This page has been fully proofread once and needs a second look.

ಆವಾಹನಪ್ರಕಾರ - ಅರ್ಘ್ಯಾದಿಸಮರ್ಪಣೆ
 
ತತೋऽನಂತಂ ಯೋಗಪೀಠಸ್ವರೂಪಂ ಪೂಜಯೇದ್ದರೇಃ ।
ತತ್ರಾವಾಹ್ಯ ಹರಿಂ ಚಾರ್ಘ್ಯ೦ ಪಾದ್ಯಮಾಚಮನೀಯಕಮ್ ॥ ೫೮ ॥
 
ಮಧುಪರ್ಕ೦ ಪುನಶ್ಚಾಚಾಂ ಸ್ನಾನಂ ವಾಸೋವಿಭೂಷಣಮ್ ।
ಉಪವೀತಾಸನೇ ದತ್ವಾ ಗಂಧಪುಷ್ಪೇ ತಥೈವ ಚ ೫೯ ॥॥
 
ಅರ್ಥ- ಅಷ್ಟದಳಪದ್ಮದ ಮಧ್ಯದಲ್ಲಿರುವ 'ಅನುಗ್ರಹಾ' ಎಂಬ ಆಸನರೂಪವಾದ ಭಗವಂತನ ಶಕ್ತಿಯಲ್ಲಿ ಯೋಗಾಸನರೂಪ- ದಲ್ಲಿರುವ ತಲ್ಪಾಕಾರನಾದ ಶೇಷನನ್ನು ಪೂಜಿಸಬೇಕು. ಹೀಗೆ ಯೋಗಪೀಠಸ್ವರೂಪದಂತಿರುವ ಶೇಷಾಸನದಲ್ಲಿ ಕುಳಿತಿರುವ ಭಗವತ್ಪ್ರತಿಮೆಯಲ್ಲಿ ಸ್ವಬಿಂಬಮೂರ್ತಿಯನ್ನು ಆವಾಹಿಸಿ, ಆಸನ, ಅರ್ಘ್ಯ, ಪಾದ್ಯ, ಆಚಮನೀಯ, ಮಧುಪರ್ಕ, ಪುನರಾ- ಚಮನ, ಸ್ನಾನ, ವಸ್ತ್ರ, ಅಲಂಕಾರ, ಉಪವೀತ, ಗಂಧ, ಪುಷ್ಪ ಇವುಗಳನ್ನು ಅರ್ಪಿಸಬೇಕು. ಪುಷ್ಪೋಪಚಾರಪೂಜೆಯಾದ ಮೇಲೆ ಧೂಪ, ದೀಪ, ನೈವೇದ್ಯದ ಮೊದಲು ಆವರಣಪೂಜೆ
ಮಾಡಬೇಕು[^1]
 

 
 
 
ವಿಮಲಾದ್ಯಾಸ್ತು ಪೂಜ್ಯಾಃ ಸ್ಯುಃ.................- ಪಂಚರಾತ್ರ
ಈ ವಿಮಲಾದಿ ಎಂಟು ಶಕ್ತಿಗಳೂ ಸ್ತ್ರೀರೂಪದ ಭಗವಂತನ ಸ್ವರೂಪಭೂತಗಳಾದವುಗಳು. ಈ ಶಕ್ತಿಗಳು ರಮಾರೂಪವಾದವು ಗಳೂ ಹೌದು. ಇದೇ ರೀತಿ ಬ್ರಹ್ಮವಾಯುಗಳ ಗರುಡ-ಶೇಷರು- ಗಳಿಂದ ಅಭಿಮನ್ಯವಾದ ವಿಮಲಾದಿ ಹೆಸರಿನ ಒಂಭತ್ತು ಶಕ್ತಿಗಳನ್ನೂ ಪೀಠಪೂಜೆಯಲ್ಲಿ ಪೂಜಿಸಬೇಕು.
ವಿಷ್ಣೋ ಶ್ರಿಯಃ ಬ್ರಹ್ಮಣಶ್ಚ ವಾಯೋ ಸಂಕರ್ಷಣಸ್ಯ ಚ ।
ಗರುಡಸ್ಯ ಚ ಸಂಪ್ರೋಕ್ತಾಃ ಪ್ರತ್ಯೇಕಂ ನವಮೂರ್ತಯಃ ॥
ಪೂಜ್ಯಾಃ ಸಾತ್ವತತಂತ್ರೇಷು ತತ್ರಾದ್ಯಾ ಮೂರ್ತಯೋ ಹರೇಃ ।
ಪ್ರಧಾನಾಸ್ತಾ ಹಿ ಸರ್ವಾಸಾಂ ಮೂರ್ತಿನಾಂ ಹರಿಮೂರ್ತಯಃ ॥
- ಭಾಗ.ತಾ. 11/16/32
 
[^1]ಪೀಠಪೂಜೆ
ಪೀಠಮಧ್ಯೆ ಪರದೇವತಾಯೈ ಶ್ರೀಲಕ್ಷ್ಮೀನಾರಾಯಣಾಭ್ಯಾಂ ನಮಃ । ವಾಮೇ ಪ್ರಧಾನ ವಾಯವೇ ನಮಃ । ದಕ್ಷಿಣೇ ಸರ್ವ ದೇವತಾಭ್ಯೋ ನಮಃ । ಪುನರ್ವಾಮೇಸರ್ವಗುರುಭ್ಯೋ ನಮಃ.
(ಪೀಠಪಾದಾಧೋ ಭಾಗೇ ಆಗ್ನೇಯಾದಿ ಕೋಣೇಷು)
 
"