This page has not been fully proofread.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 1
 
ಟೀಕಾರ್ಥ - ಪುರುಷಸೂಕ್ತದಲ್ಲಿರುವ ಹದಿನೈದು ಋಕ್ಕು(ಮಂತ್ರಗಳು ಅನುಷ್ಟುಪ್
ಛಂದಸ್ಸಿನಲ್ಲಿವೆ. 'ಯಜ್ಞನ ಯಜ್ಞ' ಎಂಬ ಹದಿನಾರನೆಯ ಮಂತ್ರವು ತ್ರಿಷ್ಟುಪ್
ಛಂದಸ್ಸಿನಲ್ಲಿದೆ. ಇದು ಋಗೈದಿಗಳಿಗೆ ನಿಯಮವಾಗಿರುತ್ತದೆ. ಆಪಸ್ತಂಬರಿಗೆ
(ಯಜುರ್ವೇದಿಗಳಿಗೆ) ಹದಿನೈದು ಮಂತ್ರಗಳು ತ್ರಿಷ್ಟುಪ್ ಛಂದಸ್ಸಿನಲ್ಲಿರುತ್ತವೆ.
 
32
 
ವಿಷ್ಣು ಷಡಕ್ಷರಮಂತ್ರ ನ್ಯಾಸಾದಿಗಳು
ಹೃದಯೇತಃ ಷಡಕ್ಷರ: 144
 
ವಿಷ್ಣುಶಬಶ್ಚತುರ್ಥ್ಯಂತೋ
 
ತಾರವತ್ ಸರ್ವಮಸ್ಯಾಪಿ ಶ್ಯಾಮೋ ಧೈಯೋ ಹರಿಃ ಸ್ವಯಮ್ ।
 
ಅರ್ಥ
 
ಚತುರ್ಥಿವಿಭಕ್ಕಂತವಾದ ವಿಷ್ಣವೇ ಎಂಬ ಶಬ್ದ ಹಾಗೂ ನಮಃ
ಶಬ್ದವು ಸೇರಿದರೆ 'ವಿಷ್ಣವೇ ನಮಃ' ಎಂಬ ವಿಷ್ಣುಷಡಕ್ಷರಮಂತ್ರವಾಗುತ್ತದೆ. ಋಷಿ
ಛಂದಸ್ಸು ಎಲ್ಲವೂ ಪ್ರಣವದಲ್ಲಿ ಹೇಳಿದಂತೆಯೇ ಆದರೆ ಧೈಯವಾದ
ವಿಷ್ಣುರೂಪವಾದರೂ ನೀಲವರ್ಣವಾಗಿದೆ.
 
ವ.ಟಿ. - ಹೃದಯೇತಃ = ನಮಃಸಹಿತಃ ।
 
ಟೀಕಾರ್ಥ - ಹೃದಯೇತಃ ಎಂದರೆ ಹೃದಯಸ್ಥಾನದಲ್ಲಿ ನ್ಯಾಸಮಾಡುವ ನಮಃ ಎಂಬ
ಪದದಿಂದ ಕೂಡಿರುವ ಎಂದರ್ಥ.
 
ವರ್ಣಾ ಏವ ಷಡಂಗಾನಿ ಷಣಯೋರ್ಧೆದಯೋಗತಃ ॥451
ಪಜ್ಜಾನುನಾಭಿಹೃನ್ನಾಸಾಕೇಷು ನ್ಯಾಸಶ್ಚ ವರ್ಣಶಃ ।
 
ಅರ್ಥ - 'ವಿಷ್ಣವೇ ನಮಃ' ಎಂಬ ಮಂತ್ರದ ಅಕ್ಷರಗಳಿಂದಲೇ ಷಡಂಗನ್ಯಾಸ
ಮಾಡಿಕೊಳ್ಳಬೇಕು. 'ಮ' ಎಂಬಲ್ಲಿರುವ ಷಕಾರ-ಣಕಾರಗಳನ್ನು ಬಿಡಿಸಿ ಬೇರೆ
ಮಾಡಿದಾಗ ಆರುವರ್ಣಗಳಾಗಿ ಷಡಂಗನ್ಯಾಸ ಮಾಡಿಕೊಳ್ಳಬಹುದಾಗಿದೆ. ಕಾಲು,
ಜಾನು, ನಾಭಿ, ಎದೆ, ಮೂಗು, ಶಿರಸ್ಸುಗಳಲ್ಲಿ ವರ್ಣನ್ಯಾಸವನ್ನು ಮಾಡಬೇಕು.
 
1. ವಿಶೇಷಾಂಶ - ವಿಷ್ಣುಷಡಕ್ಷರಮಂತ್ರನ್ಯಾಸಾದಿಗಳು
ಪ್ರಾಣಾಯಾಮ- ವಿಷ್ಣವೇ ನಮಃ ಇತಿ ಪ್ರಾಣಾಯಾಮಃ ।
ಋಷಿನ್ಯಾಸಃ -
 
ಅಸ್ಯ ಶ್ರೀ ವಿಷ್ಣು ಷಡಕ್ಷರಮಂತ್ರಸ್ಯ ಅಂತರ್ಯಾಮಿ ಋಷಿಃ । ದೈವೀಗಾಯತ್ರೀ ಛಂದಃ ।
ವಿಷ್ಣುರ್ದೇವತಾ । ಭಾರತೀರಮಣಮುಖ್ಯಪ್ರಾಣಾಂತರ್ಗತ ಶ್ರೀವಿಷ್ಣುಪ್ರೇರಣಯಾ
ಶ್ರೀವಿಷ್ಣುಪ್ರೀತ್ಯರ್ಥ೦ ವಿಷ್ಣುಷಡಕ್ಷರಮಂತ್ರಜಪೇ ವಿನಿಯೋಗಃ ।