This page has been fully proofread once and needs a second look.

ಶಂಖವು, ಎಡಭಾಗದ ಮೇಲಿನ ಕೈಯ್ಯಲ್ಲಿ ಪದ್ಮವು, ಎಡಭಾಗದ ಕೆಳಕೈಯ್ಯಲ್ಲಿ ಗದೆಯು, ಬಲಭಾಗದ ಕೆಳ ಕೈಯ್ಯಲ್ಲಿ ಚಕ್ರವು ಹೀಗೆ ವ್ಯುತ್ಕ್ರಮವು.
ಪದ್ಮಾದಿ ವ್ಯುತ್ಕ್ರಮವೆಂದರೆ ಶಂಖ, ಪದ್ಮ,ಚಕ್ರ, ಗದಾ ಹೀಗೆ, ಉದಾ-ಸಂಕರ್ಷಣನ ಬಲಭಾಗದ ಮೇಲಿನ ಕೈಯ್ಯಲ್ಲಿ ಶಂಖ, ಎಡಭಾಗದ ಮೇಲಿನ ಕೈಯ್ಯಲ್ಲಿ ಪದ್ಮ, ಎಡಭಾಗದ ಕೆಳಗಿನ ಕೈಯ್ಯಲ್ಲಿ ಚಕ್ರ, ಬಲಭಾಗದ ಕೆಳಗಿನ ಕೈಯ್ಯಲ್ಲಿ ಗದೆ.
ಗದಾದಿ ವ್ಯುತ್ಕ್ರಮ - ಶಂಖ, ಗದಾ, ಚಕ್ರ, ಪದ್ಮ ಹೀಗೆ ಗದಾದಿ ವ್ಯುತ್ಕ್ರಮ. ಉದಾ-ದಾಮೋದರನ ಬಲಭಾಗದ ಮೇಲಿನ ಕೈಯಲ್ಲಿ ಶಂಖವು, ಎಡಭಾಗದ ಮೇಲಿನ ಕೈಯ್ಯಲ್ಲಿ ಗದೆಯು, ಎಡಭಾಗದ ಕೆಳಗಿನ ಕೈಯ್ಯಲ್ಲಿ ಚಕ್ರವು, ಬಲಭಾಗದ ಕೆಳಗಿನ ಕೈಯ್ಯಲ್ಲಿ ಪದ್ಮವು.
ಅರ್ಧಕ್ರಮ-ಶಂಖಚಕ್ರಪದ್ಮಗದೆಯು ಅರ್ಧಕ್ರಮವು. ಉದಾ- ವಾಸುದೇವಮೂರ್ತಿಯ ಬಲಭಾಗದ ಮೇಲಿನ ಕೈಯ್ಯಲ್ಲಿ ಶಂಖವು , ಎಡಭಾಗದ ಮೇಲಿನ ಕೈಯ್ಯಲ್ಲಿ ಚಕ್ರವು, ಎಡಭಾಗದ ಕೆಳಗಿನ ಕೈಯ್ಯಲ್ಲಿ ಪದ್ಮವು, ಬಲಭಾಗದ ಕೆಳಗಿನ ಕೈಯ್ಯಲ್ಲಿ ಗದೆಯು ಹೀಗೆ ಅರ್ಧಕ್ರಮವು.
ಸಾಂತರಕ್ರಮ - ಶಂಖ, ಗದಾ,ಪದ್ಮ,ಚಕ್ರವೆಂಬುದೇ ಸಾಂತರ- ಕ್ರಮವು, ಉದಾ-ಪ್ರದ್ಯುಮ್ನ, ಪ್ರದ್ಯುಮ್ನನ ಬಲಭಾಗದ ಮೇಲಿನ ಕೈಯಲ್ಲಿ ಶಂಖ, ಎಡಭಾಗದ ಮೇಲಿನ ಕೈಯ್ಯಲ್ಲಿ ಗದೆಯು, ಎಡಭಾಗದ ಕೆಳಗಿನ ಕೈಯ್ಯಲ್ಲಿ ಪದ್ಮವು, ಬಲಭಾಗದ ಕೆಳಗಿನ
ಕೈಯ್ಯಲ್ಲಿ ಚಕ್ರವು.
 
ವರ್ಣಗಳ ಪೂರ್ವಾಪರಭಾವ(?) ಕ್ರಮ
 
ವರ್ಣಾನಾಂ ದೇವತಾನಾಂ ಚ ನಿತ್ಯತ್ವಾತ್ ನ ಕ್ರಮಃ ಸ್ವತಃ ।
ವ್ಯಕ್ತಿಕ್ರಮಂ ಬ್ರಹ್ಮಬುದ್ಧಾವಪೇಕ್ಷ್ಯ ಕ್ರಮ ಉಚ್ಯತೇ ॥ ೨೯ ॥
 
ಅರ್ಥ- ತಾರಾರ್ಣಭೇದಿತಾಃ ಎಂಬಲ್ಲಿ ಹೇಳಿದ ಐವತ್ತು ವರ್ಣ- ಗಳಾಗಲೀ, ಅವುಗಳ ಅಜಾದಿ ಐವತ್ತು ರೂಪಗಳಾಗಲೀ ಸರ್ವತ್ರ ನಿತ್ಯವೂ ವ್ಯಾಪ್ತವೂ ಆಗಿರುವುದರಿಂದ ದೈಶಿಕ-ಕಾಲಿಕ ಕ್ರಮ ಹೇಳಲು ಬರುವುದಿಲ್ಲ. ಆದ್ದರಿಂದ ಅಕಾರವಾದ ಮೇಲೆ ಆಕಾರ ಹುಟ್ಟಿತು ಎಂಬ ಕ್ರಮವನ್ನು ಹೇಳಲು ಬಾರದು. ಆದರೂ ಯಾವ ವರ್ಣವು ಬ್ರಹ್ಮದೇವರ ಬುದ್ಧಿಯಲ್ಲಿ ಮೊದಲು ಅಭಿವ್ಯಕ್ತ-
ವಾಯಿತೋ ಆ ಕ್ರಮವನ್ನು ಇಟ್ಟುಕೊಂಡು ವರ್ಣ ಹಾಗೂ ವರ್ಣದೇವತೆಗಳಲ್ಲಿ ಮೊದಲು ಹುಟ್ಟಿದ್ದು ಅನಂತರ ಹುಟ್ಟಿದ್ದು ಎನ್ನಲಾಗಿದೆ.