This page has not been fully proofread.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 1
 
ಅರ್ಥ - ಈ ಮೇಲೆ ವಿವರಿಸಿದ ಪ್ರಣವಾದಿ ಅಷ್ಟಮಹಾಮಂತ್ರಗಳಾದರೂ
ಮುಂದೆ ಹೇಳುವ ವರಾಹಾದಿಮಂತ್ರಗಳಿಗೂ ಮೂಲಭೂತವಾದ ಮಂತ್ರಗಳೆನಿಸಿದ್ದು
ವ್ಯಾಖ್ಯಾನರೂಪದಂತಿವೆ. ಆದ್ದರಿಂದ ಇವುಗಳನ್ನೇ ಸರ್ವರೂ ಮುಖ್ಯವಾಗಿ
ಜಪಿಸತಕ್ಕದ್ದು.
 
34
 
(ಮುಖ್ಯವಾಗಿ ಈ ಮಂತ್ರಗಳನ್ನೇ ಜಪಿಸಲು ಇನ್ನೊಂದು ಕಾರಣ) ಈ ಅಷ್ಟ-
ಮಹಾಮಂತ್ರಗಳ ಅರ್ಥಾನುಸಂಧಾನದಿಂದ ಸಮಸ್ತಮಂತ್ರ ಹಾಗೂ ಮಂತ್ರಪ್ರತಿ-
ಪಾದ್ಯವಿಷಯವನ್ನೂ ತಿಳಿದಂತಾಗುತ್ತದೆ. ಸಮಸ್ತಮಂತ್ರಾರ್ಥಜ್ಞಾನದ ಫಲವು
ಅಷ್ಟಮಹಾಮಂತ್ರಾರ್ಥಜ್ಞಾನದಲ್ಲಿಯೇ ಅಡಕವಾಗುತ್ತವೆ ಎಂದು ಭಾವ.
 
ಇಷ್ಟಲ್ಲದೇ ಇನ್ನೊಂದು ಕಾರಣವೂ ಇದೆ. - ಈ ಅಷ್ಟಮಹಾಮಂತ್ರಗಳ ಜಪ
ಮಾಡುವುದರಿಂದ ಉಳಿದ ಸಮಸ್ತಮಂತ್ರಗಳನ್ನೂ ಜಪಮಾಡಿದಂತಾಗುತ್ತದೆ.
 
1. ವಿಶೇಷಾಂಶ - ಈ ಅಷ್ಟಮಹಾಮಂತ್ರಗಳನ್ನು ನಾಲ್ಕು ಅಶ್ರಮದವರೂ ಜಪಿಸಬೇಕೆಂದು ವಿಧಿ
ಸಿದ್ದಾರೆ.
 
ಆದರೆ ಪ್ರಣವಮಂತ್ರಜಪವಾದರೋ ಯತಿಗಳಿಗೆ ಮಾತ್ರ ವಿಹಿತವಾಗಿದೆ. ಗೃಹಸ್ಥರಿಗೆ
ಹೇಗೆಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ವರಾಹಪುರಾಣದಲ್ಲಿ 'ಪ್ರಣವೋ
 
ಯತೀನಾಮೇವ ಗೃಹಿಭಿಃ ಜ್ಞಾಯತೇ ನ ತು' ಎಂದು ಹೇಳಿದೆ.
 
ಕೆಲವರು ಗೃಹಸ್ಥರಿಗೂ ಪ್ರಣವಮಂತ್ರಜಪವಿದೆ ಎಂದು ತಿಳಿಯುವರು. ಅವರ ಅಭಿಪ್ರಾಯ
 
ಹೀಗಿದೆ
 
ಶ್ರೀಮದಾಚಾರ್ಯರೇ ಮೂರನೆಯ ಅಧ್ಯಾಯದಲ್ಲಿ (3/110)ರಲ್ಲಿ ಪ್ರತಿಮಾಂ ಪ್ರಣವೇನ
ತು' ಎಂದು ಗೃಹಸ್ಥರಿಗೂ ಪ್ರಣವಾವೃತ್ತಿಯನ್ನು ಹೇಳಿದ್ದಾರೆ.
ವಿಷ್ಣುತೀರ್ಥರ ಸಾಸಪದ್ಧತಿಯಲ್ಲಿ
 
ನಾರಾಯಣಾಷ್ಟಾಕ್ಷರಂ ಚ ವೈಷ್ಣವಂ ಚ ಷಡಕ್ಷರಮ್ ।
ದ್ವಾದಶಾರ್ಣೋ ವ್ಯಾಹೃತಯಃ ಷಡೇತೇ ಮನವೋಽಖಿಲೈಃ ॥
ಮುಮುಕ್ಷುಭಿಃ ಸದಾ ಜಪ್ಯಾಃ
(2/120)
 
ಎಂದು ಗೃಹಸ್ಥರಿಗೂ ಅಷ್ಟಮಹಾಮಂತ್ರಗಳನ್ನೂ ಜಪಿಸಲು ಹೇಳಿದ್ದಾರೆ. ಹಾಗಾದರೆ
ವರಾಹಪುರಾಣದ ಮಾತಿಗೆ ವಿರೋಧಬಂದಿತಲ್ಲಾ? ಎಂದರೆ
 
ಯತಿಗಳು ಹೇಗೆ ಪುರಶ್ಚರಣದಲ್ಲಿ ಸಾವಿರಾರು ಜಪ ಮಾಡುವರೋ ಹಾಗೆ ಗೃಹಸ್ಥನಿಗೆ
ಇರುವುದಿಲ್ಲ ; ಮಂತ್ರವನ್ನೇ ನಿಷೇಧಿಸಿಲ್ಲ; ಪಂಚಗವ್ಯಮೇಲನದಲ್ಲಿ, ಪ್ರತಿಮಾಸ್ಥಾಪನೆಯಲ್ಲಿ,
ಸ್ನಾನಾದಿಗಳಲ್ಲಿಯೂ ಮಂತ್ರಾವೃತ್ತಿಯನ್ನು ಹೇಳಿದ್ದಾರೆ.