This page has been fully proofread once and needs a second look.

ಚತುರ್ಥೋಽಧ್ಯಾಯಃ
 
ಮುಖ್ಯಮೇಷೈವ ನಾನ್ಯತ್ ಸ್ಯಾತ್ ಸರ್ವಂ ವ್ಯರ್ಥ೦ ತಯಾ ವಿನಾ

ಸೈಕಾಽಪ್ಯಭೀಷ್ಟಫಲದಾ ಮೋಕ್ಷೆಷೋ ದರ್ಶನಯುಕ್ತಯಾ ॥160 ೧೬೦

 
ದರ್ಶನಂ ತು ತಯಾ ಹೀನಂ ವ್ಯರ್ಥಮನ್ಯತ್ ಕಿಮುಚ್ಯತೇ ।

ಯೋಗ್ಯಂ ತು ದರ್ಶನಂ ನೈವ ತಯಾ ಹೀನಂ ಭವಿಷ್ಯತಿ ॥161 ೧೬೧
ಅರ್ಥ
 

ಅರ್ಥ
 
ಅರ್ಥ -
ಸಕಲಮೋಕ್ಷಸಾಧನಗಳಲ್ಲಿಯೂ ಭಕ್ತಿಯೇ ಪ್ರಧಾನ- ಸಾಧನವಾಗಿದೆ.
ಭಕ್ತಿ ಇಲ್ಲದೆ ಬೇರೇನು ಇದ್ದರೂ ಮೋಕ್ಷ ಲಭಿಸ- ಲಾರದು. ಭಗವದ್ಭಕ್ತಿ ಇಲ್ಲದೆ
ಮಾಡಿದ ಕರ್ಮಾದಿಗಳೆಲ್ಲವೂ ವ್ಯರ್ಥವೇ ಸರಿ.
 
೨೧೫
 

 
ಭಕ್ತಿಯಿಲ್ಲದ ಅಪರೋಕ್ಷಜ್ಞಾನವಾದರೂ ಕಲ್ಯಾದಿಗಳಿಗೆ ಭಗವದವತಾರದ
ಅಪರೋಕ್ಷವಾದಂತೆ ವ್ಯರ್ಥವೇ ಆಗುತ್ತದೆ. ಹೀಗೆ ಭಕ್ತಿಯಿಲ್ಲದ ಶಾಸ್ತ್ರಜನ್ಯ
ಅಪರೋಕ್ಷಜ್ಞಾನವೇ ವ್ಯರ್ಥ- ವೆಂದಮೇಲೆ ಕರ್ಮಾದಿಗಳು ವ್ಯರ್ಥವೆಂದು ಹೇಳು-
ವುದೇನು? ಅಷ್ಟೇಕೆ? ಯೋಗ್ಯವಾದ ಸಂಪೂರ್ಣವಾದ ಭಕ್ತಿಯಿಲ್ಲವಾದರೆ

ಭಗವಂತನ ಸಾಕ್ಷಾತ್ಕಾರರೂಪವಾದ ಅಪರೋಕ್ಷಜ್ಞಾನವೂ ಆಗಲಾರದು.
 

 
ಗ್ರಂಥೋಪಸಂಹಾರ
 
ಸಮಸ್ಯೆ:
 

 
ಆನಂದ-ಚಿತ್-ಸದಿತಿಪೂರ್ವಗುಣೈಃ
ಸಮಸ್ತೈಃ
ಮರ್ತ್ಯಾದಿಭಿಃ ವಿಧಿಪರೈ:ರೈಃ ಭಗವಾನ್ ಕ್ರಮೇಣ ।

ಧ್ಯಾತೋSಧಿಕೈರಧಿಗುಣೋSಧಿಕಮೇವ ಸೌಖ್ಯಂ

ಮುಕ್ತೌ ದದಾತಿ ಸತತಂ ಪರಮಸ್ವರೂಪಃ ॥162 ।
 
ಅರ್ಥ
೧೬೨ ॥
 
ಅರ್ಥ-
ಆನಂದ, ಚಿತ್, ಸತ್ ಮೊದಲಾದ ಸಮಸ್ತಗುಣಗಳಿಂದ ಪೂರ್ಣ-
ನಾಗಿರುವ ಭಗವಂತನು ಮನುಷ್ಯರಿಂದಾರಂಭಿಸಿ ಬ್ರಹ್ಮ- ದೇವನ ಪರ್ಯಂತವಾಗಿರುವ
ಎಲ್ಲ ಅಧಿಕಾರಿ ಜೀವರಿಂದಲೂ ಯೋಗ್ಯತಾನುಸಾರವಾಗಿ ಕ್ರಮದಿಂದ
ವೃದ್ಧಿಯಾಗುವ ಬಹುಗುಣ ಗಳಿಂದ ಧ್ಯಾನಿಸಲ್ಪಟ್ಟವನಾಗಿ, ಅವರವರ ಉಪಾಸನೆಗೆ

ಅನುಗುಣವಾಗಿ ತಾರತಮ್ಯಾನುಸಾರವಾಗಿ ಮೋಕ್ಷವನ್ನು ಹಾಗೂ ಮೋಕ್ಷದಲ್ಲಿ
ತಾರತಮ್ಯಾನುಸಾರವಾಗಿಯೇ ಆನಂದಾದಿಗಳನ್ನೂ ದಯಪಾಲಿಸುತ್ತಾನೆ.
 

 
ಗ್ರಂಥದ ಉದ್ದಾಧಾರ ಮತ್ತು ಮಹಿಮೆ
 
-