This page has not been fully proofread.

ಪ್ರಥಮೋಧ್ಯಾಯಃ
 
ಪೂಜಾಕ್ರಮ
 
ಆದರೆ ವಿಶೇಷವನ್ನು ಮಾಧವಸ್ಕೃತಿಯಲ್ಲಿ ಹೇಳಿದ್ದಾರೆ - ''ಸಂಧ್ಯಾಸು ಮಂತ್ರಾ ಇಮಮೇವ
ಜಪ್ಯಾಃ'' (ಸಂಧ್ಯಾಕಾಲಗಳಲ್ಲಿ ಎಲ್ಲರೂ ಈ ಅಷ್ಟಮಹಾಮಂತ್ರಗಳನ್ನೇ ಜಪಿಸಬೇಕು.
 
ಆದರೆ ಯತಿಗಳು ಓಂಕಾರವನ್ನು ಮೊದಲು ಜಪಿಸಿ ಅನಂತರ ಉಳಿದ ಮಂತ್ರಗಳನ್ನು
ಜಪಿಸಬೇಕು : 'ತಾರೋ ಯತೀನಾಂ ಪ್ರಥಮೋ ಹಿ ಮಂತ್ರಃ''.
 
35
 
ಬೇರೆ ಗೃಹಸ್ಥಾಶ್ರಮಿ ಮೊದಲಾದವರು ಮೊದಲು ಗಾಯತ್ರಿಯನ್ನು ಜಪಿಸಿ ನಂತರ ಇತರ
ಮಂತ್ರಗಳನ್ನು ಜಪಿಸಬೇಕು - "ಸಾವಿತ್ರ ಉಕ್ತಶ್ಚ ತಥಾ ಪರೇಷಾಂ ದ್ವಿಜನನಾಂ'',
ಶೌನಕರೂ ಸಮ್ಮತಿಯನ್ನು ಸೂಚಿಸಿದ್ದಾರೆ -
 
'ಗೃಹಸ್ಥಾದ್ಯಾಃ ತಥಾ ಶುದ್ಧಾಃ ಪೌನಶ್ಚರಣಕಂ ವಿನಾ ।
ನಿತ್ಯಮೇವ ಜಪಂ ಕುರ್ಯು
 
ಬೇರೆ ಪತ್ನಿಯರ ಸಂಬಂಧವಿಲ್ಲದೆ ಶುದ್ಧರಾದ ಗೃಹಸ್ಥರೂ ಬ್ರಹ್ಮಚಾರಿಗಳೆನಿಸಿದ್ದು
ಪ್ರಣವಮಂತ್ರವನ್ನು ಜಪಿಸಬಹುದು. ಆದರೆ ಯತಿಗಳಂತೆ ಪುರಶ್ಚರಣವಿಧಿಯಂತಲ್ಲ.
 
ಅಂತೂ ಗೃಹಸ್ಥರು ಮೊದಲು ವಿಶ್ವಾಮಿತ್ರಗಾಯತ್ರಿಯನ್ನು ಜಪಿಸಿ ನಂತರ ಉಳಿದ
ಅಷ್ಟಮಹಾಮಂತ್ರಗಳನ್ನು ಜಪಿಸಬೇಕು. ಯತಿಗಳಾದರೋ ಪ್ರಣವಜಪವನ್ನು ಮೊದಲು
 
ಮಾಡಿ ಉಳಿದ ವಿಶ್ವಾಮಿತ್ರಗಾಯತ್ರೀ ಅಷ್ಟಾಕ್ಷರ ಮಂತ್ರಗಳನ್ನು ಜಪಿಸಬೇಕು ಎಂದಂತಾಯಿತು.
ಇದರಿಂದ ಯತಿಗಳೂ ವಿಶ್ವಾಮಿತ್ರಗಾಯತ್ರೀಜಪವನ್ನು ಮಾಡಲೇ ಬೇಕು ಎಂದಾಯಿತು.
ಗಾಯತ್ರಿಯಲ್ಲಿ ಏಕೋಂಕಾರ, ಸಂಪುಟೋಂಕಾರ, ಷಡೋಂಕಾರ ಎಂದು ಮೂರು ವಿಧಗಳಿವೆ.
"ಏಕೋಂಕಾರಾ ಸಂಪುಟಾ ಚ ಷಡೋಂಕಾರೇತಿ ಸಾ ತ್ರಿಧಾ''.
 
ಆದಿಯಲ್ಲಿ ಮಾತ್ರ ಓಂಕಾರವಿರುವ 'ಓಂ ಭೂರ್ಭುವಃಸ್ವಃ ತತ್ಸವಿತುರ್ವರೇಣ್ಯಂ ಭರ್ಗೋ
ದೇವಸ್ಯ ಧೀಮಹಿ । ಧಿಯೋ ಯೋ ನಃ ಪ್ರಚೋದಯಾತ್'' ಇದು ಬ್ರಹ್ಮಚಾರಿ, ಗೃಹಸ್ಥರಿಗೆ
ಯುಕ್ತವಾಗಿದೆ.
 
ಆದಿಯಲ್ಲಿ ಹಾಗೂ ಅಂತ್ಯದಲ್ಲಿ ಓಂಕಾರವಿರುವ ಸಂಪುಟೋಂಕಾರಗಾಯತ್ರೀಯು ಹೀಗಿದೆ
'ಓಂ ಭೂರ್ಭುವಃಸ್ವಃ ತತ್ಸವಿತುರ್ವರೇಣ್ಯಂ ಭರ್ಗೊ ದೇವಸ್ಯ ಧೀಮಹಿ 1 ಧಿಯೋ ಯೋ
ನಃ ಪ್ರಚೋದಯಾತ್ ಓಂ''
 
ಓಂಕಾರಂ ಪೂರ್ವಮುಚ್ಚಾರ್ಯ ಭೂರ್ಭುವಸ್ವಸ್ತಥೈವ ಚ ।
ಗಾಯತ್ರೀಂ ಪ್ರಣವಂ ಚಾಂತೇ ಗಾಯತ್ರೀ ಸಂಪುಟಾ ಮತಾ ॥
 
- ಯಾಜ್ಞವಲ್ಕ ಸ್ಮೃತಿ 4/26
ಷಡೋಂಕಾರಗಾಯತ್ರಿಯ ಸ್ವರೂಪ ಹೀಗಿದೆ - ಓಂ ಓಂ ಭೂಃ, ಓಂ ಭುವಃ, ಓಂ ಸ್ವಃ,
ಓಂ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ । ಧಿಯೋ ಯೋ ನಃ
ಪ್ರಚೋದಯಾತ್ ಓಂ, ಅಂದರೆ ಆದಿ-ಅಂತ್ಯದಲ್ಲಿ ಎರಡು ಓಂಕಾರಗಳು, ಮೂರು