಲ್ಲಿ ಐವತ್ತು ಅಕ್ಷರಗಳ ನ್ಯಾಸವು ಮಂತ್ರವನ್ನು ವೀರ್ಯವತ್ತಾಗಿ ಮಾಡಿ ಅಭೀಷ್ಟಫಲ ನೀಡುವಲ್ಲಿ ಸಮರ್ಥವಾಗುತ್ತದೆ.
 
ಐವತ್ತು ಅಕ್ಷರಗಳ ನ್ಯಾಸಸ್ಥಾನಗಳು ಹೀಗಿವೆ -
 
1- ಹಣೆಯ ಮೇಲ್ಭಾಗ;
2- ಮುಖ;
3- ಬಲಗಣ್ಣು;
4- ಎಡಗಣ್ಣು;
5 - ಬಲಗಿವಿ;
6 - ಎಡಗಿವಿ;
7 - ಬಲಮೂಗಿನ ಹೊಳ್ಳೆ ;
8 - ಎಡಮೂಗಿನ ಹೊಳ್ಳೆ;
9 - ಬಲಗೆನ್ನೆ;
10 - ಎಡಗೆನ್ನೆ;
11 – ತುಟಿಯ ಮೇಲ್ಭಾಗ
12 - ಕೆಳ ತುಟಿ;
13 - ಮೇಲಿನ ದಂತಪಂಕ್ತಿ;
14 - ಕೆಳಗಿನ ದಂತಪಂಕ್ತಿ;
15 - ತಲೆ;
16 - ಬಾಯಿ;
17-21 - ಬಲಭುಜದ ಸಂಧಿ ಹಾಗೂ ಅಗ್ರಭಾಗಗಳು;
22-26 - ಎಡಭುಜದ ಸಂಧಿ ಹಾಗೂ ಅಗ್ರಭಾಗಗಳು;
27-31 - ಬಲಗಾಲಿನ ಸಂಧಿ ಹಾಗೂ ಅಗ್ರಭಾಗಗಳು;