2023-05-05 05:41:55 by jayusudindra
This page has been fully proofread once and needs a second look.
ಭಿನ್ನ ಭಿನ್ನರೂಪಗಳಾಗುವುದು ಹೇಗೆ? ಎಂಬ ಪ್ರಶ್ನೆಗೆ ಉತ್ತರಿಸುವರು.
ವಿಷ್ಣೋರೇವಾತ್ಯಭೇದೇಽಪಿ ತದೈಶ್ವರ್ಯಾತ್ ತದನ್ಯವತ್ ।
ಚಕ್ರಶಂಖವರಾಭೀತಿಹಸ್ತಾನ್ಯೇತಾನಿ ಸರ್ವಶಃ ॥ ೩೨ ॥
ಮೂಲರೂಪಸವರ್ಣಾನಿ ಕೃಷ್ಣವರ್ಣಾ ಶಿಖೋಚ್ಯತೇ ।
ಚತುರ್ವಿಂಶನ್ಮೂರ್ತಯಶ್ಚ ಮೂಲರೂಪಸವರ್ಣಕಾಃ ॥ ೩೩ ॥
ಅರ್ಥ - ಈ ರೂಪಗಳೆಲ್ಲಾ ಭಗವಂತನಿಂದ ಭಿನ್ನವಲ್ಲದೆ ಒಂದೇ ಆಗಿದ್ದರೂ ಅಚಿಂತ್ಯಾದ್ಭುತಶಕ್ತಿಯಿಂದಲೇ ಅವು ಬೇರೆ ಬೇರೆ- ಯೆನಿಸುವವು. ಬೇರೆ ಬೇರೆ ರೀತಿಯಲ್ಲಿ ರಕ್ಷಿಸುವ ಅಚಿಂತ್ಯಶಕ್ತಿ- ಯನ್ನು ತೋರಿಸಲೆಂದೇ ಈ ರೂಪಭೇದಗಳು ಎಂದು ಭಾವ.
(ಇನ್ನು ಕೃದ್ಧೋಲ್ಕಾದಿರೂಪಗಳ ಧ್ಯಾನ ತಿಳಿಸಲಾಗುತ್ತದೆ.) ಕೃದ್ಧೋಲ್ಕ ಮೊದಲಾದ ಪಂಚರೂಪಗಳೂ ಚಕ್ರ-ಶಂಖ-ವರ- ಅಭಯಮುದ್ರೆಗಳನ್ನು ಧರಿಸಿವೆ. ಇವುಗಳಲ್ಲಿ ಕೃದ್ಧೋಲ್ಕಾದಿ ನಾಲ್ಕು ರೂಪಗಳು ಮೂಲರೂಪದಂತೆ ಉದ್ಯದಾದಿತ್ಯಪ್ರಕಾಶ- ವೆನಿಸಿದರೆ ಶಿಖಾದಲ್ಲಿ ಸನ್ನಿಹಿತನಾದ ವೀರೋಲ್ಕಮೂರ್ತಿಯು ಮಾತ್ರ ನೀಲವರ್ಣನು, ಗಾಯತ್ರಿಯ ಇಪ್ಪತ್ತನಾಲ್ಕು ಅಕ್ಷರ ಪ್ರತಿಪಾದ್ಯಗಳಾದ ಕೇಶವಾದಿ ರೂಪಗಳಾದರೋ ಮೂಲರೂಪ ದಂತೆ ಸೂರ್ಯಸದೃಶಪ್ರಕಾಶವುಳ್ಳವುಗಳಾಗಿವೆ.
ವ.ಟೀ. - ಕೃದ್ಧೋಲ್ಕಮಹೋಲ್ಕವೀರೋಲ್ಕದ್ಯುಲ್ಕಸಹಸ್ರೋಲ್ಕಾಃ
ಚತುರ್ಥ್ಯಂತಾಃ ಅಷ್ಟಾಕ್ಷರಸ್ಯ ಪಂಚಾಂಗಮ್ । ಏತಾನಿ ರೂಪಾಣಿ ಮೂಲರೂಪಸವರ್ಣಾನಿ । ಉದ್ಯದ್ಭಾಸ್ವತ್ಸಮಾಭಾ- ಸಾನಿ । ಶಿಖಾ ಕೃಷ್ಣವರ್ಣಾ - ವೀರೋಲ್ಕಾಖ್ಯರೂಪಂ ನೀಲವರ್ಣಮ್ ।
ಟೀಕಾರ್ಥ - ಚತುರ್ಥ್ಯಂತಗಳಾದ ಕೃದ್ಧೋಲ್ಕಾದಿ ಐದುಪದಗಳು [^1]ಅಷ್ಟಾಕ್ಷರಮಂತ್ರ ಜಪಿಸುವಾಗ ಪಂಚಾಂಗಗಳು, ಈ ಐದು ರೂಪಗಳೂ ಮೂಲರೂಪದಂತೆ ಉದಯಿಸಿದ ಸೂರ್ಯನಂತೆ ಪ್ರಕಾಶಮಾನವಾದವುಗಳು. ಕೃದ್ಧೋಲ್ಕಾದಿಗಳು ಮೂಲರೂಪ ದಂತೆ ಪ್ರಕಾಶಮಾನಗಳಾದರೆ ಶಿಖಾವಾಚ್ಯನಾದ ವೀರೋಲ್ಕ- ರೂಪಮಾತ್ರ ನೀಲವರ್ಣದ್ದು.
ನ್ಯಾಸದ ಸ್ಥಳಗಳು
[^1]. ಕೃದ್ಧೋಲ್ಕಾಯ, ಮಹೋಲ್ಕಾಯ, ವೀರೋಲ್ಕಾಯ, ದ್ಯುಲ್ಕಾಯ, ಸಹಸ್ರೋಲ್ಕಾಯ ಇತ್ಯಾದಿ ?