This page has been fully proofread once and needs a second look.

ಗಾಯತ್ರಿಯಲ್ಲಿ ವಿಶ್ವಾಮಿತ್ರನೇ ಋಷಿಯು. ವ್ಯಾಹೃತಿ ಇಲ್ಲದ ಗಾಯತ್ರಿಯು ಬ್ರಹ್ಮಗಾಯತ್ರಿಯಾಗಿದ್ದು ಇದರ ಜಪದಲ್ಲಿ ಪ್ರಜಾಪತಿಯು ಋಷಿಯಾಗಿರುವನು. ಈ ಜಗತ್ತನ್ನು ಸೃಷ್ಟಿ ಮಾಡುವುದರಿಂದ ಸವಿತೃ ಎನಿಸಿದ ಶ್ರೀಹರಿಯೇ ದೇವತೆಯು.
ಪ್ರಸಿದ್ಧಸೂರ್ಯನು ದೇವತೆಯೆಂದು ಭ್ರಮಿಸಬಾರದು.
 
ವ.ಟೀ. - ಗಾಯತ್ರ್ಯಾ ಋಷ್ಯಾದಿಕಮಾಹ - ವಿಶ್ವಾಮಿತ್ರ ಇತಿ ॥
ಟೀಕಾರ್ಥ - ಉಭಯವಿಧಗಾಯತ್ರಿ ಮಂತ್ರದ ಋಷ್ಯಾದಿಗಳನ್ನು 'ವಿಶ್ವಾಮಿತ್ರಸ್ತು' ಎಂಬುದರಿಂದ ಹೇಳುವರು.
 
ಗಾಯತ್ರೀಧ್ಯೇಯಮೂರ್ತಿ
 
ಪ್ರೋದ್ಯದಾದಿತ್ಯವರ್ಣಶ್ಚ ಸೂರ್ಯಮಂಡಲಮಧ್ಯಗಃ ।
ಚಕ್ರಶಂಖಧರೋऽ೦ಕಸ್ಥದೋರ್ದ್ವಯೋಧ್ಯೇಯ ಏವ ಚ ॥ ೪೧ ॥
 
ಅರ್ಥ - ಉದಯವಾಗುತ್ತಿರುವ ಸೂರ್ಯನಂತೆ ಪ್ರಕಾಶಮಾನ- ನಾದ, ಸೂರ್ಯಮಂಡಲದ ಮಧ್ಯೆ ಕುಳಿತಿರುವ, ಮೇಲಿನ ಎರಡು ಕೈಗಳಲ್ಲಿ ಚಕ್ರಶಂಖಗಳನ್ನು ಧರಿಸಿ ಉಳಿದೆರಡು ಕೈಗಳನ್ನು ತನ್ನ ತೊಡೆಯ ಮೇಲಿರಿಸಿಕೊಂಡಿರುವ ಭಗವಂತನನ್ನು ಧ್ಯಾನ ಮಾಡಬೇಕು.
 
ವ.ಟೀ.-ಅಂಕಸ್ಥದೋರ್ದ್ವಯಃ-ಊರೂಸ್ಥಉತ್ತಾನಪಾಣಿದ್ವಯಃ।
ಟೀಕಾರ್ಥ - ತೊಡೆಯ ಮೇಲೆ ಮೇಲ್ಮುಖವಾಗಿ ಇಟ್ಟಿರುವ ಎರಡು ಕೈಗಳನ್ನುಳ್ಳವನೆಂದರ್ಥ.
 
ಬ್ರಹ್ಮಗಾಯತ್ರೀ ನ್ಯಾಸಾದಿಗಳು
 
ಸತಾರಾಶ್ಚ ವ್ಯಾಹೃತಯೋ ಗಾಯತ್ರ್ಯಂಗಾನಿ ಪಂಚ ಚ ।
ದೋಃಪತ್ಸಂಧಿಷು ಸಾಗ್ರೇಷು ನಾಭಿಹೃನ್ಮುಖಕೇಷು ಚ ॥ ೪೨ ॥
 
ವರ್ಣನ್ಯಾಸಶ್ಚ ಕರ್ತವ್ಯಃ ....
ಅರ್ಥ-ಓಂಕಾರದಿಂದ ಸಹಿತವಾದ ನಾಲ್ಕು ವ್ಯಾಹೃತಿಗಳೇ ಹಿಂದೆ
ವ್ಯಾಹೃತಿಯಲ್ಲಿ ಹೇಳಿದಂತೆ ಗಾಯತ್ರೀಮಂತ್ರದಲ್ಲೂ ಅಂಗ- ನ್ಯಾಸಮಂತ್ರಗಳಾಗುತ್ತವೆ. ಕೈಬೆರಳುಗಳ ನಾಲ್ಕು ಸಂಧಿಗಳು ಮತ್ತು ಅವುಗಳ ಅಗ್ರಭಾಗವು; ಕಾಲಿನ ಬೆರಳುಗಳ