2023-05-06 12:20:36 by jayusudindra
This page has been fully proofread once and needs a second look.
ಆವರಣಪೂಜೆ
ಲಕ್ಷ್ಮೀಧರೇ ಯಜೇತ್ತತ್ರ ಪಾರ್ಶ್ವಯೋರುಭಯೋರ್ಹರೇ: ।
ಹೃದಯಾದೀಂಸ್ತಥೇಂದ್ರಾದಿದಿಕ್ಷ್ವಸ್ತ್ರಂ ಕೋಣಕೇಷು ಚ ॥ ೬೦ ॥
ಅರ್ಥ- ಯೋಗಪೀಠದ ಮೇಲಿರುವ ಪರಮಪುರುಷನ ಎಡಬಲ ಗಳಲ್ಲಿ ಲಕ್ಷ್ಮೀದೇವಿಯನ್ನೂ, ಧರಾದೇವಿಯನ್ನೂ ಪೂಜಿಸಬೇಕು. ಇದು ಪ್ರಥಮಾವರಣ ಪೂಜೆಯು. ನಂತರ ಹೃದಯಾದಿನಾಮ- ಗಳುಳ್ಳ ಕೃದ್ಧೋಲ್ಕ, ಮಹೋಲ್ಕ, ವೀರೋಲ್ಕ, ದ್ಯುಲ್ಕರನ್ನು ಪೂರ್ವಾದಿ ನಾಲ್ಕು ದಿಕ್ಕುಗಳಲ್ಲಿಯೂ ಅಸ್ತ್ರನಾಮಕ
ಸಹಸ್ರೋಲ್ಕನನ್ನು ಆಯಾದಿ ವಿದಿಕ್ಕುಗಳಲ್ಲೂ ಪೂಜಿಸಬೇಕು. ಇದು ದ್ವಿತೀಯಾವರಣಪೂಜೆ.
ವಾಸುದೇವಾದಿಕಾನ್ ದಿಕ್ಷು ಕೇಶವಾದೀಂಸ್ತತಃ ಪರಮ್ ।
ಮತ್ಸ್ಯಂ ಕೂರ್ಮಂ ವರಾಹಂ ಚ ನಾರಸಿಂಹಂ ಚ ವಾಮನಮ್ ॥ ೬೧ ॥
ಭಾರ್ಗವಂ ರಾಘವಂ ಕೃಷ್ಣಂ ಬುದ್ಧಂ ಕಲ್ಕಿನಮೇವ ಚ ।
ಅನಂತಂ ವಿಶ್ವರೂಪಂ ಚ ತದ್ಬಹಿಃ ಪೂಜಯೇತ್ ಕ್ರಮಾತ್ ॥ ೬೨ ॥
ಅರ್ಥ - ನಂತರ ತೃತೀಯಾವರಣರೂಪದಲ್ಲಿರುವ ವಾಸುದೇವ ಸಂಕರ್ಷಣ ಪ್ರದ್ಯುಮ್ನ ಅನಿರುದ್ಧರನ್ನು (ಪೂರ್ವಾದಿದಿಕ್ಕು- ಗಳಲ್ಲೂ) ಆಗ್ನೇಯಾದಿ ವಿದಿಕ್ಕುಗಳಲ್ಲಿ ಮಾಯಾ, ಜಯಾ, ಕೃತಿ, ಶಾಂತಿಯರನ್ನೂ ಪೂಜಿಸಬೇಕು. ಇದು ತೃತೀಯಾವರಣ
ಪೂಜೆ.
ಚತುರ್ಥಾವರಣದಲ್ಲಿ ಕೇಶವಾದಿ ಹನ್ನೆರಡು ರೂಪಗಳನ್ನು ಕೇಶವಾದಿ ಎರಡೆರಡುರೂಪಗಳನ್ನು ಪೂರ್ವಾದಿ ದಿಕ್ಕುಗಳಲ್ಲೂ, ಒಂದೊಂದು ರೂಪವನ್ನು ವಿದಿಕ್ಕುಗಳಲ್ಲಿಯೂ ಪೂಜಿಸಬೇಕು.
ತಾವತ್ ಸಂಪ್ರೀತಿಭಾವೇನ ಬಿಂಬೇಽಸ್ಮಿನ್ ಸನ್ನಿಧಿಂ ಕುರು ॥
ಎಂದು ಪ್ರತಿಮೆಯ ಪಾದಗಳಿಗೆ ಪುಷ್ಪಾಂಜಲಿ ಅರ್ಪಿಸುವುದು.
ಓಂ ನಮೋ ನಾರಾಯಣಾಯ ಓಂ ಅರ್ಘ್ಯಂ ಸಮರ್ಪಯಾಮಿ, ಪಾದ್ಯಂ ಸಮರ್ಪಯಾಮಿ, ಇತ್ಯಾದಿಯಾಗಿ ಹೇಳುತ್ತಾ ಉದ್ಧರಣೆ- ಯಿಂದ ನೀರನ್ನು ಬಿಡಬೇಕು. ನಂತರ ಉಳಿದ ಉಪಚಾರ ಪೂಜೆ- ಯನ್ನೂ ಮೂಲಮಂತ್ರದಿಂದ ಅರ್ಪಿಸಿ ಗಂಧಪುಷ್ಪಗಳನ್ನರ್ಪಿಸಿ ಆವರಣಪೂಜೆ ಮಾಡಬೇಕು.