This page has been fully proofread once and needs a second look.

ಪುಷ್ಪಾಂಜಲಿ ಹೋಮ
 
ಪುಷ್ಪಾಂಜಲಿಶ್ಚ ಹೋಮಶ್ಚ ಮೂಲೇನಾಷ್ಟೋತ್ತರಂ ಶತಮ್ ।
 
ಹಸ್ತಮಾತ್ರ ಕುಂಡ (ಅಗ್ಗಿಷ್ಟಿಕೆ) ತಯಾರಿಸಿಕೊಂಡು, ಆ ಕುಂಡ- ದಲ್ಲಿ ಶ್ರೀದೇವಿಯನ್ನು ಚಿಂತಿಸಬೇಕು. ವಿಷ್ಣುವೀರ್ಯಾತ್ಮಕವಾದ ಅಗ್ನಿಯನ್ನು 'ಓಂ ಭೂರ್ಭುವಸ್ವರೋಮ್' ಎಂಬ ವ್ಯಾಹೃತಿ- ಮಂತ್ರದಿಂದ ಪ್ರತಿಷ್ಠಾಪಿಸಬೇಕು. ವ್ಯಾಹೃತಿಗಳಿಂದ ಹದಿನಾರು ಸಂಸ್ಕಾರಗಳನ್ನು ಅಗ್ನಿಗೆ ಮಾಡಬೇಕು. ಅಗ್ನಿಯಲ್ಲಿ ಪೀಠಪೂಜೆ ಮಾಡಿ, ಪರಶುರಾಮನನ್ನು ಆವಾಹಿಸಬೇಕು. ಅರ್ಘ್ಯಾದಿ
ಪುಷ್ಪಾರ್ಚನೆಯವರೆಗೆ ಉಪಚಾರಪೂಜೆ ಮಾಡಿ, ಆವರಣಪೂಜೆ ಮಾಡಿ ದೇವರ ಜೊತೆಗೆ ಅವರಿಗೂ ಧೂಪದೀಪಗಳನ್ನು ತೋರಿಸಿ, ನೈವೇದ್ಯವನ್ನು ದೇವರಿಗೆ ಅರ್ಪಿಸಬೇಕು. ನೈವೇದ್ಯ ಕಾಲದಲ್ಲಿ- ಯೇ ಹೋಮಕ್ಕಾಗಿ ಸ್ವಲ್ಪ ಅನ್ನವನ್ನು ಪ್ರತ್ಯೇಕವಾಗಿಟ್ಟು-ಕೊಳ್ಳ ಬೇಕು. ನಂತರ ನೈವೇದ್ಯವನ್ನು ಅರ್ಪಿಸಿ ಯಥಾಶಕ್ತಿ ನೂರೆಂಟು ಬಾರಿ ಮೂಲಮಂತ್ರವನ್ನು ಜಪಿಸಿ, ಪುಷ್ಪಾಂಜಲಿಯನ್ನು ಅರ್ಪಿಸಿ ಹೋಮವನ್ನು ಮಾಡಬೇಕು.
ಗರುಡಾದಿ ಯೋಗಪೀಠಾಂತಪೀಠದೇವತೆಗಳಿಗೂ, ಹಾಗೂ ಲಕ್ಷ್ಮೀಧರಾದೇವಿಯರಿಂದ ಶೇಷ, ವಿಧಿಪರ್ಯಂತ ಆವರಣ ದೇವತೆಗಳಿಗೂ ಒಂದೊಂದು ಬಾರಿ ಪುಷ್ಪಾಂಜಲಿಅರ್ಪಿಸಿ
ನಂತರ ನಾಲ್ಕು ನಾಲ್ಕು ಬಾರಿ ಆಯಾಯ ಪೀಠಾವರಣದೇವತಾ ಮಂತ್ರಗಳಿಂದಲೇ ತುಪ್ಪದಿಂದ ಹೋಮಿಸಬೇಕು. ಹೀಗೆ ಜಾತ-
ಕರ್ಮಾದಿ ಸಂಸ್ಕೃತವಾದ ಅಗ್ನಿಯಲ್ಲಿಮೂಲಮಂತ್ರದಿಂದ
ನೂರೆಂಟು ಬಾರಿ ಹೋಮಿಸಬೇಕು.
ಇಲ್ಲಿ ಪೀಠಾವರಣದೇವತೆಗಳಿಗೆ ಆಹುತಿ ನೀಡುವಾಗ ಮೊದಲು ಪೀಠದೇವತೆಗಳಿಗೂ ನಂತರ ಅಷ್ಟಾಕ್ಷರದಿಂದಲೂ ನಂತರ ಆವರಣದೇವತಾಮಂತ್ರಗಳಿಂದಲೂ ಹೋಮಿಸಬೇಕು.
ಹುತ್ವಾ ವ್ಯಾಹೃತಿಭಿಃ ಪೀಠದೇವೇಭ್ಯೋಽಪ್ಯಥ ಮೂಲತಃ ।
ಉಕ್ತಾವರಣದೇವೇಭ್ಯೋಪ್ಯಥ ಸಮ್ಯಕ್ ಸ್ಮರನ್ ಹರಿಮ್ II (ಯೋಗದೀಪಿಕಾ 3/48)
ಹೋಮಾನಂತರ ಸ್ವಿಷ್ಟಕೃದಾದಿಪ್ರಾಯಶ್ಚಿತ್ತಾಂತವಾಗಿ ಹೋಮಿಸಿ, ಉತ್ತರಾಪೋಶನ ನೀಡಿ ನೈವೇದ್ಯ ವಿಸರ್ಜಿಸಬೇಕು. ಇದೇ ರೀತಿ ಮೂಲಮಂತ್ರಕ್ಕಿಂತ ಬೇರೆಯಾದ ಪ್ರಣವಾದಿ
ಅಷ್ಟಮಹಾಮಂತ್ರಗಳಿಂದಲೂ, ಮುಂದೆ ಹೇಳುವ ವರಾಹಾದಿ ಮಂತ್ರಗಳಿಂದಲೂ ಒಂದು ಬಾರಿ ಪುಷ್ಪಾಂಜಲಿ ಹಾಗೂ ಚತುರ್ಗುಣಹೋಮವನ್ನಾಚರಿಸಬೇಕು.
ಹೀಗೆ ಅನುಯಾಗಸಹಿತಮಾಡುವ ಪೂಜೆಯು ಅತ್ಯಂತಶ್ರೇಷ್ಠ ವಿಧಾನವೆನಿಸಿದೆ.
ತತ್ರಾऽದ್ಯಾತ್ಯಂತಫಲದಾ ದ್ವಿತೀಯಾ ಸಫಲಾ ಮತಾ - ನಾರದೀಯ
ವಿಶೇಷ - ಮೂಲಮಂತ್ರದಿಂದ ನೂರೆಂಟುಬಾರಿ ಪುಷ್ಪಾಂಜಲಿ ಹಾಗೂ ನೂರೆಂಟುಬಾರಿ ಹೋಮವನ್ನು ಮಾಡಬೇಕು. ಇತರ ದ್ವಾದಶಾಕ್ಷರ ಮಂತ್ರಗಳಿಂದ ಒಂದೊಂದು ಬಾರಿ ಪುಷ್ಪಾರ್ಪಣೆ, ಹಾಗೂ ಅದರ ನಾಲ್ಕುಪಟ್ಟು ಹೋಮ ಮಾಡಬೇಕು. ಪೀಠಾವರಣದೇವತಾಪೂಜಾ-ಹೋಮವನ್ನು ಹೀಗೆ ಮಾಡಬೇಕು.