This page has been fully proofread once and needs a second look.

ಪ್ರಥಮೋಧ್ಯಾಯಃ
 
ಗಾಯತ್ರಿಯಲ್ಲಿ ವಿಶ್ವಾಮಿತ್ರನೇ ಋಷಿಯು. ವ್ಯಾಹೃತಿ ಇಲ್ಲದ ಗಾಯತ್ರಿಯು
ಬ್ರಹ್ಮಗಾಯತ್ರಿಯಾಗಿದ್ದು ಇದರ ಜಪದಲ್ಲಿ ಪ್ರಜಾಪತಿಯು ಋಷಿಯಾಗಿರುವನು.
ಈ ಜಗತ್ತನ್ನು ಸೃಷ್ಟಿ ಮಾಡುವುದರಿಂದ ಸವಿತೃ ಎನಿಸಿದ ಶ್ರೀಹರಿಯೇ ದೇವತೆಯು.

ಪ್ರಸಿದ್ಧಸೂರ್ಯನು ದೇವತೆಯೆಂದು ಭ್ರಮಿಸಬಾರದು.
 
-
 

 
ವ.ಟೀ. - ಗಾಯತ್ರ್ಯಾ ಋಷ್ಯಾದಿಕವಾಮಾಹ - ವಿಶ್ವಾಮಿತ್ರ ಇತಿ ॥

ಟೀಕಾರ್ಥ - ಉಭಯವಿಧಗಾಯತ್ರಿ ಮಂತ್ರದ ಋಷ್ಯಾದಿಗಳನ್ನು 'ವಿಶ್ವಾಮಿತ್ರಸ್ತು
 
' ಎಂಬುದರಿಂದ ಹೇಳುವರು.
 

 
ಗಾಯತ್ರೀಧೈಧ್ಯೇಯಮೂರ್ತಿ
 
27
 

 
ಪ್ರೋದ್ಯದಾದಿತ್ಯವರ್ಣಶ್ಚ ಸೂರ್ಯಮಂಡಲಮಧ್ಯಗಃ ।

ಚಕ್ರಶಂಖಧರೋ5೦ಕಸ್ಥದೋರ್ದ್ವಯೋ ಧೈಧ್ಯೇಯ ಏವ ಚ ॥41 ೪೧
 
M
 

 
ಅರ್ಥ - ಉದಯವಾಗುತ್ತಿರುವ ಸೂರ್ಯನಂತೆ ಪ್ರಕಾಶಮಾನ- ನಾದ, ಸೂರ್ಯ
ಮಂಡಲದ ಮಧ್ಯೆ ಕುಳಿತಿರುವ, ಮೇಲಿನ ಎರಡು ಕೈಗಳಲ್ಲಿ ಚಕ್ರಶಂಖಗಳನ್ನು
ಧರಿಸಿ ಉಳಿದೆರಡು ಕೈಗಳನ್ನು ತನ್ನ ತೊಡೆಯ ಮೇಲಿರಿಸಿಕೊಂಡಿರುವ
ಭಗವಂತನನ್ನು ಧ್ಯಾನ ಮಾಡಬೇಕು.
 

 
ವ.ಟೀ. - -ಅಂಕಸ್ಥದೋರ್ದ್ವಯಃ - -ಊರೂಸ್ಥಉತ್ತಾನಪಾಣಿದ್ವಯಃ
 

ಟೀಕಾರ್ಥ - ತೊಡೆಯ ಮೇಲೆ ಮೇಲ್ಮುಖವಾಗಿ ಇಟ್ಟಿರುವ ಎರಡು ಕೈಗಳನ್ನುಳ್ಳವ
ನೆಂದರ್ಥ.
 

 
ಬ್ರಹ್ಮಗಾಯತ್ರೀ ವ್ನ್ಯಾಸಾದಿಗಳು
 

 
ಸತಾರಾಷ್ಟ್ರಶ್ಚ ವ್ಯಾಹೃತಯೋ ಗಾಯತ್ರಂರ್ಯಂಗಾನಿ ಪಂಚ ಚ ।

ದೋಃಪತ್ಸಂಧಿಷು ಸಾಗ್ರೇಷು ನಾಭಿಹೃನ್ಮುಖಕೇಷು ಚ ॥42 ೪೨

 
ವರ್ಣನ್ಯಾಸಶ್ಚ ಕರ್ತವ್ಯಃ ....
 

ಅರ್ಥ
 
-ಓಂಕಾರದಿಂದ ಸಹಿತವಾದ ನಾಲ್ಕು ವ್ಯಾಹೃತಿಗಳೇ ಹಿಂದೆ

ವ್ಯಾಹೃತಿಯಲ್ಲಿ ಹೇಳಿದಂತೆ ಗಾಯತ್ರೀಮಂತ್ರದಲ್ಲೂ ಅಂಗ- ನ್ಯಾಸಮಂತ್ರಗಳಾಗುತ್ತವೆ.
ಕೈಬೆರಳುಗಳ ನಾಲ್ಕು ಸಂಧಿಗಳು ಮತ್ತು ಅವುಗಳ ಅಗ್ರಭಾಗವು; ಕಾಲಿನ ಬೆರಳುಗಳ