This page has been fully proofread once and needs a second look.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ
 
ಶಂಖವು, ಎಡಭಾಗದ ಮೇಲಿನ ಕೈಯ್ಯಲ್ಲಿ ಪದ್ಮವು, ಎಡಭಾಗದ ಕೆಳಕೈಯ್ಯಲ್ಲಿ ಗದೆಯು,
ಬಲಭಾಗದ ಕೆಳ ಕೈಯ್ಯಲ್ಲಿ ಚಕ್ರವು ಹೀಗೆ ವ್ಯುತ್ಕ್ರಮವು.
 
18
 

ಪದ್ಮಾದಿ ವ್ಯುತ್ಕ್ರಮವೆಂದರೆ ಶಂಖ, ಪದ್ಮ,ಚಕ್ರ, ಗದಾ ಹೀಗೆ, ಉದಾ-
ಸಂಕರ್ಷಣನ
 
ಪದ್ಮಾದಿ ವ್ಯತ್ಯಮವೆಂದರೆ
ಬಲಭಾಗದ ಮೇಲಿನ ಕೈಯ್ಯಲ್ಲಿ ಶಂಖ, ಪದ್ಮ,ಎಡಭಾಗದ ಮೇಲಿನ ಕೈಯ್ಯಲ್ಲಿ ಪದ್ಮ, ಎಡಭಾಗದ ಕೆಳಗಿನ ಕೈಯ್ಯಲ್ಲಿ ಚಕ್ರ, ಬಲಭಾಗದ ಕೆಳಗಿನ ಕೈಯ್ಯಲ್ಲಿ ಗದೆ.
ಗದಾದಿ ವ್ಯುತ್ಕ್ರಮ - ಶಂಖ, ಗದಾ, ಚಕ್ರ, ಪದ್ಮ ಹೀಗೆ, ಗದಾದಿ ವ್ಯುತ್ಕ್ರಮ. ಉದಾ
-ದಾಮೋದರನ ಬಲಭಾಗದ ಮೇಲಿನ ಕೈಯ್ಯಲ್ಲಿಯಲ್ಲಿ ಶಂಖವು, ಎಡಭಾಗದ ಮೇಲಿನ ಕೈಯ್ಯಲ್ಲಿ ಪದ್ಮ,
ಗದೆಯು, ಎಡಭಾಗದ ಕೆಳಗಿನ ಕೈಯ್ಯಲ್ಲಿ ಚಕ್ರವು, ಬಲಭಾಗದ ಕೆಳಗಿನ ಕೈಯ್ಯಲ್ಲಿ ಗದೆಪದ್ಮವು.
 
ಗದಾದಿ ವ್ಯತಮ - ಶಂಖ, ಗದಾ, ಚಕ್ರ, ಪದ್ಮಹೀಗೆ ಗದಾದಿವ್ಯತಮ. ಉದಾ
ದಾಮೋದರನ ಬಲಭಾಗದ ಮೇಲಿನ ಕೈಯ್ಯಲ್ಲಿ ಶಂಖವು, ಎಡಭಾಗದ ಮೇಲಿನ
ಕೈಯ್ಯಲ್ಲಿ ಗದೆಯು, ಎಡಭಾಗದ ಕೆಳಗಿನ ಕೈಯ್ಯಲ್ಲಿ ಚಕ್ರವು, ಬಲಭಾಗದ ಕೆಳಗಿನ
ಕೈಯ್ಯಲ್ಲಿ ಪದ್ಮವು.
 

ಅರ್ಧಕ್ರಮ
 
-ಶಂಖಚಕ್ರಪದ್ಮಗದೆಯು ಅರ್ಧಕ್ರಮವು. ಉದಾ- ವಾಸುದೇವ-
ಮೂರ್ತಿಯ ಬಲಭಾಗದ ಮೇಲಿನ ಕೈಯ್ಯಲ್ಲಿ ಶಂಖವು , ಎಡಭಾಗದ ಮೇಲಿನ ಕೈಯ್ಯಲ್ಲಿ
ಚಕ್ರವು, ಎಡಭಾಗದ ಕೆಳಗಿನ ಕೈಯ್ಯಲ್ಲಿ ಪದ್ಮವು, ಬಲಭಾಗದ ಕೆಳಗಿನ ಕೈಯ್ಯಲ್ಲಿ ಗದೆಯು
ಹೀಗೆ ಅರ್ಧಕ್ರಮವು.
 

ಸಾಂತರಕ್ರಮ - ಶಂಖ, ಗದಾ,ಪದ್,ಚಕ್ರವೆಂಬುದೇ ಸಾಂತರ- ಕ್ರಮವು, ಉದಾ
-ಪ್ರದ್ಯುಮ್ನ, ಪ್ರದ್ಯುಮ್ನನ ಬಲಭಾಗದ ಮೇಲಿನ ಕೈಯಲ್ಲಿ ಶಂಖ, ಎಡಭಾಗದ ಮೇಲಿನ
ಕೈಯ್ಯಲ್ಲಿ ಗದೆಯು, ಎಡಭಾಗದ ಕೆಳಗಿನ ಕೈಯ್ಯಲ್ಲಿ ಪದ್ಮವು, ಬಲಭಾಗದ ಕೆಳಗಿನ

ಕೈಯ್ಯಲ್ಲಿ ಚಕ್ರವು.
 

 
ವರ್ಣಗಳ ಪೂರ್ವಾಪರಭಾವ(?) ಕ್ರಮ
 

 
ವರ್ಣಾನಾಂ ದೇವತಾನಾಂ ಚ ನಿತ್ಯತ್ವಾತ್ ನ ಕ್ರಮಃ ಸ್ವತಃ ।

ವ್ಯಕ್ತಿಕ್ರಮಂ ಬ್ರಹ್ಮಬುದ್ಧಾವಪೇಕ್ಷ್ಯ ಕ್ರಮ ಉಚ್ಯತೇ ॥29 ೨೯
 

 
ಅರ್ಥ
 
- ತಾರಾರ್ಣಭೇದಿತಾಃ ಎಂಬಲ್ಲಿ ಹೇಳಿದ ಐವತ್ತು ವರ್ಣ- ಗಳಾಗಲೀ,
ಅವುಗಳ ಅಜಾದಿ ಐವತ್ತು ರೂಪಗಳಾಗಲೀ ಸರ್ವತ್ರ ನಿತ್ಯವೂ ವ್ಯಾಪ್ತವೂ
ಆಗಿರುವುದರಿಂದ ದೈಶಿಕ -ಕಾಲಿಕ ಕ್ರಮ ಹೇಳಲು ಬರುವುದಿಲ್ಲ. ಆದ್ದರಿಂದ
ಅಕಾರವಾದ ಮೇಲೆ ಆಕಾರ ಹುಟ್ಟಿತು ಎಂಬ ಕ್ರಮವನ್ನು ಹೇಳಲು ಬಾರದು.
ಆದರೂ ಯಾವ ವರ್ಣವು ಬ್ರಹ್ಮದೇವರ ಬುದ್ಧಿಯಲ್ಲಿ ಮೊದಲು ಅಭಿವ್ಯಕ್ತ-

ವಾಯಿತೋ ಆ ಕ್ರಮವನ್ನು ಇಟ್ಟುಕೊಂಡು ವರ್ಣ ಹಾಗೂ ವರ್ಣದೇವತೆಗಳಲ್ಲಿ
ಮೊದಲು ಹುಟ್ಟಿದ್ದು ಅನಂತರ ಹುಟ್ಟಿದ್ದು ಎನ್ನಲಾಗಿದೆ.