This page has not been fully proofread.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 1
 
ಮಂತ್ರಜಪವನ್ನು ನೂರೆಂಟು ಬಾರಿ
 
ಮಾಡಬೇಕು. ಇದರಿಂದ ಪೂಜೆಯ
ಪೂರ್ಣಫಲ ಲಭಿಸುತ್ತದೆ. ಜಪಾನಂತರ 'ನಾಹಂ ಕರ್ತಾ ಹರಿಃ ಕರ್ತಾ' ಎಂಬುದಾಗಿ
ಹರಿಯ ಸ್ವಾತಂತ್ರ್ಯವನ್ನು ಧ್ಯಾನಿಸಬೇಕು. ಇಷ್ಟೇ ಅಲ್ಲದೆ ನ್ಯಾಸವನ್ನು ಮಾಡಿ
ದೇವನನ್ನು ಹೃದಯದಲ್ಲಿ ಆವಾಹಿಸಿಕೊಂಡು, ತನಗೂ ನ್ಯಾಸವನ್ನು
ಮಾಡಿಕೊಳ್ಳಬೇಕು.
 
50
 
ಜಪದ ಫಲಸ್ತುತಿ
 
ಜಪಧ್ಯಾನಹುತಾರ್ಚಾದೀನ್ ಏವಂ ಯಃ ಕುರುತೇ ಸದಾ ।
 
ಧರ್ಮಾರ್ಥ ಕಾಮಮೋಕ್ಷಾಣಾಂ ಭಾಜನಂ ಸ್ಯಾತ್ ಸ ಏವ ಹಿ ॥69॥
 
ಅರ್ಥ .
 
M
 
ಯಾವ ಗುರುವು ಶಿಷ್ಯನ ಉದ್ಧಾರಕ್ಕಾಗಿ ಹಿಂದೆ ಹೇಳಿದಂತೆ ಜಪ
ಧ್ಯಾನ- ಹೋಮ- ಪೂಜಾದಿಗಳನ್ನು ಮಾಡುವನೋ ಆ ಗುರುವೇ ಧರ್ಮಾರ್ಥ
ಕಾಮಮೋಕ್ಷಗಳಿಗೆ ಭಾಗಿಯಾಗುವನು. ತನ್ನ ಶಿಷ್ಯನನ್ನು ಸಹ ಧರ್ಮಾದಿಭಾಗಿ
ಯನ್ನಾಗಿಸುವನು.
 
ಪೂಜಾಮಹಿಮ
 
ಸರ್ವೋತ್ತಮಂ ಹರಿಂ ಜ್ಞಾತ್ವಾ ಯ ಏವಂ ಭಕ್ತಿಪೂರ್ವಕಮ್ ।
ಜಪಧ್ಯಾನಾದಿಭಿರ್ನಿತ್ಯಂ ಪೂಜಯೇನಾಸ ದುರ್ಲಭಮ್ ॥70॥
ಅರ್ಥ - ಹೀಗೆ ಯಾರು ಹರಿಸರ್ವೋತ್ತಮತ್ವಜ್ಞಾನಪೂರ್ವಕಭಕ್ತಿಯಿಂದ ಜಪ,
ಧ್ಯಾನ, ಪೂಜಾದಿಗಳನ್ನು ನಿತ್ಯವೂ ಆಚರಿಸುವರೋ ಅವರಿಗೆ ಧರ್ಮಾರ್ಥಕಾಮ-
ಮೋಕ್ಷಗಳಲ್ಲಿ ದುರ್ಲಭವಾದದ್ದು ಯಾವುದೂ ಇರುವುದಿಲ್ಲ.
 
ಭಕ್ತಿಂ ಕೃತ್ವಾಽನ್ಯದೇವೇಷು ಬ್ರಹ್ಮರುದ್ರಾದಿಕೇಷ್ಟಪಿ ।
ಸರ್ವೋತ್ಕರ್ಷಮವಿಜ್ಞಾಯ ವಿಪ್ಲೋರ್ಯಾತಿ ತಮೋ ಧ್ರುವಮ್ 71
 
ಅರ್ಥ - ಶ್ರೀಹರಿಯನ್ನೇ ಸರ್ವೋತ್ತಮನೆಂದು ತಿಳಿದು ಈ ರೀತಿ ಭಕ್ತಿಯಿಂದ
ಅವನನ್ನು ಪೂಜಿಸಬೇಕು. ಇದನ್ನು ತಿಳಿಯದೆ, ಬ್ರಹ್ಮರುದ್ರಾದಿಗಳೇ ಸರ್ವೋತ್ತಮ
ರೆಂದು ತಿಳಿದು ಅವರಲ್ಲಿ ಭಕ್ತಿಯನ್ನು ಮಾಡಿ ಜಪಧ್ಯಾನಾದಿಗಳನ್ನು ಆಚರಿಸಿದರೂ
ತಮಸ್ಸಿಗೆ ಬೀಳುವುದು ನಿಶ್ಚಿತ.