This page has been fully proofread once and needs a second look.

ಆದಿವರ್ಣತ್ರಯಂ ನಾಭಿಹೃಚ್ಛಿರಸ್ಸು ಯಥಾಕ್ರಮಮ್ ।
ವ್ಯಸನೀಯಂ ಚ ತದ್ವರ್ಣದೇವತಾಧ್ಯಾನಪೂರ್ವಕಮ್ ॥ ೩೪ ॥
 
ಅರ್ಥ - ಓಂಕಾರಮಂತ್ರಜಪದಲ್ಲಿ ಅಕ್ಷರನ್ಯಾಸಸ್ಥಾನಗಳು ಹೀಗಿವೆ
ಪ್ರಣವದಲ್ಲಿರುವ ಎಂಟು ಅಕ್ಷರಗಳಲ್ಲಿ ಮೊದಲ ಮೂರು ಅಕ್ಷರ ಗಳಾದ ಅಕಾರ ಉಕಾರ ಮಕಾರಗಳನ್ನು ಅವುಗಳ ದೇವತೆಗಳಾದ ವಿಶ್ವ-ತೈಜಸ-ಪ್ರಾಜ್ಞರೂಪಗಳ ಧ್ಯಾನಪೂರ್ವಕವಾಗಿ ನಾಭಿ, ಹೃದಯ, ಶಿರಸ್ಸುಗಳಲ್ಲಿ ನ್ಯಾಸಮಾಡಿಕೊಳ್ಳಬೇಕು.[^1]
 
ವ.ಟೀ. - ಪ್ರಣವವರ್ಣನ್ಯಾಸಪ್ರಕಾರಮಾಹ - ಆದೀತಿ ॥ಅಕಾರೋಕಾರಮಕಾರಾದಿವರ್ಣಾಃ ॥
 
ಟೀಕಾರ್ಥ - ಓಂಕಾರದ ವರ್ಣನ್ಯಾಸ ಮಾಡುವ ರೀತಿಯನ್ನು 'ಆದಿವರ್ಣತ್ರಯಂ' ಇತ್ಯಾದಿ ಶ್ಲೋಕದಲ್ಲಿ ಹೇಳುತ್ತಾರೆ. ಆದಿ- ವರ್ಣತ್ರಯವೆಂದರೆ ಪ್ರಣವದ ಎಂಟು ಅಕ್ಷರಗಳಲ್ಲಿ ಮೊದಲ ಅಕಾರೋಕಾರಮಕಾರಗಳು ಎಂದರ್ಥ.
 
ಅಷ್ಟಾಕ್ಷರ-ವ್ಯಾಹೃತಿಗಳ ನ್ಯಾಸಸ್ಥಾನಗಳು
 
ಪಜ್ಜಾನುನಾಭಿಹೃದಯವಾಙ್ ನಾಸಾನೇತ್ರಕೇಷು ಚ ।
ಅಷ್ಟಾಕ್ಷರಾಣಾಂ ನ್ಯಾಸಃ ಸ್ಯಾತ್ ವ್ಯಾಹೃತೀನಾಂ ಪ್ರಜಾಪತಿಃ ॥ ೩೫ ॥
 
ಮುನಿಶ್ಛಂದಸ್ತು ಗಾಯತ್ರೀ ದೇವತಾ ಭಗವಾನ್ ಹರಿಃ ।
ಉದ್ಯದಾದಿತ್ಯವರ್ಣಶ್ಚ ಜ್ಞಾನಮುದ್ರಾಭಯೋದ್ಯತಃ ॥ ೩೬ ॥
 
ಅರ್ಥ- ಅಷ್ಟಾಕ್ಷರಮಂತ್ರದ ಎಂಟು ಅಕ್ಷರಗಳ ನ್ಯಾಸವನ್ನು ಕ್ರಮವಾಗಿ ಪಾದಗಳಲ್ಲಿ, ಮೊಣಗಂಟು, ನಾಭಿ, ಹೃದಯ, ಬಾಯಿ, ಮೂಗು, ನೇತ್ರ, ತಲೆಗಳಲ್ಲಿ ಮಾಡಿಕೊಳ್ಳಬೇಕು. ಈ ಎಂಟು ಅಕ್ಷರಗಳಿಗೆ ಎಂಟು ನ್ಯಾಸ ಸ್ಥಾನಗಳಾಗಿವೆ.[^2].
 

 
 
[^1]. ವಿಶೇಷಾಂಶ - ಪ್ರಣವಮಂತ್ರದ ನ್ಯಾಸಕ್ರಮವು ಹೀಗಿದೆ - ಅಂ ವಿಶ್ವಾಯ ನಮಃ (ನಾಭೌ); ಉಂ ತೈಜಸಾಯ ನಮಃ (ಹೃದಯೇ); ಮಂ ಪ್ರಾಜ್ಞಾಯ ನಮಃ (ಶಿರಸಿ).
[^2]. ಅಷ್ಟಾಕ್ಷರಗಳ ನ್ಯಾಸಕ್ರಮವು ಹೀಗಿದೆ –
ಓಂ ವಿಶ್ವಾಯ ನಮಃ (ಪಾದಯೋಃ); ಓಂ ನಂ ತೈಜಸಾಯ ನಮಃ (ಜಾನ್ವೋಃ); ಓಂ ಮೋಂ ಪ್ರಾಜ್ಞಾಯ ನಮಃ (ನಾಭೌ); ಓಂ ನಾಂ ತುರ್ಯಾಯ ನಮಃ (ಹೃದಯೇ); ಓಂ ರಾಂ ಆತ್ಮನೇ ನಮಃ (ವಾಗಿಂದ್ರಿಯೇ); ಓಂ ಯಂ ಅಂತರಾತ್ಮನೇ ನಮಃ (ನಾಸಾಯಾಂ);