This page has not been fully proofread.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ
 
ಶಂಖವು, ಎಡಭಾಗದ ಮೇಲಿನ ಕೈಯ್ಯಲ್ಲಿ ಪದವು, ಎಡಭಾಗದ ಕೆಳಕೈಯ್ಯಲ್ಲಿ ಗದೆಯು,
ಬಲಭಾಗದ ಕೆಳ ಕೈಯ್ಯಲ್ಲಿ ಚಕ್ರವು ಹೀಗೆ ವ್ಯತ್ಯಮವು.
 
18
 
ಸಂಕರ್ಷಣನ
 
ಪದ್ಮಾದಿ ವ್ಯತ್ಯಮವೆಂದರೆ ಶಂಖ, ಪದ್ಮ,ಚಕ್ರ, ಗದಾ ಹೀಗೆ, ಉದಾ
ಬಲಭಾಗದ ಮೇಲಿನ ಕೈಯ್ಯಲ್ಲಿ ಶಂಖ, ಎಡಭಾಗದ ಮೇಲಿನ ಕೈಯ್ಯಲ್ಲಿ ಪದ್ಮ,
ಎಡಭಾಗದ ಕೆಳಗಿನ ಕೈಯ್ಯಲ್ಲಿ ಚಕ್ರ, ಬಲಭಾಗದ ಕೆಳಗಿನ ಕೈಯ್ಯಲ್ಲಿ ಗದೆ.
 
ಗದಾದಿ ವ್ಯತಮ - ಶಂಖ, ಗದಾ, ಚಕ್ರ, ಪದ್ಮಹೀಗೆ ಗದಾದಿವ್ಯತಮ. ಉದಾ
ದಾಮೋದರನ ಬಲಭಾಗದ ಮೇಲಿನ ಕೈಯ್ಯಲ್ಲಿ ಶಂಖವು, ಎಡಭಾಗದ ಮೇಲಿನ
ಕೈಯ್ಯಲ್ಲಿ ಗದೆಯು, ಎಡಭಾಗದ ಕೆಳಗಿನ ಕೈಯ್ಯಲ್ಲಿ ಚಕ್ರವು, ಬಲಭಾಗದ ಕೆಳಗಿನ
ಕೈಯ್ಯಲ್ಲಿ ಪದ್ಮವು.
 
ಅರ್ಧಕ್ರಮ
 
ಶಂಖಚಕ್ರಪದ್ಮಗದೆಯು ಅರ್ಧಕ್ರಮವು. ಉದಾ ವಾಸುದೇವ-
ಮೂರ್ತಿಯ ಬಲಭಾಗದ ಮೇಲಿನ ಕೈಯ್ಯಲ್ಲಿ ಶಂಖವು, ಎಡಭಾಗದ ಮೇಲಿನ ಕೈಯ್ಯಲ್ಲಿ
ಚಕ್ರವು, ಎಡಭಾಗದ ಕೆಳಗಿನ ಕೈಯ್ಯಲ್ಲಿ ಪದವು, ಬಲಭಾಗದ ಕೆಳಗಿನ ಕೈಯ್ಯಲ್ಲಿ ಗದೆಯು
ಹೀಗೆ ಅರ್ಧಕ್ರಮವು.
 
ಸಾಂತರಕ್ರಮ - ಶಂಖ, ಗದಾ,ಪದ್ಯ,ಚಕ್ರವೆಂಬುದೇ ಸಾಂತರಕ್ರಮವು, ಉದಾ
ಪ್ರದ್ಯುಮ್ನ, ಪ್ರದ್ಯುಮ್ನನ ಬಲಭಾಗದ ಮೇಲಿನ ಕೈಯಲ್ಲಿ ಶಂಖ, ಎಡಭಾಗದ ಮೇಲಿನ
ಕೈಯ್ಯಲ್ಲಿ ಗದೆಯು, ಎಡಭಾಗದ ಕೆಳಗಿನ ಕೈಯ್ಯಲ್ಲಿ ಪದ್ಮವು, ಬಲಭಾಗದ ಕೆಳಗಿನ
ಕೈಯ್ಯಲ್ಲಿ ಚಕ್ರವು.
 
ವರ್ಣಗಳ ಪೂರ್ವಾಪರಭಾವ(?) ಕ್ರಮ
 
ವರ್ಣಾನಾಂ ದೇವತಾನಾಂ ಚ ನಿತ್ಯತ್ವಾತ್ ನ ಕ್ರಮಃ ಸ್ವತಃ ।
ವ್ಯಕ್ತಿಕ್ರಮಂ ಬ್ರಹ್ಮಬುದ್ಧಾವಪೇಕ್ಷ ಕ್ರಮ ಉಚ್ಯತೇ ॥29॥
 
ಅರ್ಥ
 
ತಾರಾರ್ಣಭೇದಿತಾಃ ಎಂಬಲ್ಲಿ ಹೇಳಿದ ಐವತ್ತು ವರ್ಣಗಳಾಗಲೀ,
ಅವುಗಳ ಅಜಾದಿ ಐವತ್ತು ರೂಪಗಳಾಗಲೀ ಸರ್ವತ್ರ ನಿತ್ಯವೂ ವ್ಯಾಪ್ತವೂ
ಆಗಿರುವುದರಿಂದ ದೈಶಿಕ ಕಾಲಿಕ ಕ್ರಮ ಹೇಳಲು ಬರುವುದಿಲ್ಲ. ಆದ್ದರಿಂದ
ಅಕಾರವಾದ ಮೇಲೆ ಆಕಾರ ಹುಟ್ಟಿತು ಎಂಬ ಕ್ರಮವನ್ನು ಹೇಳಲು ಬಾರದು.
ಆದರೂ ಯಾವ ವರ್ಣವು ಬ್ರಹ್ಮದೇವರ ಬುದ್ಧಿಯಲ್ಲಿ ಮೊದಲು ಅಭಿವ್ಯಕ್ತ-
ವಾಯಿತೋ ಆ ಕ್ರಮವನ್ನು ಇಟ್ಟುಕೊಂಡು ವರ್ಣ ಹಾಗೂ ವರ್ಣದೇವತೆಗಳಲ್ಲಿ
ಮೊದಲು ಹುಟ್ಟಿದ್ದು ಅನಂತರ ಹುಟ್ಟಿದ್ದು ಎನ್ನಲಾಗಿದೆ.