This page has not been fully proofread.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 1
 
ಸೂರ್ಯ-ಚಂದ್ರ-ಅಗ್ನಿಗಳನ್ನೂ, ಉಳಿದ ಮೂರು ದಳದಲ್ಲಿ ಸತ್ವರಜಸ್ಸುತಮಸ್ಸಿಗೆ
ಅಭಿಮಾನಿನಿಯಾದ ಶ್ರೀಭೂದುರ್ಗೆಯರನ್ನು ಚಿಂತಿಸಬೇಕು.
 
ವಿಮಲಾದಿ ನವಶಕ್ತಿಗಳು
 
40
 
ಆತ್ಮಾಂತರಾತ್ಮಪರಮಜ್ಞಾನಾತ್ಮಾನಶ್ಚ ಮೂರ್ತಯಃ ।
ವಿಮಲೋತ್ಕರ್ಷಿಣೀ ಜ್ಞಾನಾ ಕ್ರಿಯಾ ಯೋಗಾ ತಥೈವ ಚ ॥5॥
 
ಅರ್ಥ
 
ಪ್ರ ಸತ್ಯಾ ತಥೇಶಾನಾನುಗ್ರಹಾ ಚೇತಿ ಶಕ್ತಯಃ ।
ಅಷ್ಟದಿಕ್ಷು ಚ ಮಧ್ಯೆ ಚ ಸ್ವರೂಪಾವ ತಾ ಹರೇಃ ॥57॥
ಪೂರ್ವವೇ ಮೊದಲಾದ ದಿಕ್ಕುಗಳಲ್ಲಿ ಭಗವಂತನದೇ ಆದ ಆತ್ಮ
ಅಂತರಾತ್ಮ ಪರಮಾತ್ಮ ಜ್ಞಾನಾತ್ಮ ಎಂಬ ನಾಲ್ಕು ರೂಪಗಳನ್ನು ಚಿಂತಿಸಬೇಕು.
ಎಂಟು ದಳವುಳ್ಳ ಕಮಲದ ಅಷ್ಟದಳಗಳಲ್ಲಿ ಪೂರ್ವಾದಿ ಎಂಟು ದಿಕ್ಕುಗಳಲ್ಲಿ
ವಿಮಲಾ- ಉತ್ಕರ್ಷಿಣೀ- ಜ್ಞಾನಾ- ಕ್ರಿಯಾ- ಯೋಗಾ- ಪ್ರಜ್ವ- ಸತ್ಯಾ- ಈಶಾನಾ
ಎಂಬ ಎಂಟು ಭಗವಚ್ಛಕ್ತಿಗಳನ್ನೂ ಇವುಗಳ ಮಧ್ಯದಲ್ಲಿ ಛತ್ರ ಚಾಮರ ದರ್ಪಣ
ವ್ಯಜನ ಗೀತ ವಾದಿತ್ರ ನೃತ್ಯ ಸ್ತೋತ್ರಗಳ ಸೇವೆ ಮಾಡುತ್ತಿರುವ ಎಂಟು ಶಕ್ತಿಗಳ
ಮಧ್ಯದಲ್ಲಿ ಆ ಸೇವೆ ಸ್ವೀಕರಿಸುತ್ತಿರುವ ಅನುಗ್ರಹಾ' ಎಂಬ ಭಗವಂತನ
ಶಕ್ತಿಯನ್ನೂ ಚಿಂತಿಸಬೇಕು.
 
-
 
ದೀಪದಂತೆ ಬೆಳಗುವ ಸೂರ್ಯ, ಚಂದ್ರ, ಅಗ್ನಿಗಳನ್ನೂ; (ಉಳಿದ ಮೂರು ದಳಗಳಲ್ಲಿ
ಶ್ರೀಭೂದುರ್ಗೆಯರನ್ನೂ ?); ಎಂಟು ದಳಗಳ ಪದ್ಮದ ದಳಗಳಲ್ಲಿ ವಿಮಲಾ- ಉತ್ಕರ್ಷಿಣೀ
ಮೊದಲಾದ ಶಕ್ತಿಗಳನ್ನೂ ಚಿಂತಿಸಬೇಕು.
 
ಚತುಕ್ಕೋಣಂ ತು ಪೀಠಂ ಸ್ಯಾತ್ ಷಟ್ಟೋಣಂ ತಸ್ಯ ಮಧ್ಯತಃ ।
ತನ್ಮಧ್ಯೆಷ್ಟದಲಂ ಪದ್ಮಂ ತತ್ರ ಪದ್ಮಶಮರ್ಚಯೇತ್ ॥
 
1. ವಿಶೇಷಾಂಶ :
 
ಇಲ್ಲಿ ಆತ್ಮ, ಅಂತರಾತ್ಮಾದಿಗಳು ಪೀಠದ ನಾಲ್ಕೂ ದಿಕ್ಕಿನಲ್ಲಿರುವ ಸೋಪಾನಗಳ
 
ದೇವತೆಗಳೆಂದು ತಿಳಿಯಬೇಕು.
 
ಸೋಪಾನದೇವತಾ ಪೂಜ್ಯಾಃ ಆತ್ಮಾದ್ಯಾಃ ದಿಕ್ಚತುಷ್ಟಯೇ ।
 
ಪದಗಳ ಎಂಟು ಪತ್ರಗಳಲ್ಲಿ ಹಾಗೂ ಮಧ್ಯದಲ್ಲಿ ಪೂರ್ವಾದಿದಿಕ್ಕುಗಳಲ್ಲಿ ಎಂಟು ಭಗವಂತನ
ಶಕ್ತಿಗಳನ್ನು ಪೂಜಿಸಬೇಕು.
 
ಪೂರ್ವಪತ್ರಂ ಸಮಾರಭ್ಯ ತದ್ದಲೇಷು ಯಥಾಕ್ರಮಂ ।