This page has been fully proofread once and needs a second look.

ಅರ್ಥ - ಈ ಮೇಲೆ ವಿವರಿಸಿದ ಪ್ರಣವಾದಿ ಅಷ್ಟಮಹಾಮಂತ್ರ ಗಳಾದರೂ ಮುಂದೆ ಹೇಳುವ ವರಾಹಾದಿಮಂತ್ರಗಳಿಗೂ ಮೂಲ ಭೂತವಾದ ಮಂತ್ರಗಳೆನಿಸಿದ್ದುವ್ಯಾಖ್ಯಾನರೂಪದಂತಿವೆ. ಆದ್ದರಿಂದ ಇವುಗಳನ್ನೇ ಸರ್ವರೂ ಮುಖ್ಯವಾಗಿ ಜಪಿಸತಕ್ಕದ್ದು.
 
(ಮುಖ್ಯವಾಗಿ ಈ ಮಂತ್ರಗಳನ್ನೇ ಜಪಿಸಲು ಇನ್ನೊಂದು ಕಾರಣ) ಈ ಅಷ್ಟಮಹಾಮಂತ್ರಗಳ ಅರ್ಥಾನುಸಂಧಾನದಿಂದ ಸಮಸ್ತ ಮಂತ್ರ ಹಾಗೂ ಮಂತ್ರಪ್ರತಿಪಾದ್ಯವಿಷಯವನ್ನೂ ತಿಳಿದಂತಾ-ಗುತ್ತದೆ. ಸಮಸ್ತಮಂತ್ರಾರ್ಥಜ್ಞಾನದ ಫಲವು ಅಷ್ಟಮಹಾ- ಮಂತ್ರಾರ್ಥಜ್ಞಾನದಲ್ಲಿಯೇ ಅಡಕವಾಗುತ್ತವೆ ಎಂದು ಭಾವ.
 
ಇಷ್ಟಲ್ಲದೇ ಇನ್ನೊಂದು ಕಾರಣವೂ ಇದೆ. - ಈ ಅಷ್ಟಮಹಾ
ಮಂತ್ರಗಳ ಜಪ ಮಾಡುವುದರಿಂದ ಉಳಿದ ಸಮಸ್ತಮಂತ್ರ- ಗಳನ್ನೂ ಜಪಮಾಡಿದಂತಾಗುತ್ತದೆ.[^1]
 

 
 
[^1]. ವಿಶೇಷಾಂಶ - ಈ ಅಷ್ಟಮಹಾಮಂತ್ರಗಳನ್ನು ನಾಲ್ಕು ಅಶ್ರಮದವರೂ ಜಪಿಸಬೇಕೆಂದು ವಿಧಿಸಿದ್ದಾರೆ. ಆದರೆ ಪ್ರಣವ ಮಂತ್ರಜಪವಾದರೋ ಯತಿಗಳಿಗೆ ಮಾತ್ರ ವಿಹಿತವಾಗಿದೆ. ಗೃಹಸ್ಥರಿಗೆ ಹೇಗೆಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ವರಾಹಪುರಾಣದಲ್ಲಿ 'ಪ್ರಣವೋ ಯತೀನಾಮೇವ ಗೃಹಿಭಿಃ ಜ್ಞಾಯತೇ ನ ತು' ಎಂದು ಹೇಳಿದೆ.
ಕೆಲವರು ಗೃಹಸ್ಥರಿಗೂ ಪ್ರಣವಮಂತ್ರಜಪವಿದೆ ಎಂದು ತಿಳಿ- ಯುವರು. ಅವರ ಅಭಿಪ್ರಾಯ ಹೀಗಿದೆ-
ಶ್ರೀಮದಾಚಾರ್ಯರೇ ಮೂರನೆಯ ಅಧ್ಯಾಯದಲ್ಲಿ (3/110)ರಲ್ಲಿ 'ಪ್ರತಿಮಾಂ ಪ್ರಣವೇನ ತು' ಎಂದು ಗೃಹಸ್ಥರಿಗೂ ಪ್ರಣವಾವೃತ್ತಿ- ಯನ್ನು ಹೇಳಿದ್ದಾರೆ. ವಿಷ್ಣುತೀರ್ಥರ ಸನ್ನ್ಯಾಸಪದ್ಧತಿಯಲ್ಲಿ
ನಾರಾಯಣಾಷ್ಟಾಕ್ಷರಂ ಚ ವೈಷ್ಣವಂ ಚ ಷಡಕ್ಷರಮ್ ।
ದ್ವಾದಶಾರ್ಣೋ ವ್ಯಾಹೃತಯಃ ಷಡೇತೇ ಮನವೋಽಖಿಲೈಃ ॥
ಮುಮುಕ್ಷುಭಿಃ ಸದಾ ಜಪ್ಯಾಃ...............(2/120)
ಎಂದು ಗೃಹಸ್ಥರಿಗೂ ಅಷ್ಟಮಹಾಮಂತ್ರಗಳನ್ನೂ ಜಪಿಸಲು ಹೇಳಿದ್ದಾರೆ. ಹಾಗಾದರೆ ವರಾಹಪುರಾಣದ ಮಾತಿಗೆ ವಿರೋಧ ಬಂದಿತಲ್ಲಾ? ಎಂದರೆ,
ಯತಿಗಳು ಹೇಗೆ ಪುರಶ್ಚರಣದಲ್ಲಿ ಸಾವಿರಾರು ಜಪ ಮಾಡುವ- ರೋ ಹಾಗೆ ಗೃಹಸ್ಥನಿಗೆಇರುವುದಿಲ್ಲ ; ಮಂತ್ರವನ್ನೇ ನಿಷೇಧಿಸಿಲ್ಲ; ಪಂಚಗವ್ಯಮೇಲನದಲ್ಲಿ, ಪ್ರತಿಮಾಸ್ಥಾಪನೆಯಲ್ಲಿ, ಸ್ನಾನಾದಿ- ಗಳಲ್ಲಿಯೂ ಮಂತ್ರಾವೃತ್ತಿಯನ್ನು ಹೇಳಿದ್ದಾರೆ.