2023-05-05 05:40:02 by jayusudindra
This page has been fully proofread once and needs a second look.
ಶಂಖಚಕ್ರಗದಾಪದ್ಮಧರಾಶ್ಚೈತೇ ಹಿ ಸರ್ವಶಃ।
ಕ್ರಮವ್ಯುತ್ಕ್ರಮಪದ್ಮಾದಿಗದಾದಿವ್ಯುತ್ಕ್ರಮಸ್ತಥಾ ।
ಅರ್ಧಕ್ರಮಃ ಸಾಂತರಶ್ಚ ಷಟ್ಟು ಷಟ್ಸ್ವರಿಪೂರ್ವಿಣಾಮ್ ॥28॥
ಅರ್ಥ – ಶಂಖ, ಚಕ್ರ, ಗದಾ, ಪದ್ಮಧಾರಿಗಳಾದ ಈ ಇಪ್ಪತ್ತನಾಲ್ಕು ಮೂರ್ತಿಗಳ ಲಕ್ಷಣವು ಹೀಗೆ ಪ್ರತ್ಯೇಕವಾಗಿವೆ. ಇವುಗಳಲ್ಲಿ ಶಂಖ, ಚಕ್ರ,ಗದಾ,ಪದ್ಮ ಹೀಗೆ ಕ್ರಮವಾಗಿಯೂ; ಪದ್ಮ,ಗದಾ,ಶಂಖ,ಚಕ್ರ ಹೀಗೆ ವ್ಯುತ್ಕ್ರಮವಾಗಿಯೂ; ಶಂಖ ಹಾಗೂ ಪದ್ಮಾದಿ ವ್ಯುತ್ಕ್ರಮ ವಾಗಿ; ಪದ್ಮ, ಚಕ್ರ, ಗದೆಗಳು, ಗದಾದಿವ್ಯುತ್ಕ್ರಮವಾಗಿ; ಶಂಖ ಹಾಗೂ ಗದಾ,ಚಕ್ರ ಪದ್ಮಗಳು ಅರ್ಧಕ್ರಮವಾಗಿ; ಶಂಖ,ಚಕ್ರ, ಪದ್ಮ, ಗದೆಗಳು ಹಾಗೂ ಗದಾ ಪದ್ಮಗಳನ್ನು ಮಧ್ಯದಲ್ಲಿ ಬರು- ವಂತೆ (ಸಾಂತರ) ಶಂಖ ಗದಾ ಪದ್ಮ ಚಕ್ರಗಳು. ಹೀಗೆ ಆರಾರು ಮೂರ್ತಿಗಳ ನಾಲ್ಕು ಗುಂಪುಗಳೇರ್ಪಡುತ್ತವೆ.[^1]
ವ.ಟೀ.- ಕ್ರಮವ್ಯುತ್ಕ್ರಮ: ಇತ್ಯಸ್ಯಾಯಮರ್ಥಃ - ಶಂಖ, ಚಕ್ರ, ಗದಾ, ಪದ್ಮಮಿತಿ ಕ್ರಮೈಃ । ಶಂಖಪದ್ಮಗದಾಚಕ್ರಮಿತಿ ವ್ಯುತ್ಕ್ರಮಃ। ಶಂಖಪದ್ಮಚಕ್ರಗದೇತಿ ಪದ್ಮಾದಿ ವ್ಯುತ್ಕ್ರಮಃ । ಶಂಖಗದಾಪದ್ಮ- ಚಕ್ರಮಿತಿ ಸಾಂತರಕ್ರಮಃ ಕೇಶವಾದಿಷು ಷಟ್ಸು ಚಕ್ರಪ್ರಮುಖಾ- ನಾಮಯಂ ಕ್ರಮೋ ಜ್ಞೇಯಃ ॥
ಟೀಕಾರ್ಥ - ಕ್ರಮವ್ಯುತ್ಕ್ರಮಃ ಎಂಬ ಮೂಲದಲ್ಲಿರುವ ಪದಗಳಿಗೆ ಈ ರೀತಿ ಅರ್ಥವಾಗುತ್ತದೆ. ಚಕ್ರಶಂಖಗದಾಪದ್ಮ ಹೀಗೆ ಬಲಗೈಯ ಮೇಲಿನ ಕೈಯಿಂದ ಆಯುಧಗಳನ್ನು ಪ್ರದಕ್ಷಿಣಾಕಾರವಾಗಿ ಶಂಖಚಕ್ರಗದಾಪದಗಳನ್ನು ತಿಳಿಯುವುದು ಕ್ರಮವು . ಉದಾ-
ಕೇಶವಮೂರ್ತಿಯ ಬಲಭಾಗದ ಮೇಲಿನ ಕೈಯ್ಯಲ್ಲಿ ಶಂಖ, ಎಡದ ಭಾಗ ಮೇಲಿನ ಕೈಯ್ಯಲ್ಲಿ ಚಕ್ರ, ಎಡಭಾಗದ ಕೆಳಗಿನ ಕೈಯ್ಯಲ್ಲಿ ಗದೆಯು, ಬಲಭಾಗದ ಕೆಳಗೈಯ್ಯಲ್ಲಿ ಪದ್ಮವಿರುವುದು.
ವ್ಯುತ್ಕ್ರಮ - ಮೇಲೆ ಹೇಳಿದ ಕ್ರಮಕ್ಕೆ ವಿರುದ್ಧವಾದ ಕ್ರಮವೇ ವ್ಯುತ್ಕ್ರಮ. ಶಂಖ, ಪದ್ಮ,ಗದಾ ಚಕ್ರವಿರುವುದು ವ್ಯುತ್ಕ್ರಮ. ಮಧುಸೂದನನ ಬಲಭಾಗದ ಮೇಲಿನ ಕೈಯ್ಯಲ್ಲಿ
[^1]. ವಿಶೇಷಾಂಶ - ಚತುರ್ವಿಂಶತಿರೂಪಗಳ ವಿವರಣೆಯು ಅಗ್ನಿ ಪುರಾಣದಲ್ಲಿಯೂ, ಸ್ಕಾಂದಪುರಾಣದ ಕಾಶೀಖಂಡದಲ್ಲಿಯೂ, ವಾದಿರಾಜರ ಚತುರ್ವಿಂಶತಿಸ್ತೋತ್ರದಲ್ಲಿಯೂ,ಕೃಷ್ಣಾಚಾರ್ಯರ ಸ್ಮೃತಿಮುಕ್ತಾವಳಿಯಲ್ಲೂ ನೋಡಬಹುದಾಗಿದೆ. ತಂತ್ರಸಾರದಲ್ಲಿರುವ ಲಕ್ಷಣವಾದರೋ ಅಗ್ನಿಪುರಾಣದಿಂದ ಆಚಾರ್ಯರು ಸ್ವೀಕರಿಸಿರುವಂತಿದೆ. ಪಂಚರಾತ್ರಾಗಮದಲ್ಲಿಯೂ ಇದರ ಉಲ್ಲೇಖ ಬಂದಿದೆ.