This page has not been fully proofread.

ಚತುರ್ಥೋಽಧ್ಯಾಯಃ
 
ಮೊದಲನೆಯ ರೂಪವು ಹನುಮರೂಪವಾಗಿದ್ದು ಶ್ರೀರಾಮನ ಮಾತುಗಳನ್ನು
ಸೀತಾಮಾತೆಗೂ, ಸೀತೆಯ ಮಾತುಗಳನ್ನು ಶ್ರೀರಾಮಚಂದ್ರದೇವನಿಗೂ ತಲುಪಿಸಿ
ರುವಂತಹದು. ಎರಡನೆಯದ್ದಾದ ಭೀಮಸೇನರೂಪವು ಶತ್ರುಗಳಿಗೆ ಅತಿ
ಭಯಂಕರವಾಗಿದ್ದು ಕೌರವಸೇನೆಯನ್ನು ನಾಶಮಾಡಿತು. ಮೂರನೆಯ ಮಧ್ವ-
ರೂಪವಾದರೋ ಶ್ರೀಹರಿಯ ಸರ್ವೋತ್ತಮತ್ವ ಪ್ರತಿಪಾದಕಗ್ರಂಥಗಳನ್ನು ರಚಿಸಿದ್ದು
ಭಗವಂತನಿಗೆ ಆನಂದವುಂಟುಮಾಡುವ ಶಾಸ್ತ್ರರಚನೆಯಿಂದಾಗಿ 'ಮಧ್ಯ' ಎಂದು
ಪ್ರಸಿದ್ಧವಾಗಿದೆ. ಇಂತಹ ಮೂರನೆಯ ಮಧ್ವರೂಪದಿಂದಲೇ ಪರಮಾತ್ಮನ
ಪ್ರೀತಿಗಾಗಿ ಈ ತಂತ್ರಸಾರಸಂಗ್ರಹವೆಂಬ ಗ್ರಂಥವು ರಚಿಸಲ್ಪಟ್ಟಿತು. ಆಪ್ತರಿಂದ
ರಚಿತವಾದ್ದರಿಂದ ಸಜ್ಜನರು ಸ್ವೀಕರಿಸಿ ಉದ್ಧಾರವಾಗಬೇಕು.
 
ಇತಿ
 
ಗ್ರಂಥಸಮಾಪ್ತಿ - ಉತ್ತರಮಂಗಳಾಚರಣೆ
 
ಅಶೇಷದೋಷೋಜ್ಜಿತಪೂರ್ಣಸದ್ಗುಣಂ
 
ಸದಾ ವಿಶೇಷಾಪಗತೋರುರೂಪಮ್ ।
ನಮಾಮಿ ನಾರಾಯಣಮಪ್ರತೀಪಂ
ಸದಾ ಪ್ರಿಯೇಭ್ಯಃ ಪ್ರಿಯಮಾದರೇಣ ॥166॥
 
ಶ್ರೀಮದಾನಂದತೀರ್ಥಭಗವತ್ಪಾದಪ್ರಣೀತಿಮತ್ತಂತ್ರಸಾರಸಂಗ್ರಹ
ಚತುರ್ಥೋಧ್ಯಾಯಃ ॥ ॥ಸಮಾಪ್ಲೋಯಂ ಗ್ರಂಥಃ ॥
 
ಅರ್ಥ
 
ಸಮಸ್ತದೋಷದೂರನೂ, ಸರ್ವಸದ್ಗುಣಭರಿತನೂ, ಸರ್ವದಾ
ಅನಂತಾನಂತರೂಪವುಳ್ಳವನೂ, ಅಪ್ರತಿಮನೂ, ಪ್ರೀತಿ-
ವಿಷಯಗಳಾದ ಸಮಸ್ತವಸ್ತುಗಳಿಗಿಂತಲೂ ಅತ್ಯಂತ ಪ್ರಿಯತಮನೂ
 
ತಾರತಮ್ಯವಿಲ್ಲದ
 
ನಾರಾಯಣನನ್ನು ಅತ್ಯಾದರದಿಂದ ನಮಸ್ಕರಿಸುತ್ತೇನೆ.
 

 
೨೧೭
 
ಇಲ್ಲಿಗೆ ತಂತ್ರಸಾರಸಂಗ್ರಹಸಟೀಕೆಯ ಕನ್ನಡಾನುವಾದದಲ್ಲಿ
ನಾಲ್ಕನೆಯ ಅಧ್ಯಾಯವು ಮುಗಿದುದು
 
।ಶ್ರೀಮಧ್ವಶಾರ್ಪಣಮಸ್ತು ॥