This page has not been fully proofread.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 1
 
ಟೀಕಾರ್ಥ - ತಾರಾಷ್ಟಾಕ್ಷರಮಂತ್ರಗಳ
 
ಜಪಕಾಲದಲ್ಲಿ ಧ್ಯಾನಮಾಡುವ ಧೈಯ-
ಅಷ್ಟಾವಪಿ'
 
ಸ್ವರೂಪವನ್ನು 'ಉದ್ಯದ್' ಎಂಬುದರಿಂದ ತಿಳಿಸುವರು. 'ಮೂರ್ತಯೋ
ಎಂಬಲ್ಲಿರುವ ಮೂರ್ತಯಃ ಎಂದರೆ ಪ್ರಣವ- ಅಷ್ಟಾಕ್ಷರವರ್ಣಮೂರ್ತಿಗಳಾದ ವಿಶ್ವಾದಿ
ಎಂಟು ಮೂರ್ತಿಗಳು ಎಂದರ್ಥ.
 
14
 
ಐವತ್ತು ಮಾತೃಕಾಮೂರ್ತಿಗಳ ಸ್ವರೂಪ
 
ಅರ್ಥ
 
ತಾದೃಗ್ರೂಪಾಶ್ಚ ಪಂಚಾಶದ್ ಜ್ಞಾನಮುದ್ರಾಭಯೋದ್ಯತಾಃ ।
ಟಂಕಿ ದಂಡೀ ಚ ಧನ್ವಿ ಚ ತದುಕ್ತಾಸ್ತು ವಾಮತಃ ॥21॥
ಅಜಾದಿ ಐವತ್ತು ಮೂರ್ತಿಗಳೂ ಸಹ ಮೇಲೆ ಹೇಳಿದ ರೂಪ-
ಗಳಂತೆಯೇ ಪ್ರದೀಪವರ್ಣಗಳಾಗಿವೆ. ಹಾಗೂ ಜ್ಞಾನಮುದ್ರೆ, ಅಭಯಮುದ್ರೆಗಳನ್ನು
ಧರಿಸಿವೆ. ಇವುಗಳಲ್ಲಿ ಟಂಕಿ, ದಂಡಿ, ಧನ್ವಿ ಎಂಬ ಮೂರುರೂಪಗಳು ಮಾತ್ರ
ತಮ್ಮ ಎಡಗೈಯ್ಯಲ್ಲಿ ಅಭಯಮುದ್ರೆಯ ಬದಲಾಗಿ ಚೇಣಾಯುಧ, ದಂಡ ಮತ್ತು
ಧನುಸ್ಸನ್ನು ಹಿಡಿದಿವೆ.
 
ವ.ಟೀ - ಪಂಚಾಶನ್ಮೂರ್ತಯಶ್ಚ ಪ್ರದೀಪವರ್ಣಾ ಇತ್ಯಾಹ - ತಾದೃಗ್ರೂಪಾ ಇತಿ ॥
 

 
1. ವಿಶೇಷಾಂಶ ಋಷ್ಯಾದಿನ್ಯಾಸವನ್ನು ಮೊದಲು ಮಾಡಿಕೊಂಡು ಅನಂತರ ಧ್ಯಾನ
 
ಮಾಡಬೇಕು.
 
ಕ್ರಮ ಹೀಗಿದೆ –
 
ಅಸ್ಯ ಶ್ರೀ ಪ್ರಣವಾಷ್ಟಾಕ್ಷರಮಂತ್ರಸ್ಯ ಅಂತರ್ಯಾಮಿ ಋಷಿಃ ಶಿರಸಿ । ದೈವೀ ಗಾಯ
ಛಂದಃ ಮುಖೇ, ಶ್ರೀನಾರಾಯಣೋ ದೇವತಾ ಹೃದಯೇ ಜಪೇ ವಿನಿಯೋಗಃ' ಎಂದು
ಋಷಿನ್ಯಾಸ, ನಂತರ ಉದ್ಯದ್ ಭಾಸ್ವತ್ ಎಂಬ ಧ್ಯಾನಶ್ಲೋಕವನ್ನು ಪಠಿಸಬೇಕು. ಈ ಕ್ರಮ
(ಎಂದರೆ ಋಷಿನ್ಯಾಸ ಮತ್ತು ಧ್ಯಾನಶ್ಲೋಕಪಠಣೆ) ಇತರ ಮಂತ್ರಜಪಗಳಿಗೂ
ಅನ್ವಯವಾಗುತ್ತದೆ.
 
ಆವರಣಪೂಜೆಯೂ ಈ ಧ್ಯಾನಶ್ಲೋಕದಲ್ಲಿ ವಿವರವಾಗಿದೆ ಅದರ ಕ್ರಮ ಹೀಗಿದೆ -
 
ಈ ಧ್ಯಾನಶ್ಲೋಕದಲ್ಲಿ 'ಲಕ್ಷ್ಮೀಧರಾಭ್ಯಾಂ' ಎಂಬುದರಿಂದ ಪ್ರಥಮಾವರಣವನ್ನೂ,
'ಸ್ವಮೂರ್ತಿಗಣಮಧ್ಯಗಃ' ಎನ್ನುವುದರಿಂದ ಕ್ರುದ್ಧೋಲ್ಕಾದಿ ದ್ವಿತೀಯಾವರಣವನ್ನೂ,
ವಾಸುದೇವಾದಿ ತೃತೀಯಾವರಣವನ್ನೂ, ಕೇಶವಾದಿ ನಾಲ್ಕನೇ ಆವರಣವನ್ನೂ, ಮತ್ಯಾದಿ
ಐದನೇ ಆವರಣವನ್ನೂ ತಿಳಿಸಿ, 'ಬ್ರಹ್ಮವಾಯುಶಿವಾಹೀಶವಿಪೈಃ'
ಷಷ್ಠಾವರಣವನ್ನೂ, 'ಶಕ್ರಾದಿಕೈ' ಎಂದು ಇಂದ್ರಾದಿ ಹತ್ತು ದಿಕ್ಷಾಲಕರ ಏಳನೆಯ
ಆವರಣವನ್ನೂ ತಿಳಿಸಲಾಗಿದೆ.
 
ಎಂಬುದರಿಂದ