This page has been fully proofread once and needs a second look.

36
 
ಅವತಾರಿಕಾ
 
- ಸರ್ವತ್ರ ಪೂಜ್ಯನಾರು? ಅವನನ್ನು ಪೂಜಿಸುವ ರೀತಿ ಯಾವುದು ? ಎಂಬ ಪ್ರಶ್ನೆಗೆ ಉತ್ತರಿಸುತ್ತಿದ್ದಾರೆ.
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 1
 
ಸರ್ವತ್ರ ಪೂಜ್ಯನಾರು? ಅವನನ್ನು ಪೂಜಿಸುವ ರೀತಿ
 
-
 

 
ಪೂಜ್ಯಶ್ಚ ಭಗವಾನ್ನಿತ್ಯಂ ಚಕ್ರಾಬಾಬ್ಜಾದಿಕಮಂಡಲೇ

ಹೃದಯೇ ವಾ ಚಲೇ ವಾಽಪಿ ಜಲೇ ವಾ ಕೇವಲ ಸ್ಥಲೇ 148
 
-
 

 
ಅರ್ಥ
 
- ಶ್ರೀಮನ್ನಾರಾಯಣನೇ
ಸರ್ವತ್ರಪೂಜ್ಯನು. ಅವನನ್ನು ಚಕ್ರಾಬ್ಜ, ಭದ್ರಕ ಮೊದಲಾದ ಮಂಡಲಗಳಲ್ಲಿಯೂ
 
ಆಯಾಯ ದೇವತಾಯಂತ್ರಗಳಲ್ಲಿ ಆವಾಹಿಸಿ ಪೂಜಿಸಬೇಕು. ಅಥವಾ ಪ್ರತಿಮೆ, ಸಾಲಿಗ್ರಾಮಾದಿ ಅಚಲಪ್ರತೀಕಗಳಲ್ಲಿ,
ದೇವಾಲಯ- ಗಳಲ್ಲಿರುವ ಸ್ಥಿರಪ್ರತಿಮೆಗಳಾಗಲೀ, ಗುರು ಯತಿಗಳು ಮೊದಲಾದ

ಚಲಪ್ರತಿಮೆಗಳಾಗಲೀ, [^1] , ಕೇವಲ ಭೂಮಿಯಲ್ಲಿ ಮಂಡಲ ಬರೆದು, ಭೂಸ್ಥಂಡಿಲ-
ದಲ್ಲಿಯೇ ಮಂಡಲ ಬರೆದು ಭೂಸ್ಥಂಡಿಲ ದಲ್ಲಿಯೇ ಭಗವಂತನನ್ನು
ಪೂಜಿಸಬಹುದು.
 
ಸರ್ವತ್ರಪೂಜ್ಯನು. ಅವನನ್ನು ಚಕ್ರಾಬ್ಬ,
ಆಯಾಯದೇವತಾಯಂತ್ರಗಳಲ್ಲಿ
 

 
ವ.ಟೀ. - ಪೂಜಾವಿಧಾನವಾಮಾಹ - ಪೂಜ್ಯ ಇತಿ ॥ ಚಕ್ರಾಂಬ್ಜಂ ಏಕಂ ಮಂಡಲಮ್ ।
 

 
 
 
 
 
ವ್ಯಾಹೃತಿಗಳ ಮೊದಲು ಓಂಕಾರಗಳೂ, ಗಾಯತ್ರಿ ಮಂತ್ರದ ಆದಿ- ಯಲ್ಲಿ ಒಂದು ಓಂಕಾರ
ಹೀಗೆ ಆರು ಓಂಕಾರಗಳು. ಇದು ಯತಿ ಹಾಗೂ ವಾನಪ್ರಸ್ಥರಿಗೆ ಯೋಗ್ಯವಾಗಿದೆ.

ಯತಿಗಳಿಗೆ ಗಾಯತ್ರಿಯು ಆವಶ್ಯಕವೇ?
 

ದ್ವಿಜನಾದವನು ಗಾಯತ್ರೀಪ್ರಧಾನಕವಾದ ಸಂಧ್ಯಾವಂದನೆ- ಯನ್ನು ಬಿಟ್ಟರೆ ಬದುಕಿರುವಾಗಲೇ
ಶೂದ್ರನಾಗುವನು. ಸನ್ಯಾಸಿಯು ಮನೆ, ಮಡದಿ, ಮಠ ಎಲ್ಲವನ್ನೂ ಬಿಡಬಹುದು. ಆದರೆ
ತಂದೆ ಉಪದೇಶಿಸಿದ ವೇದಮಾತೆಯನ್ನು ತ್ಯಜಿಸಬಾರದು.
 

'ಸರ್ವಂ ಚ ಸನ್ನ್ಯಸೇದ್ ವಿದ್ವಾನ್ ವೇದಮೇಕಂ ನ ಸಂತ್ಯಜೇತ್'.
 

ಕುಟೀಚಕ, ಬಹೂದಕ, ಹಂಸ, ಪರಮಹಂಸನಾಗಲೀ ವೇದಮಾತೆ ಯನ್ನು ತ್ಯಜಿಸಬಾರದು.
ತ್ಯಜಿಸಿದರೆ ಚಂಡಾಲನಿಗಿಂತಲೂ ಅಧಮನೆನಿಸುವನು.
 

"ಗಾಯತ್ರೀರಹಿತಾಃ ಸರ್ವೆ ಚಂಡಾಲಾದಧಮಃ ಸ್ಮೃತಃ
 
"
ಈ ಮಾತುಗಳೆಲ್ಲ ವ್ಯಾಹೃತಿಸಹಿತವಾದ ಗಾಯತ್ರಿಯನ್ನು ಕುರಿತೇ ಹೇಳುತ್ತಿವೆ. ಬ್ರಹ್ಮ
ಗಾಯತ್ರೀಯಾದರೋ ವ್ಯಾಹೃತಿರಹಿತ- ವಾದದ್ದು. ಆದ್ದರಿಂದ ಯತಿಗಳೂ ಸಹ ವಿಶ್ವಾಮಿತ್ರಗಾಯತ್ರಿ-
ಗಾಯತ್ರಿ
ಯನ್ನು ಹತ್ತಕ್ಕೆ ಕಡಿಮೆಯಾಗದಂತೆ ಜಪಿಸಲೇಬೇಕು. ಆದರೆ ಸಂಧ್ಯಾವಂದನೆಯಲ್ಲಿ
ಅರ್ಥ್ಘ್ಯಪರ್ಯಂತ ಮಾಡಿ ಗಾಯತ್ರಿ ಯನ್ನು ಜಪಿಸುವುದು. ಉಪಸ್ಥಾನಾದಿಗಳಿಲ್ಲ.

[^
1]. ಸನ್ಯಾಸಿಗಳನ್ನು ಭಿಕ್ಷೆಗೆ ಆಹ್ವಾನಿಸಿದಾಗ ಪ್ರತಿಮೆ ಹಾಗೂ ಸನ್ನ್ಯಾಸಿಗಳ ಅಂತರ್ಯಾಮಿ ಪೂಜೆ
ನಡೆಯುವುದರಿಂದ ಸನ್ಮಾನ್ಯಾಸಿಭಿಕ್ಷೆಗೆ ವಿಶೇಷಸ್ಥಾನವಿದೆ.