2023-04-27 14:06:21 by ambuda-bot
This page has not been fully proofread.
ಶ್ರೀಶ್ರೀ ೧೦೦೮ಶ್ರೀಸುಶಮೀಂದ್ರತೀರ್ಥ ಶ್ರೀಪಾದಂಗಳವರು,
ಜಗದ್ಗುರು
ಶ್ರೀಮನ್ಮಧ್ವಾಚಾರ್ಯಮೂಲಮಹಾಸಂಸ್ಥಾನ
ಶ್ರೀರಾಘವೇಂದ್ರಗುರುಸಾರ್ವಭೌಮರ ಮಠ,
ಮಂತ್ರಾಲಯ, ಆಂಧ್ರಪ್ರದೇಶ,
ಅನುಗ್ರಹವಚನ -೧
ಶ್ರೀಮದಾಚಾರ್ಯರ ತಂತ್ರಸಾರಗ್ರಂಥ''ವು ಶ್ರೀಮದಾಚಾರ್ಯರ ಅಪೂರ್ವ ಕೃತಿಯಾಗಿದೆ.
ಸರ್ವಜ್ಞರಾದ ಶ್ರೀಮದಾಚಾರ್ಯರು ತಿಳಿಯದ ವಿಷಯವೇ ಇರುವುದಿಲ್ಲ. ಇದೊಂದು
ಕಲ್ಪವೃಕ್ಷವಾಗಿದೆ. ಮಂತ್ರಾಧ್ಯಾಯದಲ್ಲಿರುವ ಒಂದೊಂದು ಮಂತ್ರವೂ ವಿಶಿಷ್ಟಫಲವನ್ನು ನೀಡಲು
ಸಮರ್ಥವಾಗಿವೆ.
ಏಳುಕೋಟಿವೈಷ್ಣವಮಂತ್ರವಿದೆಯೆಂದು ಶ್ರೀರಾಘವೇಂದ್ರತೀರ್ಥರು ತಮ್ಮ ಪ್ರಾತಃಸಂಕಲ್ಪಗದ್ಯದಲ್ಲಿ
ತಿಳಿಸಿರುತ್ತಾರೆ. ಇವುಗಳಲ್ಲಿ ಅತ್ಯಂತವೀರ್ಯವತ್ತಾದ ಎಪ್ಪತ್ತನಾಲ್ಕು ಮಂತ್ರಗಳನ್ನು
ಋಷಿ-ದೇವತೆ-ಛಂದಸ್ಸು ಸಹಿತವಾಗಿ ತಂತ್ರಸಾರದಲ್ಲಿ ನಿರೂಪಿಸಲಾಗಿದೆ. ತಂತ್ರಸಾರಸಂಗ್ರಹಕ್ಕೆ
ಇಪ್ಪತ್ತಕ್ಕೂ ಹೆಚ್ಚು ವ್ಯಾಖ್ಯಾನಗಳಿವೆ. ಅವುಗಳಲ್ಲಿ ಶ್ರೀರಾಘವೇಂದ್ರಮಠದ ಪರಂಪರೆಯಲ್ಲಿ ಬಂದ ಶ್ರೀ
ವಸುಧೇಂದ್ರ- ತೀರ್ಥರ ವ್ಯಾಖ್ಯಾನವು ಸಂಕ್ಷೇಪವಾದರೂ ಗಾಂಭೀರ್ಯಶೈಲಿಯಲ್ಲಿ ರಚಿತವಾಗಿದೆ.
ವಿದ್ವಾಂಸರಾದ ಶ್ರೀವೇದವ್ಯಾಸಾಚಾರ್ಯರು ವಸುಧೇಂದ್ರತೀರ್ಥರ ಟೀಕಾಸಹಿತ
ತಂತ್ರಸಾರಸಂಗ್ರಹವನ್ನು ಕನ್ನಡದಲ್ಲಿ ಅನುವಾದ ಮಾಡಿದ್ದಾರೆ. ಈ ಕಾರ್ಯಕ್ಕಾಗಿ ಅವರು
ಅಭಿನಂದಾರ್ಹರು. ಇವರಿಗೆ ಮೂಲರಾಮಚಂದ್ರದೇವರು ವಿಶೇಷವಾಗಿ
ಅನುಗ್ರಹಿಸಲಿ ಎಂದು ನಮ್ಮ ಉಪಾಸ್ಯಮೂರ್ತಿ ಮೂಲರಾಮಚಂದ್ರದೇವರನ್ನು
ಇತಿ
ಇತೋಪ್ಯಧಿಕವಾಗಿ
ಪ್ರಾರ್ಥಿಸುವೆವು.
ನಾರಾಯಣಸ್ಮರಣೆಗಳು
ಶ್ರೀಶ್ರೀಸುಶಮೀಂದ್ರತೀರ್ಥ ಶ್ರೀಪಾದಂಗಳವರು