This page does not need to be proofread.

Arಮೂಲರಾಭೋ ಜಯತ
 

 
भागचंद्र
 

 
ಶಾತವಾಹನಶಕ
 

 
ಗುರುರಾಜೋ ಬಯತೇ
 

 
ನೇ
 

 
ಶ್ರೀ ಮತ್ಪರಮಹಂಸ ಪರಿವ್ರಾಜಕಾಚಾರ್ಯ ಪದವಾಕ್ಯ ಪ್ರಮಾಣಪಾರಾವಾರಪಾರಂಗತ

ಸರ್ವತಂತ್ರಸ್ವತಂತ್ರ ಶ್ರೀಮದ್ವ ಷ್ಣವಸಿದ್ಧಾಂತಪ್ರತಿಷ್ಠಾಪನಾಚಾರ್ಯ

ಶ್ರೀಮನ್ಮೂಲರಘುಪತಿವೇದವ್ಯಾಸದೇವರದಿವ್ಯಶ್ರೀಪಾದಪದ್ಮಾರಾಧಕ
 

 
ant fದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನಾಧೀಶ್ವರರಾದ ಶ್ರೀರಾಘವೇಂದ್ರಸ್ವಾಮಿಗಳವರಮಠದ

ವೇದಾಂತಸಾಮ್ರಾಜ್ಯದಿಗ್ವಿಜಯವಿದ್ಯಾಸಿಂಹಾಸನಾಧೀಶ್ವರರಾದ

ಶ್ರೀಮತ್ಸುಜಯೀಂದ್ರ ತೀರ್ಥ ಶ್ರೀಪಾದಂಗಳವರ ಕರಕಮಲಸಂಜಾತರಾದ

ಶ್ರೀಮತ್ಸುಶಮೀಂದ್ರತೀರ್ಥ ಶ್ರೀಪಾದಂಗಳವರ ವರಕುಮಾರಕರಾದ
 

 
45
 

 
108 ಶ್ರೀಮತ್ಸುಯತೀಂದ್ರತೀರ್ಥ ಶ್ರೀಪಾದಂಗಳವರು

ಶ್ರೀನಂದನನಾಮಸಂವತ್ಸರ ಮಾರ್ಗಶಿರ ಶುದ್ಧ ನವಮಿ ಶುಕ್ರವಾರ ದಿನಾಂಕ 21.12.2012

ಅನುಗ್ರಹ ಸಂದೇಶ
 

 
''ಸಪ್ತಮೋ ಮತ್ಸಮೋ ಯೋಗೀ ವರದೇಂದ್ರೋ ಭವಿಷ್ಯತಿ" ಎಂಬ ಗುರುರಾಜರ

ಷ್ಯವಾಣಿಯಂತೆ ಶ್ರೀಗುರುರಾಜರಂತೆ ಭಕ್ತಾನುಗ್ರಹಪರರಾದ ವಾದಿಮಲ್ಲರೆನಿಸಿದ ನಮ್ಮ

ಪೂರ್ವೀಕಗುರುಗಳಾದ ಶ್ರೀವರದೇಂದ್ರತೀರ್ಥಶ್ರೀಪಾದಂಗಳವರು ಮಹಾಮಹಿಮರಲ್ಲದೆ

'ನೇಕ ಗ್ರಂಥಗಳನ್ನೂ ರಚಿಸಿರುತ್ತಾರೆ. ಅವರು ರಚಿಸಿದ ಗ್ರಂಥಗಳಲ್ಲಿ ತಂತ್ರಸಾರಾಸಂಗ್ರಹ

ವ್ಯಾಖ್ಯಾನವು ಒಂದು. ಅದನ್ನು ನಮಗೆ ಅತ್ಯಂತ ಪ್ರೀತ್ಯಾಸದರಾದ ಸಂಶೋಧಕರೂ ಅನುವಾದಕರೂ

ಆದ, ವಿದ್ವಾಂಸರಾದ ಚತುರ್ವೇದಿ ವೇದವ್ಯಾಸಾಚಾರ್ಯರು ಮೂಲತಂತ್ರಸಾರಕ್ಕೆ

ವರದೇಂದ್ರತೀರ್ಥರು ಬರೆದ ವ್ಯಾಖ್ಯಾನದ ಜೊತೆಯಲ್ಲಿ ಅಲ್ಲಲ್ಲೇ ಬೇಕಾದ ವಿವರಗಳನ್ನು

ನೀಡಿದ್ದಾರೆ. ಈ ಪುಸ್ತಕವನ್ನು ನಮ್ಮ ಶ್ರೀಗುರುಸಾರ್ವಭೌಮಸಂಶೋಧನಮಂದಿರದಿಂದ

ಮುದ್ರಿಸಿ ನಮ್ಮ ಶ್ರೀಮಠದಿಂದ ಉಡುಪಿಯಲ್ಲಿ ನಡೆಯುವ ವಿದ್ವತ್ಸಭೆಯಲ್ಲಿ ಬಿಡುಗಡೆ-

ಗೊಳಿಸುವುದು ಸಂತೋಷವೆನಿಸುತ್ತದೆ. ಇದನ್ನು ಸಂಶೋಧಿಸಿ ಅನುವಾದಿಸಿದ ವಿದ್ವಾನ್

ಚತುರ್ವೇದಿ ವೇದವ್ಯಾಸಾಚಾರ್ಯರಿಗೆ ಇನ್ನೂ ಇಂತಹ ಗ್ರಂಥಸಂಶೋಧನಾ ಕಾರ್ಯದಲ್ಲಿ

ಮತ್ತಷ್ಟು ಶಕ್ತಿಯನ್ನು ದಯಪಾಲಿಸಲೆಂದು ಅಸದ್ಗುರ್ವಂತರ್ಗತ ಭಾರತೀರಮಣ-

ಮುಖ್ಯಪ್ರಾಣಾಂತರ್ಗತ ಶ್ರೀಮೂಲರಘುಪತಿವೇದವ್ಯಾಸದೇವರಲ್ಲಿ ಪ್ರಾರ್ಥಿಸುತ್ತೇವೆ. ಹೀಗೆಂದು

ಮಂತ್ರಾಲಯ ಮೊಕ್ಕಾಂನಿಂದ ಬರೆಸಿದ ಅನುಗ್ರಹ ಸಂದೇಶ.
 

 
ಇತಿ ನಾರಯಣಸ್ಮರಣೆಗಳು