This page has been fully proofread once and needs a second look.

ವ.ಟೀ. - ಆಧಾರಶಕ್ತಿಃ = ಲಕ್ಷ್ಮೀಃ
 
ಟೀಕಾರ್ಥ - ಆಧಾರಶಕ್ತಿಯೆಂದರೆ ಲಕ್ಷ್ಮೀದೇವಿಯು.
 
ಕೂರ್ಮೋऽನಂತಶ್ಚ ಪೃಥಿವೀ ಕ್ಷೀರಸಾಗರ ಏವ ಚ ।
ಶ್ವೇತದ್ವೀಪೋ ಮಂಟಪಶ್ಚ ದಿವ್ಯರತ್ನಮಯೋ ಮಹಾನ್ ॥ 54 ॥
 
ಅರ್ಥ - ಆಧಾರಶಕ್ತಿಯ ಮೇಲೆ ಬ್ರಹ್ಮಾಂಡಕ್ಕೆ ಆಧಾರವಾದ ಕೂರ್ಮ[^1] ಅದರ ಬೆನ್ನನ್ನಾಶ್ರಯಿಸಿರುವ ಶೇಷದೇವ, ಅವನ ಸಾವಿರಹೆಡೆಯ ಒಂದು ಹೆಡೆಯಲ್ಲಿ ಪೃಥಿವಿಯು ಇದೆ. ಪೃಥಿವಿ ಯಲ್ಲಿ ಕ್ಷೀರಸಾಗರ, ಅಲ್ಲಿ ಶ್ವೇತದ್ವೀಪ, ಅಲ್ಲಿ ದಿವ್ಯರತ್ನಖಚಿತ- ವಾದ ದೊಡ್ಡ ಮಂಟಪ;
 
ಪದ್ಮಮೇತತ್ ತ್ರಯಂ ದೇವೀ ರಮೈವ ಬಹುರೂಪಿಣೀ।
ಸೂರ್ಯಸೋಮಹುತಾಶಾಶ್ಚ ಪದ್ಮೇ ಶ್ರೀಸ್ತ್ರಿಗುಣಾತ್ಮಿಕಾ ॥ ೫೫ ॥
 
ಅರ್ಥ - ಪೀಠದ ಮೇಲೆ ಪದ್ಮ, ಶ್ವೇತದ್ವೀಪ, ದಿವ್ಯಮಂಟಪ ಇವುಗಳು ಬಹುರೂಪಧರಿಸಿದ ರಮೆಯ ರೂಪಗಳೇ ಆಗಿವೆ. ಈ ಆರುದಳಗಳುಳ್ಳ ಪದ್ಮವಾದರೋ[^2] ಎದುರು ಬದುರಿನಲ್ಲಿ ಆರು ದಳಗಳನ್ನು ಹೊಂದಿದ್ದು ಎದುರಿನಲ್ಲಿ
 

 
 
 
ಆಕಾಶ, ಅಹಂಕಾರ, ಮಹತತ್ತ್ವ, ತಮಸ್ಸು, ರಜಸ್ಸು, ಸತ್ವವೆಂಬ ಒಂಭತ್ತು ಆವರಣಸಹಿತವಾದ ಬ್ರಹ್ಮಾಂಡವನ್ನು ತಲೆಯ ಮೇಲೆ ಧರಿಸಿ, ಪದ್ಮಾಸನದಲ್ಲಿ ಪೂರ್ವಾಭಿಮುಖವಾಗಿದ್ದಾನೆ ಎಂದು
ತಿಳಿಯಬೇಕು. ಅದರ ಮೇಲ್ಬಾಗದಲ್ಲಿ ಸಾಕ್ಷಾತ್ತಾಗಿ ಆವರಣಗಳಿಗೆ ಆಧಾರವಾಗಿರುವ ಶಕ್ತಿಯೆಂಬ ಹೆಸರುಳ್ಳ ಲಕ್ಷ್ಮೀದೇವಿಯನ್ನು ಪೂಜಿಸಬೇಕು ಎಂದು ಭಾವ.
 
[^1]. ಇಲ್ಲಿ ಕೂರ್ಮ ಎಂದು ಒಂದೇ ಕೂರ್ಮವನ್ನು ಹೇಳಿದ್ದರೂ ಮೂರು ಕೂರ್ಮಗಳನ್ನುಗ್ರಹಿಸಬೇಕು.
1. ಬ್ರಹ್ಮಾಂಡಕ್ಕೆ ಆಧಾರವಾದ ವಿಷ್ಣುಕೂರ್ಮ.
2. ಬ್ರಹ್ಮಾಂಡದೊಳಗಿರುವ ಅಗಾಧಜಲಕ್ಕೆ ಆಧಾರಭೂತ- ವಾದ ವಿಷ್ಣು ಕೂರ್ಮ.
3. ಇದರ ಮೇಲೆ ವಾಯುಕೂರ್ಮ. ಅದರ ಪುಚ್ಛದಲ್ಲಿ ಶೇಷ.
ಬಿಭರ್ತ್ಯಂಡಂ ಹರಿ: ಕೂರ್ಮಃ ಅಂಡೇ ಚಾಪ್ಯುದಕಂ ಮಹತ್
ಉದಕೇ ಕೂರ್ಮರೂಪಸ್ಯ ವಾಯುಃ ಪುಚ್ಛಂ ಸಮಾಶ್ರಿತಃ ॥
ಸ ಏವ ಕೂರ್ಮರೂಪೇಣ ವಾಯುರಂಡೋದಕೇ ಸ್ಥಿತಃ ।
ವಿಷ್ಣುನಾ ಅನಂತರೂಪೇಣ ಧಾರಿತೋಽನಂತಧಾರಕಃ ॥
- ಬೃಹದಾರಣ್ಯಕದ್ಭಾಷ್ಯ
[^2]. ಇಲ್ಲಿ ಪದ್ಮವೆಂದು ಒಂದೇ ಪದವನ್ನು ಹೇಳಿದ್ದರೂ ಆರುದಳಗಳ ಪದ್ಮವನ್ನೂ, ಅದರ ಮೇಲೆ ಎಂಟು ದಳಗಳ ಪದವನ್ನೂ ತಿಳಿಯಬೇಕು. ಆರು ದಳದ ಪದ್ಮದ ಮೂರು ದಳಗಳಲ್ಲಿ