2023-04-27 14:06:31 by ambuda-bot
This page has not been fully proofread.
48
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 1
ಪುಷ್ಪಾಂಜಲಿ ಹೋಮ
ಪುಷ್ಪಾಂಜಲಿಶ್ಚ ಹೋಮಶ್ಚ ಮೂಲೇನಾಷ್ಟೋತ್ತರಂ ಶತಮ್ ।
ಹಸ್ತಮಾತ್ರ ಕುಂಡ (ಅಗ್ಗಿಷ್ಟಿಕೆ) ತಯಾರಿಸಿಕೊಂಡು, ಆ ಕುಂಡದಲ್ಲಿ ಶ್ರೀದೇವಿಯನ್ನು
ಚಿಂತಿಸಬೇಕು. ವಿಷ್ಣುವೀರ್ಯಾತ್ಮಕವಾದ ಅಗ್ನಿಯನ್ನು 'ಓಂ ಭೂರ್ಭುವಸ್ವರೋಮ್' ಎಂಬ
ವ್ಯಾಹೃತಿಮಂತ್ರದಿಂದ ಪ್ರತಿಷ್ಠಾಪಿಸಬೇಕು. ವ್ಯಾಹೃತಿಗಳಿಂದ ಹದಿನಾರು ಸಂಸ್ಕಾರಗಳನ್ನು ಅಗ್ನಿಗೆ
ಮಾಡಬೇಕು. ಅಗ್ನಿಯಲ್ಲಿ ಪೀಠಪೂಜೆ ಮಾಡಿ, ಪರಶುರಾಮನನ್ನು ಆವಾಹಿಸಬೇಕು. ಅರ್ಭ್ಯಾದಿ
ಪುಷ್ಪಾರ್ಚನೆಯವರೆಗೆ ಉಪಚಾರಪೂಜೆ ಮಾಡಿ, ಆವರಣಪೂಜೆ ಮಾಡಿ ದೇವರ ಜೊತೆಗೆ
ಅವರಿಗೂ ಧೂಪದೀಪಗಳನ್ನು ತೋರಿಸಿ, ನೈವೇದ್ಯವನ್ನು ದೇವರಿಗೆ ಅರ್ಪಿಸಬೇಕು. ನೈವೇದ್ಯ
ಕಾಲದಲ್ಲಿಯೇ ಹೋಮಕ್ಕಾಗಿ ಸ್ವಲ್ಪ ಅನ್ನವನ್ನು ಪ್ರತ್ಯೇಕವಾಗಿಟ್ಟುಕೊಳ್ಳಬೇಕು. ನಂತರ
ನೈವೇದ್ಯವನ್ನು ಅರ್ಪಿಸಿ ಯಥಾಶಕ್ತಿ ನೂರೆಂಟು ಬಾರಿ ಮೂಲಮಂತ್ರವನ್ನು ಜಪಿಸಿ,
ಪುಷ್ಪಾಂಜಲಿಯನ್ನು ಅರ್ಪಿಸಿ ಹೋಮವನ್ನು ಮಾಡಬೇಕು.
ಗರುಡಾದಿ ಯೋಗಪೀಠಾಂತಪೀಠದೇವತೆಗಳಿಗೂ, ಹಾಗೂ ಲಕ್ಷ್ಮೀಧರಾದೇವಿಯರಿಂದ
ಶೇಷ, ವಿಧಿಪರ್ಯಂತ ಆವರಣದೇವತೆಗಳಿಗೂ ಒಂದೊಂದು ಬಾರಿ ಪುಷ್ಪಾಂಜಲಿಅರ್ಪಿಸಿ
ನಂತರ ನಾಲ್ಕು ನಾಲ್ಕು ಬಾರಿ ಆಯಾಯ ಪೀಠಾವರಣದೇವತಾಮಂತ್ರಗಳಿಂದಲೇ ತುಪ್ಪದಿಂದ
ಹೋಮಿಸಬೇಕು. ಹೀಗೆ ಜಾತಕರ್ಮಾದಿ ಸಂಸ್ಕೃತವಾದ ಅಗ್ನಿಯಲ್ಲಿ ಮೂಲಮಂತ್ರದಿಂದ
ನೂರೆಂಟು ಬಾರಿ ಹೋಮಿಸಬೇಕು.
ಇಲ್ಲಿ ಪೀಠಾವರಣದೇವತೆಗಳಿಗೆ ಆಹುತಿ ನೀಡುವಾಗ ಮೊದಲು ಪೀಠದೇವತೆಗಳಿಗೂ ನಂತರ
ಅಷ್ಟಾಕ್ಷರದಿಂದಲೂ ನಂತರ ಆವರಣದೇವತಾಮಂತ್ರಗಳಿಂದಲೂ ಹೋಮಿಸಬೇಕು.
ಹುತ್ವಾ ವ್ಯಾಹೃತಿಭಿಃ ಪೀಠದೇವೇಭೋಽಪ್ಯಥ ಮೂಲತಃ ।
ಉಕ್ತಾವರಣದೇವೇಭೋ ಪೃಥ ಸಮ್ಯಕ್ ಸ್ಮರನ್ ಹರಿಮ್ II (ಯೋಗದೀಪಿಕಾ 3/48)
ಹೋಮಾನಂತರ ಷಹೃದಾದಿಪ್ರಾಯಶ್ಚಿತ್ತಾಂತವಾಗಿ ಹೋಮಿಸಿ, ಉತ್ತರಾಪೋಶನ ನೀಡಿ
ನೈವೇದ್ಯ ವಿಸರ್ಜಿಸಬೇಕು. ಇದೇ ರೀತಿ ಮೂಲಮಂತ್ರಕ್ಕಿಂತ ಬೇರೆಯಾದ ಪ್ರಣವಾಗಿ
ಅಷ್ಟಮಹಾಮಂತ್ರಗಳಿಂದಲೂ, ಮುಂದೆ ಹೇಳುವ ವರಾಹಾದಿಮಂತ್ರಗಳಿಂದಲೂ ಒಂದು ಬಾರಿ
ಪುಷ್ಪಾಂಜಲಿ ಹಾಗೂ ಚತುರ್ಗುಣಹೋಮವನ್ನಾಚರಿಸಬೇಕು.
ಹೀಗೆ ಅನುಯಾಗಸಹಿತಮಾಡುವ ಪೂಜೆಯು ಅತ್ಯಂತಶ್ರೇಷ್ಠವಿಧಾನವೆನಿಸಿದೆ.
ತತ್ರಾದ್ಯಾತ್ಯಂತಫಲದಾ ದ್ವಿತೀಯಾ ಸಫಲಾ ಮತಾ - ನಾರದೀಯ
ವಿಶೇಷ ಮೂಲಮಂತ್ರದಿಂದ ನೂರೆಂಟುಬಾರಿ ಪುಷ್ಪಾಂಜಲಿ ಹಾಗೂ ನೂರೆಂಟುಬಾರಿ
ಪುಷ್ಪಾಂಜಲಿ ಹಾಗೂ ನೂರೆಂಟುಬಾರಿ ಹೋಮವನ್ನು ಮಾಡಬೇಕು. ಇತರ ದ್ವಾದಶಾಕ್ಷರ
ಮಂತ್ರಗಳಿಂದ ಒಂದೊಂದು ಬಾರಿ ಪುಷ್ಪಾರ್ಪಣೆ, ಹಾಗೂ ಅದರ ನಾಲ್ಕುಪಟ್ಟು ಹೋಮ
ಮಾಡಬೇಕು. ಪೀಠಾವರಣದೇವತಾಪೂಜಾ-ಹೋಮವನ್ನು ಹೀಗೆ ಮಾಡಬೇಕು.