This page has not been fully proofread.

36
 
ಅವತಾರಿಕಾ
 
ಯಾವುದು ? ಎಂಬ ಪ್ರಶ್ನೆಗೆ ಉತ್ತರಿಸುತ್ತಿದ್ದಾರೆ.
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 1
 
ಸರ್ವತ್ರ ಪೂಜ್ಯನಾರು? ಅವನನ್ನು ಪೂಜಿಸುವ ರೀತಿ
 
-
 
ಪೂಜ್ಯಶ್ಚ ಭಗವಾನ್ನಿತ್ಯಂ ಚಕ್ರಾಬಾದಿಕಮಂಡಲೇ
ಹೃದಯೇ ವಾ ಚಲೇ ವಾಽಪಿ ಜಲೇ ವಾ ಕೇವಲ ಸ್ಥಲೇ 148
 
-
 
ಅರ್ಥ
 
ಶ್ರೀಮನ್ನಾರಾಯಣನೇ
ಭದ್ರಕ ಮೊದಲಾದ ಮಂಡಲಗಳಲ್ಲಿಯೂ
 
ಆವಾಹಿಸಿ ಪೂಜಿಸಬೇಕು. ಅಥವಾ ಪ್ರತಿಮೆ, ಸಾಲಿಗ್ರಾಮಾದಿ ಅಚಲಪ್ರತೀಕಗಳಲ್ಲಿ,
ದೇವಾಲಯಗಳಲ್ಲಿರುವ ಸ್ಥಿರಪ್ರತಿಮೆಗಳಾಗಲೀ, ಗುರು ಯತಿಗಳು ಮೊದಲಾದ
ಚಲಪ್ರತಿಮೆಗಳಾಗಲೀ, ಕೇವಲ ಭೂಮಿಯಲ್ಲಿ ಮಂಡಲಬರೆದು, ಭೂಸ್ಥಂಡಿಲ-
ದಲ್ಲಿಯೇ ಮಂಡಲ ಬರೆದು ಭೂಸ್ಥಂಡಿಲದಲ್ಲಿಯೇ ಭಗವಂತನನ್ನು
ಪೂಜಿಸಬಹುದು.
 
ಸರ್ವತ್ರಪೂಜ್ಯನು. ಅವನನ್ನು ಚಕ್ರಾಬ್ಬ,
ಆಯಾಯದೇವತಾಯಂತ್ರಗಳಲ್ಲಿ
 
ವ.ಟೀ. - ಪೂಜಾವಿಧಾನವಾಹ - ಪೂಜ್ಯ ಇತಿ ॥ ಚಕ್ರಾಂ ಏಕಂ ಮಂಡಲಮ್ ।
 
ವ್ಯಾಹೃತಿಗಳ ಮೊದಲು ಓಂಕಾರಗಳೂ, ಗಾಯತ್ರಿ ಮಂತ್ರದ ಆದಿಯಲ್ಲಿ ಒಂದು ಓಂಕಾರ
ಹೀಗೆ ಆರು ಓಂಕಾರಗಳು. ಇದು ಯತಿ ಹಾಗೂ ವಾನಪ್ರಸ್ಥರಿಗೆ ಯೋಗ್ಯವಾಗಿದೆ.
ಯತಿಗಳಿಗೆ ಗಾಯತ್ರಿಯು ಆವಶ್ಯಕವೇ?
 
ದ್ವಿಜನಾದವನು ಗಾಯತ್ರೀಪ್ರಧಾನಕವಾದ ಸಂಧ್ಯಾವಂದನೆಯನ್ನು ಬಿಟ್ಟರೆ ಬದುಕಿರುವಾಗಲೇ
ಶೂದ್ರನಾಗುವನು. ಸನ್ಯಾಸಿಯು ಮನೆ, ಮಡದಿ, ಮಠ ಎಲ್ಲವನ್ನೂ ಬಿಡಬಹುದು. ಆದರೆ
ತಂದೆ ಉಪದೇಶಿಸಿದ ವೇದಮಾತೆಯನ್ನು ತ್ಯಜಿಸಬಾರದು.
 
'ಸರ್ವಂ ಚ ಸನ್ನಸೇದ್ ವಿದ್ವಾನ್ ವೇದಮೇಕಂ ನ ಸಂತ್ಯಜೇತ್'.
 
ಕುಟೀಚಕ, ಬಹೂದಕ, ಹಂಸ, ಪರಮಹಂಸನಾಗಲೀ ವೇದಮಾತೆಯನ್ನು ತ್ಯಜಿಸಬಾರದು.
ತ್ಯಜಿಸಿದರೆ ಚಂಡಾಲನಿಗಿಂತಲೂ ಅಧಮನೆನಿಸುವನು.
 
"ಗಾಯರಹಿತಾಃ ಸರ್ವೆ ಚಂಡಾಲಾದಧಮಃ ಸ್ಮೃತಃ
 
ಈ ಮಾತುಗಳೆಲ್ಲ ವ್ಯಾಹೃತಿಸಹಿತವಾದ ಗಾಯತ್ರಿಯನ್ನು ಕುರಿತೇ ಹೇಳುತ್ತಿವೆ. ಬ್ರಹ್ಮ
ಗಾಯತ್ರೀಯಾದರೋ ವ್ಯಾಹೃತಿರಹಿತವಾದದ್ದು. ಆದ್ದರಿಂದ ಯತಿಗಳೂ ಸಹ ವಿಶ್ವಾಮಿತ್ರ-
ಗಾಯತ್ರಿಯನ್ನು ಹತ್ತಕ್ಕೆ ಕಡಿಮೆಯಾಗದಂತೆ ಜಪಿಸಲೇಬೇಕು. ಆದರೆ ಸಂಧ್ಯಾವಂದನೆಯಲ್ಲಿ
ಅರ್ಥ್ಯಪರ್ಯಂತ ಮಾಡಿ ಗಾಯತ್ರಿಯನ್ನು ಜಪಿಸುವುದು. ಉಪಸ್ಥಾನಾದಿಗಳಿಲ್ಲ.
1. ಸನ್ಯಾಸಿಗಳನ್ನು ಭಿಕ್ಷೆಗೆ ಆಹ್ವಾನಿಸಿದಾಗ ಪ್ರತಿಮೆ ಹಾಗೂ ಸನ್ಯಾಸಿಗಳ ಅಂತರ್ಯಾಮಿ ಪೂಜೆ
ನಡೆಯುವುದರಿಂದ ಸನ್ಮಾಸಿಭಿಕ್ಷೆಗೆ ವಿಶೇಷಸ್ಥಾನವಿದೆ.