This page has not been fully proofread.

ಪ್ರಥಮೋಧ್ಯಾಯಃ
 
ಧೈಯದೇವತಾಸ್ವರೂಪ
 
ಉದ್ಯದ್ಯಾಸ್ವತ್ಸಮಾಭಾಸದಾನಂದೈಕದೇಹವಾನ್ ।
ಚಕ್ರಶಂಖಗದಾಪದ್ಮಧರೋ ಧೈಯೋಽಹಮೀಶ್ವರಃ ॥18॥
 
ಲಕ್ಷ್ಮೀಧರಾಭ್ಯಾಮಾಶಿಷ್ಟ ಸ್ವಮೂರ್ತಿಗಣಮಧ್ಯಗಃ ।
ಬ್ರಹ್ಮವಾಯುಶಿವಾಹೀಶವಿಪೈ: ಶಕ್ರಾದಿಕೈರಪಿ
 
॥19॥
 
-
 
13
 
ಸೇವ್ಯಮಾನೋSಧಿಕಂ ಭಕ್ತಾ ನಿತ್ಯ ನಿಃಶೇಷಶಕ್ತಿಮಾನ್ ।
ಮೂರ್ತಯೋಽಷ್ಟಾವಸಿ ಧೈಯಾಶ್ಚಕ್ರಶಂಖವರಾಭಯ್ಯಃ ।
ಯುಕ್ತಾಃ ಪ್ರದೀಪವರ್ಣಾಶ್ಚ ಸರ್ವಾಭರಣಭೂಷಿತಾಃ ॥20॥
ಅರ್ಥ ಉದಯಿಸುವ ಸೂರ್ಯನಂತೆ ಕಾಂತಿಯುಳ್ಳ, ಸಚ್ಚಿದಾನಂದರೂಪಿ-
ಯಾದ, ಚಕ್ರಶಂಖಗದಾಪದ್ಮಗಳನ್ನು ಧರಿಸಿರುವ, ಶ್ರೀದೇವಿಭೂದೇವಿಯಿಂದ
ಆಲಿಂಗಿತನಾಗಿರುವ, ವಿಶ್ವಾದಿ ಎಂಟು ಮೂರ್ತಿಗಳ ಮಧ್ಯೆ ಕುಳಿತಿರುವ, ಬ್ರಹ್ಮ
ವಾಯು, ರುದ್ರಶೇಷಗರುಡ ಇಂದ್ರಾದಿದೇವತೆಗಳಿಂದ ಸೇವ್ಯನಾದ, ನಿತ್ಯವೂ
ಪರಿಪೂರ್ಣಶಕ್ತಿಯುಳ್ಳವನೂ ಆದ ನನ್ನನ್ನು ಭಕ್ತಿಯಿಂದ ಧ್ಯಾನ ಮಾಡಬೇಕು.
ಹಾಗೆಯೇ ದೀಪದಂತೆ ಪ್ರಕಾಶಮಾನಗಳೂ ಸರ್ವಾಭರಣಗಳಿಂದ ಅಲಂಕೃತಗಳೂ,
ಚಕ್ರ ಶಂಖ ವರ ಅಭಯಗಳನ್ನು ಧರಿಸಿರುವವೂ ಆದ ವಿಶ್ವತೈಜಸಾದಿ ಎಂಟು
ಮೂರ್ತಿಗಳನ್ನು ಧ್ಯಾನ ಮಾಡಬೇಕು.
 
ವ.ಟೀ. - ಧೈಯಸ್ವರೂಪಮಾಹ - ಉದ್ಯದಿತಿ ॥ ಮೂರ್ತಯಃ = ಪ್ರಣವಾಷ್ಟಾಕ್ಷರ-
ವರ್ಣಮೂರ್ತಯಃ ।
 
ಏವಮಷ್ಟಾಕ್ಷರೋ ಮಂತ್ರೋ ಧೈಯಃ ಸರ್ವಾರ್ಥಸಾಧಕಃ ॥ ಪಾದ್ಮ2.54-18
ಗಾಯತ್ರೀಛಂದಸ್ಸಿಗೆ ಮುಖ್ಯಾಭಿಮಾನಿ ಲಕ್ಷ್ಮೀದೇವಿಯಾದರೆ ಸರಸ್ವತಿಯೂ ಅಭಿಮಾನಿಯೇ
ಅಭಿಮಾನಿನೀ ತು ಗಾಯಾ: ಮುಖ್ಯಾ ಶ್ರೀಃ ಪರಿಕೀರ್ತಿತಾ ।
ಬ್ರಹ್ಮಾಣೀ ಅಮುಖ್ಯತೋ ಜೇಯಾ .
 
......
 
ಹೀಗೆ ಸರಸ್ವತಿ ಹಾಗೂ ಲಕ್ಷ್ಮೀದೇವಿಯರಿಬ್ಬರಲ್ಲೂ ಗಾಯತ್ರೀಶಬ್ದವಿದ್ದರೂ ಲಕ್ಷ್ಮೀ-
ದೇವಿಯನ್ನೇ ತೆಗೆದುಕೊಳ್ಳಬೇಕೆಂದು ಮದೀಯಾ ಗಾಯತ್ರಿ ಎನ್ನಲಾಗಿದೆ. ಇದನ್ನೇ ದೈವೀ
ಗಾಯತ್ರೀ ಎನ್ನಲಾಗಿದೆ :
 
ಗಾಯತ್ರೀ ಯತ್ರ ದೈವೀ ಸ್ಯಾತ್ ತತ್ರ ಶ್ರೀ ಪರಿಕೀರ್ತಿತಾ ।