This page has been fully proofread once and needs a second look.

ವ್ಯಾಹೃತಿಗಳ ಜಪದಲ್ಲಿ ಬ್ರಹ್ಮನೇ ಋಷಿಯೆಂದೂ, ಗಾಯತ್ರಿಯೇ ಛಂದಸ್ಸೆಂದೂ, ಉದಯಿಸುತ್ತಿರುವ ಸೂರ್ಯನಂತೆ ಅರುಣ ವರ್ಣಪ್ರಕಾಶವುಳ್ಳ(?) ಜ್ಞಾನ, ಅಭಯಮುದ್ರೆಗಳನ್ನು ಧರಿಸಿರುವ ಭಗವಂತನಾದ ಶ್ರೀಹರಿಯೇ ದೇವತೆಯೆಂದೂ ತಿಳಿಯಬೇಕು.
 
ವ.ಟೀ. - ಭೂರಾದಿವ್ಯಾಹೃತೀನಾಂ ಋಷಿರ್ಬ್ರಹ್ಮಾ। ಪರಮಾತ್ಮಾ ಹರಿರ್ದೇವತಾ । ಗದಾಪದ್ಮಸ್ಥಾನೇ ಜ್ಞಾನಮುದ್ರಾಭಯಾಭ್ಯಾಂ ಯುಕ್ತಾಃ(ಕ್ತಃ) । ಪಂಚಾಂಗಾನಿ ।
 
ಟೀಕಾರ್ಥ – 'ಭೂಃ ಭುವಃ ಸ್ವಃ' ಎಂಬ ವ್ಯಾಹೃತಿಮಂತ್ರವನ್ನು ಜಪಮಾಡುವಾಗ ಚತುರ್ಮುಖನೇ ಋಷಿಯೆಂದೂ, ಪರಮಾತ್ಮ ನಾದ ಶ್ರೀಹರಿಯೇ ದೇವತೆಯೆಂದೂ ತಿಳಿಯಬೇಕು. ದೇವತಾ- ಧ್ಯಾನದಲ್ಲಿ ಚಕ್ರಶಂಖ ಹಾಗು ಗದಾಪದ್ಮಗಳ ಬದಲಾಗಿ ಜ್ಞಾನ- ಮುದ್ರೆ ಅಭಯಮುದ್ರೆಯನ್ನು ಧರಿಸಿರುವನೆಂದು ತಿಳಿಯಬೇಕು.
 
ತಾರೇಣ ವ್ಯಾಹೃತೀಭಿಶ್ಚ ಜ್ಞೇಯಾನ್ಯಂಗಾನಿ ಪಂಚ ಚ ।
ನಾಭಿಹೃತ್ಕೇಷು ಸರ್ವೆಷು ಚತಸ್ರೋ ವ್ಯಾಹೃತೀರ್ನ್ಯಸೇತ್ ॥ ೩೭ ॥
 
ಅರ್ಥ - ಓಂಕಾರ, ನಾಲ್ಕು(ಭೂಃ, ಭುವಃ, ಸ್ವಃ, ಭೂರ್ಭುವಸ್ವಃ ಎಂಬ) ವ್ಯಾಹೃತಿಮಂತ್ರಗಳಿಂದ ವ್ಯಾಹೃತಿಮಂತ್ರಜಪದಲ್ಲಿ ಪಂಚಾಂಗನ್ಯಾಸ ಮಾಡಬೇಕು. ನಾಭಿ, ಹೃದಯ, ತಲೆ, ಸರ್ವಾ- ವಯವಗಳಲ್ಲಿ ನಾಲ್ಕು ವ್ಯಾಹೃತಿಗಳಿಂದ ನ್ಯಾಸಮಾಡಬೇಕು.
 
ವ.ಟೀ. - ಪ್ರಣವೇನ ವ್ಯಾಹೃತಿಚತುಷ್ಟಯೇನ ಚ ಪಂಚಾಂಗಾನಿ । ನ್ಯಾಸಾಂತರಮಾಹನಾಭೀತಿ ॥
 
ಟೀಕಾರ್ಥ- ಓಂಕಾರದಿಂದ ಹಾಗೂ ವ್ಯಸ್ತ-ಸಮಸ್ತಗಳಾದ ನಾಲ್ಕು ವ್ಯಾಹೃತಿಗಳಿಂದಲೂ ಪಂಚಾಂಗನ್ಯಾಸ ಮಾಡಿಕೊಳ್ಳಬೇಕು. 'ನಾಭಿ' ಎಂಬುದರಿಂದ ಮತ್ತೊಂದು ವ್ಯಾಹೃತಿ ನ್ಯಾಸಕ್ರಮವನ್ನು ಹೇಳುತ್ತಾರೆ.[^1]
 
 
 
 
ಓಂ ಣಾಂ ಪರಮಾತ್ಮನೇ ನಮಃ (ನೇತ್ರಯೋ);
ಓಂ ಯಂ(?) ಜ್ಞಾನಾತ್ಮನೇ ನಮಃ (ಶಿರಸಿ)
[^1]. ವಿಶೇಷಾಂಶ - ಪ್ರಣವ,ವ್ಯಾಹೃತಿಗಳ ನ್ಯಾಸಕ್ರಮವು ಕೆಳ- ಕಂಡಪ್ರಕಾರಗಳಲ್ಲಿ ಇದೆ.
ವ್ಯಾಹೃತಿನ್ಯಾಸಕ್ರಮಃ (ಸೃಷ್ಟಿಕ್ರಮಃ)
ಅಸ್ಯ ಶ್ರೀ ವ್ಯಾಹೃತಿಮಂತ್ರಸ್ಯ ಬ್ರಹ್ಮಾಋಷಿಃ । ಗಾಯತ್ರೀ ಛಂದಃ । ಶ್ರೀಹರಿರ್ದೇವತಾ । ನ್ಯಾಸೇ ವಿನಿಯೋಗಃ ॥