This page has not been fully proofread.

ಚತುರ್ಥೋಽಧ್ಯಾಯಃ
 
ಮುಖ್ಯಮೇವ ನಾನ್ಯತ್ ಸ್ಯಾತ್ ಸರ್ವಂ ವ್ಯರ್ಥ೦ ತಯಾ ವಿನಾ ।
ಸೈಕಾಽಪ್ಯಭೀಷ್ಟಫಲದಾ ಮೋಕ್ಷೆ ದರ್ಶನಯುಕ್ತಯಾ ॥160॥
ದರ್ಶನಂ ತು ತಯಾ ಹೀನಂ ವ್ಯರ್ಥಮನ್ಯತ್ ಕಿಮುಚ್ಯತೇ ।
ಯೋಗ್ಯಂ ತು ದರ್ಶನಂ ನೈವ ತಯಾ ಹೀನಂ ಭವಿಷ್ಯತಿ ॥161॥
ಅರ್ಥ
 
ಸಕಲಮೋಕ್ಷಸಾಧನಗಳಲ್ಲಿಯೂ ಭಕ್ತಿಯೇ ಪ್ರಧಾನಸಾಧನವಾಗಿದೆ.
ಭಕ್ತಿ ಇಲ್ಲದೆ ಬೇರೇನು ಇದ್ದರೂ ಮೋಕ್ಷ ಲಭಿಸಲಾರದು. ಭಗವದ್ಭಕ್ತಿ ಇಲ್ಲದೆ
ಮಾಡಿದ ಕರ್ಮಾದಿಗಳೆಲ್ಲವೂ ವ್ಯರ್ಥವೇ ಸರಿ.
 
೨೧೫
 
ಭಕ್ತಿಯಿಲ್ಲದ ಅಪರೋಕ್ಷಜ್ಞಾನವಾದರೂ ಕಲ್ಯಾದಿಗಳಿಗೆ ಭಗವದವತಾರದ
ಅಪರೋಕ್ಷವಾದಂತೆ ವ್ಯರ್ಥವೇ ಆಗುತ್ತದೆ. ಹೀಗೆ ಭಕ್ತಿಯಿಲ್ಲದ ಶಾಸ್ತ್ರಜನ್ಯ
ಅಪರೋಕ್ಷಜ್ಞಾನವೇ ವ್ಯರ್ಥವೆಂದಮೇಲೆ ಕರ್ಮಾದಿಗಳು ವ್ಯರ್ಥವೆಂದು ಹೇಳು-
ವುದೇನು? ಅಷ್ಟೇಕೆ? ಯೋಗ್ಯವಾದ ಸಂಪೂರ್ಣವಾದ ಭಕ್ತಿಯಿಲ್ಲವಾದರೆ
ಭಗವಂತನ ಸಾಕ್ಷಾತ್ಕಾರರೂಪವಾದ ಅಪರೋಕ್ಷಜ್ಞಾನವೂ ಆಗಲಾರದು.
 
ಗ್ರಂಥೋಪಸಂಹಾರ
 
ಸಮಸ್ಯೆ:
 
ಆನಂದ-ಚಿತ್-ಸದಿತಿಪೂರ್ವಗುಣೈಃ
ಮರ್ತ್ಯಾದಿಭಿಃ ವಿಧಿಪರೈ: ಭಗವಾನ್ ಕ್ರಮೇಣ ।
ಧ್ಯಾತೋSಧಿಕೈರಧಿಗುಣೋSಧಿಕಮೇವ ಸೌಖ್ಯಂ
ಮುಕ್ತ ದದಾತಿ ಸತತಂ ಪರಮಸ್ವರೂಪಃ ॥162 ।
 
ಅರ್ಥ ಆನಂದ, ಚಿತ್, ಸತ್ ಮೊದಲಾದ ಸಮಸ್ತಗುಣಗಳಿಂದ ಪೂರ್ಣ-
ನಾಗಿರುವ ಭಗವಂತನು ಮನುಷ್ಯರಿಂದಾರಂಭಿಸಿ ಬ್ರಹ್ಮದೇವನ ಪರ್ಯಂತವಾಗಿರುವ
ಎಲ್ಲ ಅಧಿಕಾರಿ ಜೀವರಿಂದಲೂ ಯೋಗ್ಯತಾನುಸಾರವಾಗಿ ಕ್ರಮದಿಂದ
ವೃದ್ಧಿಯಾಗುವ ಬಹುಗುಣಗಳಿಂದ ಧ್ಯಾನಿಸಲ್ಪಟ್ಟವನಾಗಿ, ಅವರವರ ಉಪಾಸನೆಗೆ
ಅನುಗುಣವಾಗಿ ತಾರತಮ್ಯಾನುಸಾರವಾಗಿ ಮೋಕ್ಷವನ್ನು ಹಾಗೂ ಮೋಕ್ಷದಲ್ಲಿ
ತಾರತಮ್ಯಾನುಸಾರವಾಗಿಯೇ ಆನಂದಾದಿಗಳನ್ನೂ ದಯಪಾಲಿಸುತ್ತಾನೆ.
 
ಗ್ರಂಥದ ಉದ್ದಾರ ಮತ್ತು ಮಹಿಮೆ
 
-